ಗುಜರಾತಿ ಜಾನಪದ ಗಾಯಕಿ ಗೀತಾಬೆನ್ ರಬಾರಿ ಹಾಡಿಗೆ ಡಾಲರ್​ಗಳ ಸುರಿಮಳೆ; ಉಕ್ರೇನ್​ಗಾಗಿ ಸಂಗ್ರಹವಾಯಿತು 2.25 ಕೋಟಿ ರೂ.

ಬೃಹತ್ ಪ್ರೇಕ್ಷಕರ ಮುಂದೆ ಗೀತಾಬೆನ್ ಪ್ರದರ್ಶನ ನೀಡುತ್ತಿದ್ದಂತೆ, ಎನ್‌ಆರ್‌ಐ ಉಕ್ರೇನ್‌ಗೆ ಕೊಡುಗೆಯಾಗಿ ಡಾಲರ್‌ಗಳ ಸುರಿಮಳೆಯನ್ನೇ ಸುರಿಸಲಾಗಿದೆ.

ಗುಜರಾತಿ ಜಾನಪದ ಗಾಯಕಿ ಗೀತಾಬೆನ್ ರಬಾರಿ ಹಾಡಿಗೆ ಡಾಲರ್​ಗಳ ಸುರಿಮಳೆ; ಉಕ್ರೇನ್​ಗಾಗಿ ಸಂಗ್ರಹವಾಯಿತು 2.25 ಕೋಟಿ ರೂ.
ಜಾನಪದ ಗಾಯಕಿ ಗೀತಾಬೆನ್ ರಬರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Mar 31, 2022 | 1:54 PM

ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭಿಸಿದಾಗಿನಿಂದ, ಜಗತ್ತು ದೇಶದೊಂದಿಗೆ ಒಗ್ಗಟ್ಟಿನಿಂದ ನಿಂತಿದೆ. ಉಕ್ರೇನ್‌ಗಾಗಿ ದೇಣಿಗೆ ಸಂಗ್ರಹಿಸಲು ಅನೇಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಒಗ್ಗೂಡಿವೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುವ ಅನೇಕ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಸಹ ಈ ಕಾರ್ಯಕ್ಕೆ ಕೊಡುಗೆ ನೀಡಿದ್ದು, ಸಾಕಷ್ಟು ಹಣವನ್ನು ಸಂಗ್ರಹಿಸಿದ್ದಾರೆ. ಭಾನುವಾರ, ಗುಜರಾತಿ ಅನಿವಾಸಿ ಭಾರತೀಯರು ಉಕ್ರೇನ್‌ಗೆ ನಿಧಿ ಸಂಗ್ರಹಿಸಲು ಅಟ್ಲಾಂಟಾದಲ್ಲಿ ಲಾಲ್ ಡೇರೊ ಎಂಬ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದು, ಜಾನಪದ ಗಾಯಕಿ ಗೀತಾಬೆನ್ ರಬರಿ (Geetaben Rabari) ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ಬೃಹತ್ ಪ್ರೇಕ್ಷಕರ ಮುಂದೆ ಗೀತಾಬೆನ್ ಪ್ರದರ್ಶನ ನೀಡುತ್ತಿದ್ದಂತೆ, ಎನ್‌ಆರ್‌ಐ ಉಕ್ರೇನ್‌ಗೆ ಕೊಡುಗೆಯಾಗಿ ಡಾಲರ್‌ಗಳ ಸುರಿಮಳೆಯನ್ನೇ ಸುರಿಸಲಾಗಿದೆ. ಕಾರ್ಯಕ್ರಮದ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗಾಯಕಿಯ ಪ್ರದರ್ಶನ ನೀಡಿವ ವೇದಿಕೆಯ ಸುತ್ತಲೂ ಡಾಲರ್​ಗಳ ರಾಶಿಯನ್ನು ಕಾಣಬಹುದಾಗಿದೆ. ವರದಿಗಳ ಪ್ರಕಾರ, ಗೀತಾಬೆನ್ ಉಕ್ರೇನ್ ಜನರಿಗಾಗಿ $300,000 ಅಂದರೇ  ₹ 2.25 ಕೋಟಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.

ಅಟ್ಲಾಂಟಾ, ಜಾರ್ಜಿಯಾ, ಯುಎಸ್ಎನಲ್ಲಿಯೂ ಲೈವ್ ಪ್ರೇಕ್ಷಕರಿಗಾಗಿ ಲೋಕ್ ಡೇರೊ ಪ್ರದರ್ಶನವನ್ನು ಹೊಂದಿದ್ದೇವೆ. ನಿಮ್ಮೆಲ್ಲರೊಂದಿಗೆ ಕೆಲವು ಆಧ್ಯಾತ್ಮಿಕ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಅವರು ಫೋಟೋಗಳಿಗೆ ಶೀರ್ಷಿಕೆ ನೀಡಿದ್ದಾರೆ. ಫೋಟೋಗಳು ವೈರಲ್ ಆಗುತ್ತಿದ್ದಂತೆ, ಜನರು ಗಾಯಕಿಯನ್ನು ಮತ್ತು ಉಕ್ರೇನ್‌ಗೆ ಸಹಾಯ ಮಾಡಲು ಎನ್‌ಆರ್‌ಐ ಸಮುದಾಯದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರರು ಇಷ್ಟು ಉದಾರವಾಗಿ ದೇಣಿಗೆ ನೀಡಿದ ಗುಜರಾತಿ ಭ್ರಾತೃತ್ವಕ್ಕೆ ಹ್ಯಾಟ್ಸಾಫ್ ಎಂದು ಬರೆದುಕೊಂಡಿದ್ದಾರೆ.

ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಹೈಕಮಿಷನರ್ ಫಿಲಿಪ್ಪೊ ಗ್ರಾಂಡಿ ಪ್ರಕಾರ, 10 ಮಿಲಿಯನ್‌ಗಿಂತಲೂ ಹೆಚ್ಚು ಉಕ್ರೇನಿಯನ್ನರು ಯುದ್ಧದಿಂದ ಸ್ಥಳಾಂತರಗೊಂಡಿದ್ದಾರೆ. 3.5 ಮಿಲಿಯನ್ ಜನರು ಈಗಾಗಲೇ ದೇಶವನ್ನು ತೊರೆದಿದ್ದಾರೆ ಮತ್ತು 6.5 ಮಿಲಿಯನ್ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ:

ಪತ್ರಕರ್ತರೊಬ್ಬರ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಯೋಗ ಗುರು ರಾಮ್​ದೇವ ಬಾಬಾ; ಅಷ್ಟಕ್ಕೂ ಆಗಿದ್ದೇನು..! ಇಲ್ಲಿದೆ ವೈರಲ್ ವಿಡಿಯೋ

Published On - 1:51 pm, Thu, 31 March 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್