ಎರಡು ದಿನ ಕಳೆದರೂ ಬಸವೇಶ್ನ ಬಂಧನವಿಲ್ಲ, ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಸಮಂಜಸ ಪ್ರತಿಕ್ರಿಯೆ
ಜಿಲ್ಲಾ ಉಸ್ತುವಾರಿ ಸಚಿವನಾಗಿ ಆಧಿಕಾರಿಗಳನ್ನು ರಕ್ಷಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಹೇಳುವ ಮಧು ಬಂಗಾರಪ್ಪ ಅಧಿಕಾರಿಗಳಿಂದ ಪ್ರಮಾದ ಜರುಗಿದ್ದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎನ್ನುತ್ತಾರೆ. ಅವರ ಮಾತುಗಳನ್ನು ಕೇಳುತ್ತಿದ್ದರೆ ಜ್ಯೋತಿ ಬಲಿಪಶುವಾಗಲಿದ್ದಾರಾ ಎಂಬ ಸಂಶಯ ಕನ್ನಡಿಗರಲ್ಲಿ ಮೂಡಲಿಕ್ಕೂ ಸಾಕು! ಹಾಗಾಗದಿರಲಿ ಅನ್ನೋದೇ ಪ್ರತಿಯೊಬ್ಬ ಕನ್ನಡಿಗನ ಆಶಯ.
ಶಿವಮೊಗ್ಗ: ಭದ್ರಾವತಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ಅವರನ್ನು ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ ಅವರ ಮಗ ಬಸವೇಶ್ ಅವಾಚ್ಯ ಪದಗಳಿಂದ ನಿಂದಿಸಿ ಎರಡು ದಿನ ಕಳೆದರೂ ಪೊಲೀಸರು ಅವನನ್ನು ಇನ್ನೂ ಬಂಧಿಸಿಲ್ಲ. ಯಾರೋ ಟಾಮ್ ಡಿಕ್ ಮತ್ತು ಹ್ಯಾರಿಯನ್ನು ಬಂಧಿಸಿರುವುದನ್ನು ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ದೊಡ್ಡ ಸಾಧನೆ ಎನ್ನುವಂತೆ ಹೇಳುತ್ತಾರೆ. ಸ್ವಾಮಿ ಮಂತ್ರಿಯವರೇ, ನಿಮ್ಮ ಅಧಿಕಾರಿಯನ್ನು ಅತಿ ಕೆಟ್ಟ ಪದಗಳನ್ನು ಬಳಿಸಿ ಬೈದಿರೋದು ಆ ಮೂವರಲ್ಲ, ಶಾಸಕನ ಸುಪುತ್ರ ಬಸವೇಶ್. ಅವನನ್ನು ಇನ್ನೂ ಯಾಕೆ ಬಂಧಿಸಿಲ್ಲ ಅನ್ನೋದು ಪ್ರಶ್ನೆ.
ಪೊಲೀಸರಿಗೆ ಮುಕ್ತ ತನಿಖೆ ನಡೆಸಲು ಅವಕಾಶ ನೀಡಿರುವ ತಾವು ತಪ್ಪಿತಸ್ಥರೆಂದು ಕಂಡುಬಂದವರನ್ನು ಬಂಧಿಸಲಾಗಿದೆ ಎನ್ನುತ್ತೀರಿ, ಅದರೆ ಮುಖ್ಯ ತಪ್ಪಿತಸ್ಥನನ್ನು ಗಣನೆಗೆ ತೆಗೆದುಕೊಳ್ಳಲ್ಲ, ಖುದ್ದು ಸಂಗಮೇಶ್ ತನ್ನ ಮಗ ಮಾಡಿದ್ದು ತಪ್ಪು ಅಂತ ಹೇಳಿದ್ದರೂ ಅವನ ವಿರುದ್ಧ ಕ್ರಮ ಇಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತನಿಖೆ ಶಬ್ದದ ವ್ಯಾಖ್ಯಾನ ಬದಲಾದಂತಿದೆ. ವಾಯುಪಡೆಯ ಯೋಧ ಹೊಸನಗರ ತಾಲ್ಲೂಕಿನ ಜಿಎಸ್ ಮಂಜುನಾಥ್ ದುರದೃಷ್ಟಕರ ಸಾವಿಗೆ ಸಚಿವ ಸಂತಾಪ ವ್ಯಕ್ತಪಡಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಾಸಕ ಸಂಗಮೇಶ್ ಮಗ ಬಸವೇಶ್ ವಿರುದ್ಧ ದೂರು ದಾಖಲಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ

ಬಹಳಷ್ಟು ಪಡಿತರ ಅಂಗಡಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ವಂಚನೆ

ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಬಳಿಕ ಕ್ಯಾಪ್ಸುಲ್ನಿಂದ ಹೊರ ಬಂದ ಸುನಿತಾ

Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ

ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
