ಭವ್ಯಾ ಗೌಡ ಬಗ್ಗೆ ತ್ರಿವಿಕ್ರಮ್ಗೆ ಜ್ಞಾನೋದಯ; ಮುಖವಾಡ ಕಳಚಿದ ಮೇಲೆ ಬಂತು ನಿಜವಾದ ಮಾತು
ಬಿಗ್ ಬಾಸ್ ಮನೆಯಲ್ಲಿ ಜೋಡಿಯಾಗಿ ಹೆಚ್ಚು ದಿನ ಇರಲು ಸಾಧ್ಯವಿಲ್ಲ. ಭವ್ಯಾ ಗೌಡ ಮತ್ತು ತ್ರಿವಿಕ್ರಮ್ ಅವರು ಮೊನ್ನೆ ಮೊನ್ನೆ ತನಕ ಜೊತೆಯಾಗಿ ಆಟ ಆಡುತ್ತಿದ್ದರು. ಆದರೆ ಇನ್ನು ಎರಡೇ ವಾರ ಉಳಿದಿದೆ ಎನ್ನುವಾಗ ತ್ರಿವಿಕ್ರಮ್ ವಿರುದ್ಧ ಭವ್ಯಾ ತಕರಾರು ತೆಗೆದಿದ್ದಾರೆ. ಮುಖವಾಡ ಬಿಚ್ಚಿಟ್ಟು ಅವರು ನಿಷ್ಠುರವಾಗಿ ಮಾತನಾಡಿದ್ದಾರೆ.
‘ನನ್ನ ಆಟಕ್ಕೆ ತ್ರಿವಿಕ್ರಮ್ ತೊಂದರೆ ಆಗಿದ್ದಾರೆ’ ಎಂದು ಭವ್ಯಾ ಗೌಡ ಹೇಳಿದ್ದಾರೆ. ಸುದೀಪ್ ಎದುರಲ್ಲಿ ಮುಲಾಜಿಲ್ಲದೇ ಕೆಲವು ವಿಚಾರಗಳನ್ನು ಭವ್ಯಾ ಹೇಳಿದ್ದಾರೆ. ಅವರ ಮಾತು ಕೇಳಿ ತ್ರಿವಿಕ್ರಮ್ ಅವರಿಗೆ ಜ್ಞಾನೋದಯ ಆಗಿದೆ. ‘ಮಾರಿಹಬ್ಬ ಶುರುವಾಗಿದೆ. ಅದರ ಬಣ್ಣ ಕಾಣಿಸುತ್ತಿದೆ’ ಎಂದು ತ್ರಿವಿಕ್ರಮ್ ಅವರು ಒಪ್ಪಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಜನವರಿ 12ರ ಸಂಚಿಕೆಯ ಪ್ರೋಮೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.