ದರ್ಶನ್ ಹುಟ್ಟುಹಬ್ಬಕ್ಕೆ ಬರಲಿದೆ ‘ಡೆವಿಲ್’ ಟೀಸರ್; ಸಿಹಿ ಸುದ್ದಿ ನೀಡಿದ ದಾಸ
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಂತ ಫ್ಯಾನ್ಸ್ ನಿರಾಶರಾಗುವ ಅವಶ್ಯಕತೆ ಇಲ್ಲ. ಯಾಕೆಂದರೆ, ಅವರ ಜನ್ಮದಿನದಂದೇ ‘ಡೆವಿಲ್’ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ. ಈ ಬಗ್ಗೆ ಸ್ವತಃ ದರ್ಶನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರತಿ ವರ್ಷ ದರ್ಶನ್ ಅವರ ಜನ್ಮದಿನ ಅದ್ದೂರಿಯಾಗಿರುತ್ತದೆ. ಆದರೆ ಈ ವರ್ಷ ಬೆನ್ನು ನೋವಿನ ಕಾರಣದಿಂದ ಅವರು ಫ್ಯಾನ್ಸ್ ಜೊತೆ ಬರ್ತ್ಡೇ ಸೆಲೆಬ್ರೇಟ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಶನಿವಾರ (ಫೆ.8) ಅವರು ವಿಡಿಯೋ ಮೂಲಕ ಮಾಹಿತಿ ನೀಡಿದ್ದರು. ಅದರ ಬೆನ್ನಲ್ಲೇ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹುಟ್ಟುಹಬ್ಬದ ದಿನವೇ (ಫೆ.16) ‘ಡೆವಿಲ್’ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ನ್ಯೂಸ್ ಕೇಳಿ ಅಭಿಮಾನಿಗಳಿಗೆ ಸಖತ್ ಖುಷಿ ಆಗಿದೆ. ಬಹುನಿರೀಕ್ಷಿತ ‘ಡೆವಿಲ್’ ಚಿತ್ರದ ಟೀಸರ್ ನೋಡಲು ದರ್ಶನ್ ಅಭಿಮಾನಿಗಳು ಕಾಯುತ್ತಿದ್ದಾರೆ.
‘ಕಾಟೇರ’ ಸಿನಿಮಾದ ಅದ್ಭುತ ಸಕ್ಸಸ್ ಬಳಿಕ ದರ್ಶನ್ ಅವರು ‘ಡೆವಿಲ್’ ಸಿನಿಮಾದ ಕೆಲಸ ಶುರು ಮಾಡಿದ್ದರು. ‘ಮಿಲನ’ ಪ್ರಕಾಶ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2024ರಲ್ಲೇ ಈ ಸಿನಿಮಾ ತೆರೆಕಾಣಬೇಕಿತ್ತು. ಆದರೆ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿ ಜೈಲು ಸೇರಿದ್ದರಿಂದ ಶೂಟಿಂಗ್ ನಿಂತಿತ್ತು.
View this post on Instagram
ದರ್ಶನ್ ಅವರು ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗುವುದಕ್ಕೂ ಮುನ್ನ ‘ಡೆವಿಲ್’ ಸಿನಿಮಾದ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು. ಒಂದು ಟೀಸರ್ ಕೂಡ ಬಿಡುಗಡೆ ಮಾಡಲಾಗಿತ್ತು. ದರ್ಶನ್ ಜಾಮೀಮಿನ ಮೇಲೆ ಹೊರಗೆ ಬಂದ ಬಳಿಕ ಚಿತ್ರದ ಕೆಲಸಗಳಿಗೆ ಚಾಲನೆ ಈ ಸಿಕ್ಕಿದೆ. ಈ ವರ್ಷ ಅವರ ಹುಟ್ಟುಹಬ್ಬಕ್ಕೆ ಗಿಫ್ಟ್ ರೂಪದಲ್ಲಿ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಟೀಸರ್ ಬಿಡುಗಡೆ ನಂತರ ಸಿನಿಮಾ ಮೇಲಿನ ಕ್ರೇಜ್ ಇನ್ನಷ್ಟು ಜಾಸ್ತಿ ಆಗುವುದು ಖಚಿತ.
ಇದನ್ನೂ ಓದಿ: ದರ್ಶನ್ ಪರಭಾಷೆಯ ಸಿನಿಮಾ ಮಾಡ್ತಾರಾ? ಉತ್ತರಿಸಿದ ನಟ
ವೈಯಕ್ತಿಕ ಬದುಕಿನ ಏಳು-ಬೀಳಿನಲ್ಲಿ ದರ್ಶನ್ ಅವರಿಗೆ ಅಭಿಮಾನಿಗಳಿಂದ ಮತ್ತು ಸ್ನೇಹಿತರಿಂದ ತುಂಬ ಬೆಂಬಲ ಸಿಕ್ಕಿದೆ. ಅವರು ಜೈಲಿಗೆ ಹೋದಾಗ ಫ್ಯಾನ್ಸ್ ಸಂಕಟಪಟ್ಟಿದ್ದರು. ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಾಗ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದರು. ಆದಷ್ಟು ಬೇಗ ಅವರು ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿ ಎಂದು ಫ್ಯಾನ್ಸ್ ಹಾರೈಸಿದ್ದರು. ಅಂಥ ಅಭಿಮಾನಿಗಳಿಗೆ ದರ್ಶನ್ ಅವರು ಧನ್ಯವಾದ ತಿಳಿಸಿದ್ದಾರೆ. ಕಷ್ಟದ ಸಂದರ್ಭದಲ್ಲಿ ಜೊತೆಗೆ ನಿಂತ ಆಪ್ತರಿಗೂ ಅವರು ಥ್ಯಾಂಕ್ಸ್ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




