ಹಿಂದೂ ಸಂಘಟನೆಗಳು ಮತ್ತು ಎಸ್ ಡಿ ಪಿ ಐ ಹಿಜಾಬ್ ವಿವಾದಕ್ಕೆ ಕುಮ್ಮಕ್ಕು ನೀಡಿದವು: ಸಿದ್ದರಾಮಯ್ಯ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 01, 2022 | 5:48 PM

ಆದರೆ ಹಿಂದೂ ಮಹಾಸಭಾ, ಆರ್ ಎಸ್ ಎಸ್ ಮತ್ತು ವಿಶ್ವ ಹಿಂದೂ ಪರಿಷತ್ ಮೊದಲಾದ ಸಂಘಟನೆಗಳೊಂದಿಗೆ ಸರ್ಕಾರವೂ ಸೇರಿಕೊಂಡು ವಿದ್ಯಾರ್ಥಿಗಳ ಮನಸ್ಸು ಕೆಡಿಸಿದರು ಮತ್ತು ಮುಸ್ಲಿಂ ಸಮುದಾಯದವರನ್ನು ಖಳನಾಯಕನ ಸ್ಥಾನದಲ್ಲಿ ನಿಲ್ಲಿಸಿದರು ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕನಲ್ಲಿ ವಿಧಾನಸಭಾ ಚುನಾಣೆಗೆ (assembly polls) ಇನ್ನೂ ಒಂದು ವರ್ಷ ಇರುವಾಗಲೇ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಸಿದ್ಧತೆಗಳನ್ನು ಆರಂಭಿಸಿವೆ. ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿ (Rahul Gandhi) ಮತ್ತು ಗೃಹ ಸಚಿವ ಅಮಿತ್ ಶಾ (Amit Shah) ಅವರು ಡಾ ಶಿವಕುಮಾರ ಸ್ವಾಮೀಜಿ ಅವರ 115 ನೇ ಜಯಂತ್ಯುತ್ಸವದಲ್ಲಿ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತುಮಕೂರಿಗೆ ಬಂದಿರುವುದು ನಿಜವಾದರೂ ಅದರೊಂದಿಗೆ ಚುನಾವಣಾ ತಯಾರಿ ಅಜೆಂಡಾ ಇಬ್ಬರ ಭೇಟಿಯಲ್ಲೂ ಇದೆ. ರಾಹುಲ್ ಆಗಮನದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಲಾಗಿದ್ದ ಸಭೆಯೊಂದರಲ್ಲಿ ಮಾತಾಡಿದ ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯನವರು ಹಿಜಾಬ್ ವಿಷಯವನ್ನು ಪ್ರಸ್ತಾಪಿಸಿದರು. ಅಸಲಿಗೆ ಅದೊಂದು ವಿವಾದವೇ ಅಲ್ಲ ಸರಕಾರ ಮನಸ್ಸು ಮಾಡಿದ್ದರೆ ಅದನ್ನು ಆರಂಭದಲ್ಲೇ ಇತ್ಯರ್ಥಗೊಳಿಸಬಹುದಾಗಿತ್ತು ಅಂತ ಅವರು ಹೇಳಿದರು.

ಆದರೆ ಹಿಂದೂ ಮಹಾಸಭಾ, ಆರ್ ಎಸ್ ಎಸ್ ಮತ್ತು ವಿಶ್ವ ಹಿಂದೂ ಪರಿಷತ್ ಮೊದಲಾದ ಸಂಘಟನೆಗಳೊಂದಿಗೆ ಸರ್ಕಾರವೂ ಸೇರಿಕೊಂಡು ವಿದ್ಯಾರ್ಥಿಗಳ ಮನಸ್ಸು ಕೆಡಿಸಿದರು ಮತ್ತು ಮುಸ್ಲಿಂ ಸಮುದಾಯದವರನ್ನು ಖಳನಾಯಕನ ಸ್ಥಾನದಲ್ಲಿ ನಿಲ್ಲಿಸಿದರು ಎಂದು ಸಿದ್ದರಾಮಯ್ಯ ಹೇಳಿದರು.

ಹಿಜಾಬ್ ಧರಿಸುವುದು ಶತಮಾನಗಳಿಂದ ನಡೆದುಕೊಂಡು ಬಂದಿದೆ ಮುಸಲ್ಮಾನರಿಗೆ ಅದು ಧಾರ್ಮಿಕ ವಿಧಿ ಹಾಗಾಗಿ ಅದನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಆದರೆ, ಉಡುಪಿಯಲ್ಲಿ ತಲೆದೋರಿದ ಚಿಕ್ಕಘಟನೆ ಸರ್ಕಾರ, ಆರ್ ಎಸ್ ಎಸ್, ಬಜರಂಗದಳ ಮೊದಲಾದವರ ಕುಮ್ಮಕ್ಕಿನಿಂದ ಅದು ಎಲ್ಲೆಡೆ ಹಬ್ಬಿತು. ಎಸ್ ಡಿ ಪಿ ಐ ಕೂಡ ಕುಮ್ಮಕ್ಕು ನೀಡಿದೆ ಎಂದು ಸಿದ್ದರಾಮಯ್ಯ ಹೇಳಿದರು.

ತಪ್ಪಿತಸ್ಥರು ಯಾರೇ ಆಗಿರಲಿ, ಹಿಂದೂ ಸಂಘಟನೆ ಇಲ್ಲವೇ ಮುಸ್ಲಿಂ ಸಂಘಟನೆ- ವಿವಾದ ಸೃಷ್ಟಿಯಾಗಲು ಕಾರಣವಾಗಿದೆ ಅಂತಾದರೆ ಮತ್ತು ನಿಮ್ಮಲ್ಲಿ ತಾಕತ್ತಿದರೆ ಆ ಸಂಘಟನೆಯನ್ನು ಬ್ಯಾನ್ ಮಾಡಿ ಎಂದು ತಾವು ವಿಧಾನಸಭೆಯಲ್ಲೇ ಸರ್ಕಾರಕ್ಕೆ ಸವಾಲು ಹಾಕಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:   ಪತ್ರಕರ್ತರೊಬ್ಬರ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಯೋಗ ಗುರು ರಾಮ್​ದೇವ ಬಾಬಾ; ಅಷ್ಟಕ್ಕೂ ಆಗಿದ್ದೇನು..! ಇಲ್ಲಿದೆ ವೈರಲ್ ವಿಡಿಯೋ