ಬಾಗಪ್ಪ ಹರಿಜನ್ ಕುಡಿಯುತ್ತಿರಲಿಲ್ಲ ಅದರೆ ಅವನೊಬ್ಬ ಸ್ತ್ರೀಲೋಲನಾಗಿದ್ದ: ರವೀಂದ್ರ, ನಿವೃತ್ತ ಡಿವೈಎಸ್ಪಿ
ಬಾಗಪ್ಪ ಮೇಲೆ 2018ರಲ್ಲಿ ಗುಂಡಿನ ದಾಳಿ ನಡೆದು ಅವನನ್ನು ಚಿಕಿತ್ಸೆಗೆ ಅಂತ ಹೈದರಾಬಾದ್ಗೆ ಕರೆದೊಯ್ದಾಗ ರವೀಂದ್ರ ಅವರು ಆಳಂದ್ (ಕಲಬುರಗಿ) ಡಿವೈಎಸ್ಪಿ ಆಗಿದ್ದರಂತೆ. ಅವನು ಟ್ರೀಟ್ಮೆಂಟ್ ಪಡೆದು ವಾಪಸ್ಸು ಬಂದಾಗ ಲೊಕೇಷನ್ ಬಸವಕಲ್ಯಾಣ ತಾಲ್ಲೂಕಿನ ಯಾವುದೋ ಹಳ್ಳಿಯನ್ನು ತೋರಿಸುತಿತ್ತು, ಚಿಕಿತ್ಸೆಗಾಗಿ ಅವನು ಸುಮಾರು ಒಂದು ಕೋಟಿ ರೂ. ಖರ್ಚು ಮಾಡಿದ್ದ ಎಂದು ರವೀಂದ್ರ ಹೇಳುತ್ತಾರೆ.
ಬಾಗಲಕೋಟೆ: ಕೊಲೆಯಾದ ಕುಖ್ಯಾತ ರೌಡಿ ಬಾಗಪ್ಪ ಹರಿಜನ್ ಶೋಕಿಲಾಲನೇ? ನಿವೃತ್ತ ಡಿವೈಎಸ್ಪಿ ರವೀಂದ್ರ ಅವರು ಹೇಳುವ ಪ್ರಕಾರ ಬಾಗಪ್ಪನಿಗೆ ಬಂಗಾರದ ಮೇಲೆ ಮತ್ತು ಹೆಣ್ಣಿನ ಮೇಲೆ ಜಾಸ್ತಿ ಒಲವಿತ್ತು, ಅವನೊಬ್ಬ ಸ್ತ್ರೀಲೋಲ. ಸಾಮಾನ್ಯವಾಗಿ ಹೆಣ್ಣುಗಳ ಆಸೆ ಇರುವವರಿಗೆ ಹೆಂಡದ ಚಟವೂ ಇರುತ್ತದೆ. ಅದರೆ ಬಾಗಪ್ಪ ಕುಡುಕನಾಗಿರಲಿಲ್ಲ, ಮದ್ಯದಿಂದ ಅವನು ದೂರವಿದ್ದ ಅದರೆ ಊಟದ ಬಗ್ಗೆ ವಿಶೇಷ ಒಲವು ತಳೆದಿದ್ದ ಎಂದು ರವೀಂದ್ರ ಹೇಳುತ್ತಾರೆ. ತಾನು ಎಲ್ಲಿದ್ದೇನೆ ಎನ್ನುವ ಸುಳಿವು ಅವನು ಯಾವತ್ತೂ ನೀಡುತ್ತಿರಲಿಲ್ಲ, ವಿಜಯಪುರದಲ್ಲಿದ್ದರೆ ಮತ್ತೆಲ್ಲೋ ಇದ್ದೇನೆ ಅಂತ ಹೇಳುತ್ತಿದ್ದನಂತೆ. ಈ ಹಿನ್ನೆಲೆಯಲ್ಲಿ ಅವನ ಲೊಕೋಶನ್ ಪತ್ತೆಮಾಡುವಲ್ಲಿ ಹಂತಕರು ಉತ್ತಮ ಪ್ಲ್ಯಾನ್ ಮಾಡಿದ್ದಾರೆಂದೇ ಹೇಳಬೇಕು ಎಂದು ರವೀಂದ್ರ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹುಟ್ಟೂರು ಬ್ಯಾಡಗಿಹಾಳ್ನ ತನ್ನ ಜಮೀನಲ್ಲಿ ಕುಖ್ಯಾತ ರೌಡಿಶೀಟರ್ ಬಾಗಪ್ಪ ಹರಿಜನ್ ಅಂತ್ಯಕ್ರಿಯೆ