ದರ್ಶನ್ ತೂಗುದೀಪ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ ರಾಮಣ್ಣ
ನಟಿ ಭಾವನಾ ರಾಮಣ್ಣ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ನಟ ದರ್ಶನ್ ಜೊತೆ ಕೂಡ ಅವರು ನಟಿಸಿದ್ದಾರೆ. ಈಗ ದರ್ಶನ್ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ಕುರಿತು ಭಾವನಾ ಅವರು ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಏನೆಲ್ಲ ಆಗುತ್ತಿದೆ ಎಂಬುದರ ಬಗ್ಗೆ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಭಾರಿ ಸುದ್ದಿ ಆಗಿರುವ ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಅವರು ಎ2 ಆಗಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಅವರ ಜೊತೆ ಚಿತ್ರರಂಗದ ಅನೇಕರಿಗೆ ಒಡನಾಟ ಇದೆ. ಈಗ ದರ್ಶನ್ ಜೈಲು ವಾಸ ಅನುಭವಿಸುತ್ತಿರುವುದು ಆಪ್ತರಿಗೆ ಬೇಸರ ತಂದಿದೆ. ನಟಿ ಭಾವನಾ ರಾಮಣ್ಣ ಅವರು ದರ್ಶನ್ ಜೊತೆ ಅಭಿನಯಿಸಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಸಂಬಂಧಿಸಿದಂತೆ ಭಾವನಾ (Bhavana Ramanna) ಕೂಡ ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ನಾನು ಮತ್ತು ದರ್ಶನ್ ಮೊದಲು ಭೇಟಿ ಆದಾಗ ಅವರು ಇನ್ನೂ ಹೀರೋ ಆಗಿರಲಿಲ್ಲ. ‘ಎಲ್ಲರ ಮನೆ ದೋಸೆನೂ’ ಸಿನಿಮಾದಲ್ಲಿ ನಾವು ಅಕ್ಕ-ತಮ್ಮ ಆಗಿದ್ದೆವು. ಹಾಗಾಗಿ ಬೇರೆ ಸಿನಿಮಾದಲ್ಲಿ ನಾವು ಹೀರೋ-ಹೀರೋಯಿನ್ ಆಗಿ ನಟಿಸಲಿಲ್ಲ. ದರ್ಶನ್ (Darshan) ಪ್ರಕರಣದ ಬಗ್ಗೆ ಮೊದಲು ಕೇಳಿದಾಗ ಬಹಳ ಕಸಿವಿಸಿ ಆಯಿತು. ಇದು ಘಟನೆಯ ಎರಡನೇ ಭಾಗ. ಆದರೆ ಆ ಮಹಿಳೆಗೆ ಕೆಟ್ಟ ಮೆಸೇಜ್ ಬಂದಿದ್ದು ಮೊದಲ ಭಾಗ. ಆ ಭಾಗವನ್ನು ಯಾರೂ ಹೆಚ್ಚಾಗಿ ಹೇಳುತ್ತಿಲ್ಲ’ ಎಂದು ಭಾವನಾ ಹೇಳಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.