ಹುಟ್ಟೂರು ಬ್ಯಾಡಗಿಹಾಳ್ನ ತನ್ನ ಜಮೀನಲ್ಲಿ ಕುಖ್ಯಾತ ರೌಡಿಶೀಟರ್ ಬಾಗಪ್ಪ ಹರಿಜನ್ ಅಂತ್ಯಕ್ರಿಯೆ
ಬಾಗಪ್ಪ ಹರಿಜನ್ ಹುಟ್ಟೂರು ಬ್ಯಾಡಗಿಹಾಳ್ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ. ಅವನ ದೇಹ ಊರು ತಲುಪುವ ಮೊದಲು ಅಲ್ಲಿ ನೀರವ ಮೌನ ಅವರಿಸಿತ್ತು. ಅವನ ಮನೆಯ ಮುಂದೆ ಒಂದಷ್ಟು ಓಡಾಡಿಕೊಂಡಿದ್ದರಾದರೂ ಎಲ್ಲರ ಮುಖದಲ್ಲೂ ಪ್ರೇತಕಳೆ. ಬಾಗಪ್ಪ ಹರಿಜನ್ ಇಷ್ಟು ಬೇಗ ಸತ್ತಾನು, ದುರಂತ ಸಾವು ಕಂಡಾನು ಅಂತ ಪ್ರಾಯಶಃ ಅವರ್ಯಾರೂ ಭಾವಿಸಿರಲಿಲ್ಲ ಅನಿಸುತ್ತದೆ.
ವಿಜಯಪುರ: ನಿನ್ನೆ ರಾತ್ರಿ ವಿಜಯಪುರದಲ್ಲಿ ಹಂತಕರ ಮಾರಕಾಸ್ತ್ರಗಳಿಗೆ ಬಲಿಯಾದ ನಟೋರಿಯಸ್ ರೌಡಿಶೀಟರ್ ಬಾಗಪ್ಪ ಹರಿಜನ್ ಅಂತ್ಯಕ್ರಿಯೆ ಅವನ ಹುಟ್ಟೂರು ಬ್ಯಾಡಗಿಹಾಳದದಲ್ಲಿ ನಡೆಯಿತು. ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಹುಟ್ಟೂರಲ್ಲಿ ಬಾಗಪ್ಪ ಖರೀದಿಸಿದ ಜಮೀನಿನಲ್ಲೇ ಅಂತ್ಯಸಂಸ್ಕಾರಕ್ಕೆ ಏರ್ಪಾಟು ಮಾಡಲಾಗಿತ್ತು. ವಿಜಯಪುರದ ಬಿಎಲ್ಡಿಈಎ ಮೆಡಿಕಲ್ ಕಾಲೇಜಿನ ಶವಾಗಾರದಿಂದ ಬಾಗಪ್ಪನ ಪಾರ್ಥೀವ ಶರೀರವನ್ನು ಅಂಬ್ಯುಲೆನ್ಸ್ ಒಂದರಲ್ಲಿ ಬ್ಯಾಡಗಿಹಾಳ್ಗೆ ತರಲಾಯಿತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಾಗಪ್ಪ ಹರಿಜನ್ ಪ್ರೀತಿಸಿ ಮದುವೆಯಾಗಿದ್ದ, ಅದರೆ ಅವನ ಸಂಗಾತಿ ಬಹಳ ದಿನ ಬದುಕುಳಿಯಲಿಲ್ಲ: ಮಹಾಂತೇಶ್, ಪೊಲೀಸ್ ಆಧಿಕಾರಿ
Latest Videos