187 ನಾಣ್ಯಗಳನ್ನು ನುಂಗಿದ ಭೂಪ: ಬೆಚ್ಚಿಬಿದ್ದ ಬಾಗಲಕೋಟೆ ವೈದ್ಯರು
ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ವೃದ್ದ ಹೊಟ್ಟೆ ನೋವು ಎಂದು ದಾಖಲಾಗಿದ್ದಾರೆ. ಈ ವೇಳೆ ಎಕ್ಸರೆ ಮಾಡಿದ ವೈದ್ಯರು ಬೆಚ್ಚಿಬಿದ್ದಿದ್ದಾರೆ. ಹೊಟ್ಟೆಯೊಳಗಡೆ ನಾಣ್ಯಗಳಿರುವುದು ಪತ್ತೆಯಾಗಿದೆ.
ಬಾಗಲಕೋಟೆ: ವೃದ್ಧನೊರ್ವ 187 ಕಾಯಿನ್ (coins) ಗಳನ್ನು ನುಂಗಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆ ಲಿಗಸುಗೂರು ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದ ನಿವಾಸಿ ದ್ಯಾಮಪ್ಪ ಹರಿಜನ (58) ನಾಣ್ಯ ನುಂಗಿದ ವೃದ್ದ. ನಿನ್ನೆ ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ವೃದ್ದ ಹೊಟ್ಟೆ ನೋವು ಎಂದು ದಾಖಲಾಗಿದ್ದಾರೆ. ಈ ವೇಳೆ ಎಕ್ಸರೆ ಮಾಡಿದ ವೈದ್ಯರು ಬೆಚ್ಚಿಬಿದ್ದಿದ್ದಾರೆ. ಹೊಟ್ಟೆಯೊಳಗಡೆ ನಾಣ್ಯಗಳಿರುವುದು ಪತ್ತೆಯಾಗಿದ್ದು, ಎಂಡೊಸ್ಕೊಪಿ ಮೂಲಕ ನಾಣ್ಯ ಇರೋದು ಕಂಡು ಹಿಡಿದು ,ಲ್ಯಾಪ್ರೊಟಮಿ ಗ್ಯಾಸ್ಟ್ರೊಟಮಿ ಸರ್ಜರಿ ಮಾಡಿ ಮೂಲಕ ನಾಣ್ಯ ಹೊರತೆಗೆದಿದ್ದಾರೆ. ಈ ಕುರಿತಾದ ಒಂದು ವಿಡಿಯೋ ಇಲ್ಲಿದೆ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 27, 2022 04:19 PM
Latest Videos