Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳತಿ ರಕ್ಷಿತಾಗೆ ಕೊಟ್ಟ ಮಾತಿನಂತೆ ರಾಣಾ ಆರತಕ್ಷತೆಗೆ ಆಗಮಿಸಿದ ನಟ ದರ್ಶನ್

ಗೆಳತಿ ರಕ್ಷಿತಾಗೆ ಕೊಟ್ಟ ಮಾತಿನಂತೆ ರಾಣಾ ಆರತಕ್ಷತೆಗೆ ಆಗಮಿಸಿದ ನಟ ದರ್ಶನ್

Malatesh Jaggin
| Updated By: ಗಂಗಾಧರ​ ಬ. ಸಾಬೋಜಿ

Updated on: Feb 08, 2025 | 9:25 PM

ನಟ ದರ್ಶನ್ ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ನಟಿ ರಕ್ಷಿತಾ ತಮ್ಮ ರಾಣಾ ಆರತಕ್ಷತೆ ಕಾರ್ಯಕ್ರಮಕ್ಕೆ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಜೊತೆ ಆಗಮಿಸಿದ್ದರು. ಬೆಳಗ್ಗೆಯಷ್ಟೇ ಅಭಿಮಾನಿಗಳಿಗೊಸ್ಕರ ವಿಡಿಯೋ ಮೂಲಕ ದರ್ಶನ್​ ದರ್ಶನ ಕೊಟ್ಟಿದ್ದರು.

ಬೆಂಗಳೂರು, ಫೆಬ್ರವರಿ 08: ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಳಿಕ ಮೊದಲ ಸಲ ನಟ ದರ್ಶನ (Darshan Thoogudeepa) ಇಂದು ತನ್ನ ನೆಚ್ಚಿನ ಸೆಲೆಬ್ರಿಟಿಗಳು ಅಂದರೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಅದರ ಬೆನ್ನಲ್ಲೇ ಜೈಲಿಂದ ಹೊರಬಂದು ಸುಮಾರು 9-10 ತಿಂಗಳ ಬಳಿಕ ಮೊದಲ ಬಾರಿಗೆ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡಿದ್ದಾರೆ. ನಟ ರಾಣಾ-ರಕ್ಷಿತಾ ಆರತಕ್ಷತೆಯಲ್ಲಿ ನಟ ದರ್ಶನ್ ಪಾಲ್ಗೊಂಡು ನವಜೋಡಿಗೆ ಶುಭ ಹಾರೈಸಿದ್ದಾರೆ. ಗೆಳತಿ ರಕ್ಷಿತಾಗೆ ಕೊಟ್ಟ ಮಾತಿನಂತೆ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಜೊತೆ ಆಗಮಿಸಿದ್ದರು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.