ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಫ್ರಾನ್ಸ್ ಅಧ್ಯಕ್ಷರ ಎದುರೇ ಮೋದಿ, ಮೋದಿ ಘೋಷಣೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಇಂದು ಫ್ರಾನ್ಸ್‌ನ ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಅನ್ನು ಜಂಟಿಯಾಗಿ "ಮೋದಿ, ಮೋದಿ" ಘೋಷಣೆಗಳ ನಡುವೆ ಉದ್ಘಾಟಿಸಿದರು. ಉದ್ಘಾಟನಾ ನಂತರ ಇಬ್ಬರು ನಾಯಕರು ಕಾನ್ಸುಲೇಟ್ ಬಾಲ್ಕನಿಯಲ್ಲಿ ಜನಸಮೂಹದತ್ತ ಕೈ ಬೀಸಿದರು ಮತ್ತು ತಮ್ಮ ಬಲವಾದ ಸಂಬಂಧವನ್ನು ಪ್ರದರ್ಶಿಸಲು ಪರಸ್ಪರರ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡರು. ಮಾರ್ಸಿಲ್ಲೆಯ ಮಜಾರ್ಗ್ಸ್ ಯುದ್ಧ ಸ್ಮಾರಕದಲ್ಲಿ ಮಹಾಯುದ್ಧದಲ್ಲಿ ಮಡಿದ ಭಾರತೀಯ ಸೈನಿಕರಿಗೆ ಪ್ರಧಾನಿ ಮೋದಿ ಗೌರವ ಸಲ್ಲಿಸಿದ ನಂತರ ಕಾನ್ಸುಲೇಟ್ ಅನ್ನು ಉದ್ಘಾಟಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರು ಮಾರ್ಸಿಲ್ಲೆಯಲ್ಲಿ ಭಾರತೀಯ ವಲಸಿಗರ ಸದಸ್ಯರನ್ನು ಭೇಟಿಯಾಗಿ ಅವರೊಂದಿಗೆ ಸಂವಾದ ನಡೆಸಿದರು.
ಮಾರ್ಸಿಲ್ಲೆ: ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಜಂಟಿಯಾಗಿ ಇಂದು ಫ್ರಾನ್ಸ್‌ನ ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟಿಸಿದ್ದಾರೆ. ಈ ವೇಳೆ ಅಲ್ಲಿ ಸೇರಿದ್ದ ಅನಿವಾಸಿ ಭಾರತೀಯರು ಡೋಲು ಬಾರಿಸುವ ಮೂಲಕ ಪ್ರಧಾನಿ ಮೋದಿ ಹಾಗೂ ಮ್ಯಾಕ್ರನ್ ಅವರನ್ನು ಸ್ವಾಗತಿಸಿದರು. ಹಾಗೇ, ಅನಿವಾಸಿ ಭಾರತೀಯರು ಫ್ರಾನ್ಸ್ ಅಧ್ಯಕ್ಷರ ಎದುರಲ್ಲೇ “ಮೋದಿ, ಮೋದಿ” ಎಂಬ ಘೋಷಣೆಗಳನ್ನು ಕೂಗಿದರು. ಭಾರತೀಯ ಕಾನ್ಸುಲೇಟ್ ಉದ್ಘಾಟನೆಯ ನಂತರ ಕಾನ್ಸುಲೇಟ್ ಬಾಲ್ಕನಿಯಲ್ಲಿ ಇಬ್ಬರೂ ನಾಯಕರು ಜನಸಮೂಹದತ್ತ ಕೈ ಬೀಸಿದರು. ಪರಸ್ಪರರ ಕೈಗಳನ್ನು ಬಿಗಿಯಾಗಿ ಹಿಡಿದುಕೊಂಡು ತಮ್ಮ ಬಾಂಧವ್ಯವನ್ನು ಪ್ರದರ್ಶಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರು ಮಾರ್ಸಿಲ್ಲೆಯಲ್ಲಿ ಭಾರತೀಯ ವಲಸಿಗರ ಸದಸ್ಯರನ್ನು ಭೇಟಿಯಾಗಿ ಅವರೊಂದಿಗೆ ಸಂವಾದ ನಡೆಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಮಾದರಿ ಅನುಸರಿಸುವಂತೆ ಬೇರೆ ಸದಸ್ಯರನ್ನು ಕೋರಿದ ಖಾದರ್

ಖಾಸಗಿ ಸಂಸ್ಥೆಯ ಸಿಬ್ಬಂದಿ ಇದ್ದ ವಾಹನಕ್ಕೆ ಬೆಂಕಿ, ನಾಲ್ಕು ಮಂದಿ ಸಜೀವ ದಹನ

ಬಹಳಷ್ಟು ಪಡಿತರ ಅಂಗಡಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ವಂಚನೆ

ಕಾಳಿಂಗ ಸರ್ಪದೊಂದಿಗೆ ಭೀಕರ ಕಾಳಗ: ಮಕ್ಕಳ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ
