ಗೌರಿ-ಗಣೇಶ ಹಬ್ಬಕ್ಕೆ ಖರೀದಿ ಭರಾಟೆ ಜೋರು: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ; ಟ್ರಾಫಿಕ್​​ ಜಾಮ್​​

Edited By:

Updated on: Sep 13, 2026 | 7:10 AM

ಗೌರಿ-ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಹೂವು, ಹಣ್ಣು ಖರೀದಿಗೆ ಜನಸಂದಣಿ ಹೆಚ್ಚಾಗಿದೆ. ಬೆಳಿಗ್ಗೆ 3 ಗಂಟೆಯಿಂದಲೇ ವ್ಯಾಪಾರ ಭರಾಟೆ ಶುರುವಾಗಿದ್ದು, ಬೆಲೆಗಳು ದುಪ್ಪಟ್ಟಾಗಿದ್ದರೂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಜನರು ಉತ್ಸುಕರಾಗಿದ್ದಾರೆ. ಪೊಲೀಸರು ಜನಸಂದಣಿಯನ್ನು ನಿಯಂತ್ರಿಸುತ್ತಿದ್ದಾರೆ. ಈ ಬಾರಿ ಗೌರಿ ಮತ್ತು ಗಣೇಶ ಹಬ್ಬಗಳು ಒಂದೇ ದಿನ ಬಂದಿರುವುದು ಮತ್ತು ಭಾನುವಾರವೂ ಆಗಿರುವುದು ಜನಸಂದಣಿಗೆ ಮತ್ತಷ್ಟು ಕಾರಣವಾಗಿದೆ.

ಬೆಂಗಳೂರು, ಸೆಪ್ಟೆಂಬರ್​​ 13: ನಾಳೆ ಗೌರಿ-ಗಣೇಶ ಹಬ್ಬ ಹಿನ್ನೆಲೆ ಬೆಂಗಳೂರಿನ ಕೆ.ಆರ್​​. ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಮಧ್ಯರಾತ್ರಿಯಿಂದಲೇ ಭರ್ಜರಿ ವ್ಯಾಪಾರ ನಡೆಯುತ್ತಿದ್ದು, ಹೂವು-ಹಣ್ಣುಗಳು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ. ನಸುಕಿನ 3 ಗಂಟೆಯಿಂದಲೇ ಮಾರುಕಟ್ಟೆ ಚಟುವಟಿಕೆಗಳು ಆರಂಭಗೊಂಡಿದ್ದು, ಜನಸಾಗರವೇ ಹರಿದುಬಂದಿದೆ. ಈ ಬಾರಿ ಗೌರಿ ಮತ್ತು ಗಣೇಶ ಹಬ್ಬಗಳು ಒಂದೇ ದಿನ ಬಂದಿರುವುದು ಮತ್ತು ಭಾನುವಾರವೂ ಆಗಿರುವುದು ಜನಸಂದಣಿಗೆ ಮತ್ತಷ್ಟು ಕಾರಣವಾಗಿದೆ. ಪರಿಣಾಮ ಕೆ.ಆರ್​.ಮಾರ್ಕೆಟ್​​ ಸುತ್ತಮುತ್ತ ಫುಲ್​​​ ಟ್ರಾಫಿಕ್​​​ಜಾಮ್​​ ಉಂಟಾಗಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

 

Published on: Sep 13, 2026 07:06 AM
Loading...
Unable to load recommendations.
Follow Us
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More