ಮಧ್ಯಪ್ರದೇಶದಲ್ಲಿ ಎರಡು ತಲೆ, ಮೂರು ಕೈಗಳು ಹೊಂದಿರುವ ಭಾಹಶಃ ಅವಳಿ ಮಗುವಿಗೆ ಜನ್ಮ ನೀಡಿದ ಮಹಿಳೆ
ಈ ಸ್ಥಿತಿಯನ್ನು ಪ್ಯಾರಾಪಾಗಸ್ ಡೈಸೆಫಾಲಸ್ ಎಂದೂ ಕರೆಯುತ್ತಾರೆ. ಹೆಚ್ಚಿನ ಡೈಸೆಫಾಲಿಕ್ ಅವಳಿಗಳು ಸತ್ತೇ ಹುಟ್ಟುತ್ತವೆ, ಅಥವಾ ಹುಟ್ಟಿದ ಕೂಡಲೇ ಸಾಯುತ್ತವೆ.
ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಮಹಿಳೆಯೊಬ್ಬರು ಬುಧವಾರ (ಮಾರ್ಚ್ 30) ಎರಡು ತಲೆ ಮತ್ತು ಮೂರು ಕೈಗಳನ್ನು ಹೊಂದಿರುವ ಮಗುವಿಗೆ ಜನ್ಮ ನೀಡಿದ್ದಾರೆ. ಆಂಶಿಕ ಅವಳಿಗಳ ಅಪರೂಪದ ಡೈಸೆಫಾಲಿಕ್ ಪ್ಯಾರಾಪಾಗಸ್ (Dicephalic Parapagus) ಎಂಬ ಸ್ಥಿತಿಯಿಂದ ಮಗು ಬಳಲುತ್ತಿದೆ. ಇಂದೋರ್‌ನ ಎಂ.ವೈ ಆಸ್ಪತ್ರೆಯ ಡಾ. ಬ್ರಜೇಶ್ ಲಹೋಟಿ ಮಗು ಪ್ರಸ್ತುತ ಸ್ಥಿರ ವ್ಯವಸ್ಥೆಯಲ್ಲಿದೆ ಎಂದು ಹೇಳಿದ್ದಾರೆ. ಡೈಸೆಫಾಲಿಕ್ ಪ್ಯಾರಾಪಾಗಸ್ ಅಥವಾ ಭಾಗಶಃ ಅವಳಿ ಎಂದರೇ, ಡೈಸೆಫಾಲಿಕ್ ಪ್ಯಾರಾಪಾಗಸ್ ಒಂದು ಮುಂಡದ ಮೇಲೆ ಎರಡು ತಲೆಗಳನ್ನು ಅಕ್ಕಪಕ್ಕದಲ್ಲಿ ಹೊಂದಿರುವ ಅಪರೂಪದ ಭಾಗಶಃ ಅವಳಿ ರೂಪವಾಗಿದೆ. ಈ ರೀತಿಯಲ್ಲಿ ಸಂಯೋಜಿತ ಶಿಶುಗಳನ್ನು ಕೆಲವೊಮ್ಮೆ ಎರಡು ತಲೆಯ ಶಿಶುಗಳು ಎಂದು ಕರೆಯಲಾಗುತ್ತದೆ. ಈ ಸ್ಥಿತಿಯನ್ನು ಪ್ಯಾರಾಪಾಗಸ್ ಡೈಸೆಫಾಲಸ್ ಎಂದೂ ಕರೆಯುತ್ತಾರೆ. ಹೆಚ್ಚಿನ ಡೈಸೆಫಾಲಿಕ್ ಅವಳಿಗಳು ಸತ್ತೇ ಹುಟ್ಟುತ್ತವೆ, ಅಥವಾ ಹುಟ್ಟಿದ ಕೂಡಲೇ ಸಾಯುತ್ತವೆ.
ಕಡಿಮೆ ಪ್ರಮಾಣದಲ್ಲಿ ಇಂತಹ ಶಿಶುಗಳು ಪ್ರೌಢಾವಸ್ಥೆಯವರೆಗೆ ಉಳಿದುಕೊಳ್ಳುತ್ತವೆ ಎಂದು ತಿಳಿದುಬಂದಿದೆ. ಈ ರೀತಿಯ ಭಾಗಶಃ ಅವಳಿಗಳು 50,000 ರಲ್ಲಿ 100,000 ಜನನದ ಒಂದರಲ್ಲಿ ಕಾಣಿಸಿಕೊಳ್ಳುತ್ತವೆ. ಡೈಸೆಫಾಲಿಕ್ ಅವಳಿಗಳು ಎಲ್ಲಾ ಸಂಯೋಜಿತ ಅವಳಿಗಳಲ್ಲಿ ಸುಮಾರು 11 ಪ್ರತಿಶತವನ್ನು ಪ್ರತಿನಿಧಿಸುತ್ತವೆ.
ಅಂಗಗಳು ಮತ್ತು ಅಂಗಗಳ ನಕಲು ಪ್ರಮಾಣವು ಪ್ರಕರಣದಿಂದ ಪ್ರಕರಣಕ್ಕೆ ಬದಲಾಗುತ್ತದೆ. ಒಂದು ತಲೆಯು ಕೇವಲ ಭಾಗಶಃ ಅಭಿವೃದ್ಧಿಯಾಗಿರಬಹುದು (ಅನೆನ್ಸ್‌ಫಾಲಿಕ್), ಅಥವಾ ಎರಡೂ ಪೂರ್ಣವಾಗಿರಬಹುದು. ಕೆಲವು ಸಂದರ್ಭಗಳಲ್ಲಿ, ಎರಡು ಸಂಪೂರ್ಣ ಹೃದಯಗಳು ಸಹ ಇರುತ್ತವೆ. ಇದು ಅವರ ಬದುಕುಳಿಯುವ ಸಾಧ್ಯತೆಗಳಿರುತ್ತವೆ. ಒಟ್ಟು ತೋಳುಗಳ ಸಂಖ್ಯೆ ಎರಡು, ಮೂರು ಅಥವಾ ನಾಲ್ಕು ಆಗಿರಬಹುದು.
ಇದನ್ನೂ ಓದಿ:
viral video: ಕೊಳದಲ್ಲಿ ಮೊಸಳೆಯನ್ನು ತಬ್ಬಿಕೊಂಡು ಡ್ಯಾನ್ಸ್ ಮಾಡಿದ ಭೂಪ; ಶಾಕಿಂಗ್ ವಿಡಿಯೋ ವೈರಲ್
viral video: ಇದು ಮುಖವಾಡವೋ ಅಥವಾ ಗಡ್ಡವೋ..! ಗೊಂದಕ್ಕೀಡಾದ ಸಭಾಪತಿ ವೆಂಕಯ್ಯ ನಾಯ್ಡು
Published On - 10:55 am, Thu, 31 March 22