Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮ ಪ್ರೀತಿಯ ರಾಮು’ ಚಿತ್ರಕ್ಕೆ ದರ್ಶನ್​ಗೆ ಪ್ರಶಸ್ತಿ ಬರಲಿಲ್ಲ ಯಾಕೆ? ಕಾರಣ ತಿಳಿಸಿದ ನಿರ್ದೇಶಕರು

‘ನಮ್ಮ ಪ್ರೀತಿಯ ರಾಮು’ ಚಿತ್ರಕ್ಕೆ ದರ್ಶನ್​ಗೆ ಪ್ರಶಸ್ತಿ ಬರಲಿಲ್ಲ ಯಾಕೆ? ಕಾರಣ ತಿಳಿಸಿದ ನಿರ್ದೇಶಕರು

Mangala RR
| Updated By: ಮದನ್​ ಕುಮಾರ್​

Updated on: Feb 12, 2025 | 10:46 PM

ದರ್ಶನ್ ನಟನೆಯ ‘ನಮ್ಮ ಪ್ರೀತಿಯ ರಾಮು’ ಸಿನಿಮಾ ಫೆ.14ರಂದು ಮರು ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ನಿರ್ದೇಶಕರು ಈಗ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾಗಾಗಿ ದರ್ಶನ್ ಅವರು ತುಂಬ ಕಷ್ಟಪಟ್ಟಿದ್ದರು. ಬೆಂಗಳೂರಿನಲ್ಲಿ 100 ದಿನ ಪ್ರದರ್ಶನ ಆಗಲಿಲ್ಲ ಎಂಬ ಬೇಸರ ದರ್ಶನ್ ಅವರಿಗೆ ಇತ್ತು ಎಂದು ನಿರ್ದೇಶಕರು ಹೇಳಿದ್ದಾರೆ.

‘ನಮ್ಮ ಪ್ರೀತಿಯ ರಾಮು’ ಸಿನಿಮಾದಲ್ಲಿನ ದರ್ಶನ್ ಅವರ ನಟನೆಯನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಆದರೆ ಆ ಚಿತ್ರಕ್ಕೆ ದರ್ಶನ್ ಅವರಿಗೆ ಯಾವುದೇ ಪ್ರಶಸ್ತಿ ಸಿಗಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ನಿರ್ದೇಶಕರಾದ ಸಂಜಯ್ ಮತ್ತು ವಿಜಯ್ ಅವರು ವಿವರಿಸಿದ್ದಾರೆ. ‘ಮೈಸೂರಲ್ಲಿ 100 ದಿನ, ಬೆಂಗಳೂರಲ್ಲಿ 50 ದಿನ ಪ್ರದರ್ಶನ ಕಂಡ ಸಿನಿಮಾ ಇದು. ಈ ಚಿತ್ರಕ್ಕೆ ದರ್ಶನ್ ತುಂಬ ಕಷ್ಟಪಟ್ಟಿದ್ದಾರೆ. ಜೀವನಪೂರ್ತಿ ಅವರು ಈ ಸಿನಿಮಾವನ್ನು ನೆನಪಿಸಿಕೊಳ್ಳುತ್ತಾರೆ. ಪ್ರಶಸ್ತಿಗೆ ಈ ಸಿನಿಮಾವನ್ನು ಕಳಿಸಿರಲಿಲ್ಲ. ಹಾಗಾಗಿ ಪ್ರಶಸ್ತಿ ಬರಲಿಲ್ಲ. ತಾವು ಮಾಡಿದ ಪ್ರಯತ್ನಕ್ಕಾಗಿ ಈ ಸಿನಿಮಾಗೆ ಅವಾರ್ಡ್​ ಬರಬೇಕು ಎಂಬ ಆಸೆ ಅವರಿಗೆ ಇತ್ತು. ಆದರೆ ನಿರ್ಮಾಪಕರು ಅವಾರ್ಡ್​ಗೆ ಕಳಿಸಲಿಲ್ಲ. ಆ ಬಗ್ಗೆ ದರ್ಶನ್ ಅವರಿಗೆ ಬೇಸರ ಇತ್ತು’ ಎಂದು ಸಂಜಯ್ ಮತ್ತು ವಿಜಯ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.