AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ರಕರ್ತರೊಬ್ಬರ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಯೋಗ ಗುರು ರಾಮ್​ದೇವ ಬಾಬಾ; ಅಷ್ಟಕ್ಕೂ ಆಗಿದ್ದೇನು..! ಇಲ್ಲಿದೆ ವೈರಲ್ ವಿಡಿಯೋ

ಪತ್ರಕರ್ತರ ಮತ್ತೇ ಪ್ರಶ್ನೆ ಕೇಳಲು ಮುಂದಾದಾಗ ಪತ್ರಕರ್ತರತ್ತ ಬೊಟ್ಟು ಮಾಡಿದ ರಾಮ್‌ದೇವ್, ನಾನು ಕಾಮೆಂಟ್ ಮಾಡಿದ್ದೇನೆ, ನೀವು ಏನು ಮಾಡುತ್ತೀರಿ? ಸುಮ್ಮನಿರಿ, ನೀವು ಮತ್ತೆ ಕೇಳಿದರೆ, ಅದು ಒಳ್ಳೆಯದಲ್ಲ.

ಪತ್ರಕರ್ತರೊಬ್ಬರ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಯೋಗ ಗುರು ರಾಮ್​ದೇವ ಬಾಬಾ; ಅಷ್ಟಕ್ಕೂ ಆಗಿದ್ದೇನು..! ಇಲ್ಲಿದೆ ವೈರಲ್ ವಿಡಿಯೋ
ಯೋಗ ಗುರು ರಾಮ್‌ದೇವ್ ಬಾಬಾ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Mar 31, 2022 | 11:43 AM

Share

ನವ ದೆಹಲಿ: ಯೋಗ ಗುರು ರಾಮ್‌ದೇವ್ ಬಾಬಾ (RamDev Baba) ತಮ್ಮ ತಾಳ್ಮೆ ಕಳೆದುಕೊಂಡು ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೆಟ್ರೋಲ್ ಬೆಲೆ ಇಳಿಕೆ ಕುರಿತು ಈ ಹಿಂದೆ ಅವರು ಮಾಡಿದ್ದ ಹೇಳಿಕೆಗಳ ಬಗ್ಗೆ ಪರ್ತಕರ್ತರೊಬ್ಬರು ಪ್ರಶ್ನೆ ಕೇಳಿದ್ದಾರೆ. ಹರಿಯಾಣದ ಕರ್ನಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಜನರು ಲೀಟರ್‌ಗೆ ₹ 40 ಗೆ ಪೆಟ್ರೋಲ್ ಮತ್ತು ₹ 300 ಸಿಲಿಂಡರ್‌ಗೆ ಅಡುಗೆ ಅನಿಲವನ್ನು ಖಚಿತಪಡಿಸುವ ಸರ್ಕಾರವನ್ನು ಪರಿಗಣಿಸಬೇಕಾ ಎಂದು ಪತ್ರಕರ್ತರೊಬ್ಬರು ಪತಂಜಲಿ ಬ್ರಾಂಡ್ ಅಂಬಾಸಿಡರ್‌ಗೆ ಮಾಧ್ಯಮಗಳಿಗೆ ನೀಡಿದ ಹೇಳಿಕೆಯ ಬಗ್ಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಮ್‌ದೇವ್, ಹೌದು, ನಾನು ಹೇಳಿದ್ದೇನೆ, ನೀವು ಏನು ಮಾಡುತ್ತಿರಿ? ಇಂತಹ ಪ್ರಶ್ನೆಗಳನ್ನು ಕೇಳಬೇಡಿ.  ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನಾನು ನಿಮ್ಮ ಗುತ್ತಿಗೆದಾರ ಅಲ್ಲ ಎಂದಿದ್ದಾರೆ.

ಪತ್ರಕರ್ತರ ಮತ್ತೇ ಪ್ರಶ್ನೆ ಕೇಳಲು ಮುಂದಾದಾಗ ಪತ್ರಕರ್ತರತ್ತ ಬೊಟ್ಟು ಮಾಡಿದ ರಾಮ್‌ದೇವ್, ನಾನು ಕಾಮೆಂಟ್ ಮಾಡಿದ್ದೇನೆ, ನೀವು ಏನು ಮಾಡುತ್ತೀರಿ? ಸುಮ್ಮನಿರಿ, ನೀವು ಮತ್ತೆ ಕೇಳಿದರೆ, ಅದು ಒಳ್ಳೆಯದಲ್ಲ. ಈ ರೀತಿ ಮಾತನಾಡಬೇಡಿ ನೀನು ಸಭ್ಯ ತಂದೆತಾಯಿಗಳ ಮಗನಾಗಿರಬೇಕು ಎಂದು ತಮ್ಮ ತಾಳ್ಮೆ ಕಳೆದುಕೊಂಡು ಗುಂಡು ಹಾರಿಸಿದ ಹಾಗೇ ಮಾತನಾಡಿದ್ದಾರೆ.

ಕಷ್ಟದ ಸಮಯದಲ್ಲಿ ಜನರು ಹೆಚ್ಚು ಶ್ರಮಿಸುವಂತೆ ರಾಮ್‌ದೇವ್ ಮನವಿ ಮಾಡಿದ್ದಾರೆ. ಸರ್ಕಾರ ಹೇಳುತ್ತದೆ, ಇಂಧನ ಬೆಲೆ ಕಡಿಮೆಯಾದರೆ, ತೆರಿಗೆ ಪಡೆಯುವುದಿಲ್ಲ, ನಂತರ ಅವರು ದೇಶವನ್ನು ಹೇಗೆ ನಡೆಸುತ್ತಾರೆ, ಸಂಬಳ ಪಾವತಿಸುತ್ತಾರೆ, ರಸ್ತೆಗಳನ್ನು ನಿರ್ಮಿಸುತ್ತಾರೆ? ಹೌದು, ಹಣದುಬ್ಬರ ಕಡಿಮೆಯಾಗಬೇಕು, ನಾನು ಒಪ್ಪುತ್ತೇನೆ. ಆದರೆ ಜನರು ಕಷ್ಟಪಟ್ಟು ಕೆಲಸ ಮಾಡಬೇಕು. ನಾನು ಕೂಡ ಬೆಳಿಗ್ಗೆ 4 ಗಂಟೆಗೆ ಎದ್ದು ರಾತ್ರಿ 10 ಗಂಟೆಯವರೆಗೆ ಕೆಲಸ ಮಾಡುತ್ತೇನೆ ಎಂದರು. ರಾಮ್‌ದೇವ್ ಅವರ ಸುತ್ತಲೂ ಕುಳಿತಿದ್ದ ಅವರ ಬೆಂಬಲಿಗರು ಚಪ್ಪಾಳೆ ತಟ್ಟಿದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಬುಧವಾರ ಪ್ರತಿ ಲೀಟರ್‌ಗೆ ತಲಾ 80 ಪೈಸೆ ಹೆಚ್ಚಿಸಲಾಗಿದ್ದು, ಕಳೆದ ಒಂಬತ್ತು ದಿನಗಳಲ್ಲಿ ಒಟ್ಟು ದರಗಳು ಲೀಟರ್‌ಗೆ ₹ 5.60 ಕ್ಕೆ ಏರಿಕೆಯಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈ ಹಿಂದೆ ₹ 100.21 ಕ್ಕೆ ಹೋಲಿಸಿದರೆ ₹ 101.01 ಆಗಿದೆ. ಆದರೆ ಡೀಸೆಲ್ ದರಗಳು ಲೀಟರ್‌ಗೆ ₹ 91.47 ರಿಂದ ₹ 92.27 ಕ್ಕೆ ಏರಿದೆ ಎಂದು ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆ ತಿಳಿಸಿದೆ. ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ತೀವ್ರ ದಾಳಿಗೆ ಗುರಿಯಾಗಿದೆ. ಹಿಂದಿನ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ ಸರ್ಕಾರವು ಹಲವಾರು ವರ್ಷಗಳಿಂದ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಿದ್ದರೂ ಇಂಧನ ದರವನ್ನು ನಿಯಂತ್ರಣದಲ್ಲಿಡಲು ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಇದನ್ನೂ ಓದಿ:

ಮಧ್ಯಪ್ರದೇಶದಲ್ಲಿ ಎರಡು ತಲೆ, ಮೂರು ಕೈಗಳು ಹೊಂದಿರುವ ಭಾಹಶಃ ಅವಳಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ