Ostrich Facts: ಜಗತ್ತಿನಲ್ಲಿ ವೇಗವಾಗಿ ಓಡುವ ಪಕ್ಷಿ ಇದು! ಇಲ್ಲಿದೆ ಆಸ್ಟ್ರಿಚ್ ಕುರಿತ ಅಚ್ಚರಿಯ ವಿಚಾರಗಳು

Ostrich Details: ಆಸ್ಟ್ರಿಚ್ ವಿಶ್ವದ ಅತ್ಯಂತ ವೇಗವಾಗಿ ಓಡುವ ಪಕ್ಷಿಯಾಗಿದೆ. ಗಾಳಿಯಲ್ಲಿ ಹಾರಲು ಸಾಧ್ಯವಾಗದಿದ್ದರೂ ಜಿಗಿಯುವ ಮೂಲಕ 3 ರಿಂದ 5 ಮೀಟರ್ ದೂರವನ್ನು ಕ್ರಮಿಸಬಲ್ಲದು. ಇದರ ಮೊಟ್ಟೆಯನ್ನು ಎರಡು ಕೈಗಳಲ್ಲಿ ಹಿಡಿಯುವಷ್ಟು ದೊಡ್ಡದಾಗಿರುತ್ತದೆ. ಅತ್ಯಂತ ದೊಡ್ಡ ಕಣ್ಣುಗಳನ್ನೂ ಇವು ಹೊಂದಿವೆ.

shivaprasad.hs
|

Updated on: Mar 31, 2022 | 10:08 AM

ಆಸ್ಟ್ರಿಚ್ ವಿಶ್ವದ ಅತ್ಯಂತ ವೇಗವಾಗಿ ಓಡುವ ಪಕ್ಷಿಯಾಗಿದೆ. ಗಾಳಿಯಲ್ಲಿ ಹಾರಲು ಸಾಧ್ಯವಾಗದಿದ್ದರೂ ಜಿಗಿಯುವ ಮೂಲಕ 3 ರಿಂದ 5 ಮೀಟರ್ ದೂರವನ್ನು ಒಂದೇ ಕ್ಷಣಕ್ಕೆ ಕ್ರಮಿಸಬಲ್ಲದು. ಇದು ತುಂಬಾ ವೇಗವಾಗಿ ಓಡುತ್ತದೆ. ಗಂಟೆಗೆ ಸರಾಸರಿ 75 ಕಿಲೋಮೀಟರ್ ವೇಗದಲ್ಲಿ ಇದು ಕ್ರಮಿಸುತ್ತದೆ ಎಂದರೆ ನಿಮಗೆ ಅಚ್ಚರಿಯಾಗಲೇಬೇಕು!

1 / 5
ಬ್ರಿಟಿಷ್ ಮೂಲದ ಅಧ್ಯಯನ ವರದಿಗಳ ಪ್ರಕಾರ, ಆಸ್ಟ್ರಿಚ್ ವಿಶ್ವದ ಅತಿದೊಡ್ಡ ಮೊಟ್ಟೆಯನ್ನು ಇಡುತ್ತದೆ. ಇದರ ಮೊಟ್ಟೆಯು 6 ಇಂಚು ಉದ್ದ ಮತ್ತು 5 ಮೀಟರ್ ವ್ಯಾಸವನ್ನು ಹೊಂದಿದೆ. ಈ ಮೊಟ್ಟೆ ಎಷ್ಟು ದೊಡ್ಡದಿರುತ್ತದೆಂದರೆ ಅದನ್ನು ಎರಡು ಕೈಗಳಲ್ಲಿ ಹಿಡಿಯಬೇಕು!

2 / 5
ನ್ಯಾಷನಲ್ ಜಿಯಾಗ್ರಫಿಕ್ ವರದಿಯ ಪ್ರಕಾರ, ಆಸ್ಟ್ರಿಚ್ ಅತ್ಯಂತ ಎತ್ತರದ ಮತ್ತು ಭಾರವಾದ ಪಕ್ಷಿಯಾಗಿದೆ. ಗಂಡು ಆಸ್ಟ್ರಿಚ್ 9 ಅಡಿ ಉದ್ದ ಬೆಳೆಯುತ್ತದೆ. ಹೆಣ್ಣು ಆಸ್ಟ್ರಿಚ್ 6 ಅಡಿಗಳವರೆಗೆ ಬೆಳೆಯುತ್ತದೆ. ಇದರ ತೂಕ 100 ರಿಂದ 150 ಕೆಜಿ ವರೆಗೆ ಇರುತ್ತದೆ. ಇದು ಸಸ್ಯಗಳು, ಕೀಟಗಳು ಮತ್ತು ಸಣ್ಣ ಜೀವಿಗಳನ್ನು ಮಾತ್ರ ತಿನ್ನುತ್ತದೆ.

3 / 5
ಹಾರದ ಆಸ್ಟ್ರಿಚ್​ಗಳಿಗೆ ರೆಕ್ಕೆ ಏಕಿದೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಆಸ್ಟ್ರಿಚ್​ ಪಕ್ಷಿಗಳಿಗೆ ಹಾರಲು ಸಾಧ್ಯವಾಗುವುದಿಲ್ಲ, ನಿಜ. ಆದರೆ ಅವುಗಳು ದಿಕ್ಕನ್ನು ಬದಲಾಯಿಸಲು ತಮ್ಮ ರೆಕ್ಕೆಗಳನ್ನು ಬಳಸುತ್ತದೆ. ಅಚ್ಚರಿಯ ವಿಷಯವೆಂದರೆ ಪಕ್ಷಿಗಳ ಪಾದಗಳು ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ಬೆರಳುಗಳನ್ನು ಹೊಂದಿರುತ್ತವೆ. ಆದರೆ ಆಸ್ಟ್ರಿಚ್ ಕೇವಲ 2 ಬೆರಳುಗಳನ್ನು ಹೊಂದಿದೆ. ಆಸ್ಟ್ರಿಚ್ ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳಿಗಿಂತ ದೊಡ್ಡ ಕಣ್ಣುಗಳನ್ನು ಹೊಂದಿದೆ.

4 / 5
ಆಸ್ಟ್ರಿಚ್ ಅತ್ಯಂತ ಶಾಂತ ಪಕ್ಷಿ. ಆದರೆ ಆತ್ಮರಕ್ಷಣೆಯ ವಿಷಯಕ್ಕೆ ಬಂದಾಗ ಅದು ತನ್ನ ಕಾಲುಗಳನ್ನು ಬಳಸುತ್ತದೆ. ಇದರ ಉದ್ದವಾದ ಕಾಲುಗಳು ತುಂಬಾ ಶಕ್ತಿಯುತವಾಗಿವೆ. ಅವು ಎಷ್ಟು ಬಲಶಾಲಿಯೆಂದರೆ ಒಂದೇ ಏಟಿಗೆ ಮನುಷ್ಯ ಸಾಯಲೂಬಹುದು.

5 / 5
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ