ಬೆಂಗಳೂರು ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ ಮಾಡಿದ್ದ ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರು ಸುರಂಗ ಮಾರ್ಗ ಯೋಜನೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಆರೋಪಗಳನ್ನು ತಳ್ಳಿಹಾಕಿದ್ದು, ಯೋಜನೆ ಇನ್ನೂ ಆರಂಭವಾಗಿಲ್ಲ ಎಂದು ಹೇಳಿದ್ದಾರೆ. ತೇಜಸ್ವಿ ಸೂರ್ಯ ಅವರ ಆರೋಪಗಳಿಗೆ ಸರ್ಕಾರ ತೀವ್ರ ಪ್ರತಿಕ್ರಿಯೆ ನೀಡಿದೆ.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಅತಿ ದೊಡ್ಡ ಒಂದು ಉದಾಹರಣೆಯೇ, ಡಿಸಿಎಂ ಡಿಕೆ ಶಿವಕುಮಾರ್ ಅವರ ಬೆಂಗಳೂರು ಸುರಂಗ ಮಾರ್ಗ ರಸ್ತೆ (Bengaluru Tunnel Road Project) ಯೋಜನೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪ ಮಾಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ. ತೇಜಸ್ವಿ ಟೆಕ್ನಿಕಲ್ ಮ್ಯಾನಾ? ಟೆಕ್ನಿಕಲ್ ವರದಿ ಮೇಲೆ ಟನಲ್ ಮಾಡುತ್ತೇವೆ. ಇಲ್ಲ ಅಂದರೆ ಮಾಡಲ್ಲ. ಇನ್ನೂ ಕಾಮಗಾರಿ ಆರಂಭವೇ ಆಗಿಲ್ಲ, ಟೆಂಡರ್ ಕೊಟ್ಟಿಲ್ಲ, ಅದು ಹೇಗೆ ಭ್ರಷ್ಟಾಚಾರ ಆಗುತ್ತದೆ. ಭ್ರಷ್ಟಾಚಾರ ಮಾಡೋರಿಗೆ ಭ್ರಷ್ಟಾಚಾರ ಕಾಣುತ್ತವೆ ಎಂದು ವಾಗ್ದಾಳಿ ಮಾಡಿದರು.