ಬೀದರ್: ವಾಕಿಂಗ್​ ಮಾಡುತ್ತಿದ್ದ ವ್ಯಕ್ತಿಗೆ ಗುದ್ದಿ 50 ಅಡಿ ದೂರಕ್ಕೆಸೆದ ಕಾರು, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Updated By: Ganapathi Sharma

Updated on: Oct 23, 2025 | 3:20 PM

ಭೀಕರ ಅಪಘಾತವೊಂದು ಬೀದರ್​​​ನ ಕುಂಬಾರವಾಡ ಬಡಾವಣೆಯಲ್ಲಿ ಸಂಭವಿಸಿದ್ದು, ವಾಕಿಂಗ್ ಮಾಡುತ್ತಿದ್ದ ವ್ಯಕ್ತಿ ಕಾರು ಗುದ್ದಿ ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಕಾರು ಗುದ್ದಿದ ಕಾರಣ ಸುಮಾರು 50 ಅಡಿ ದೂರಕ್ಕೆ ವ್ಯಕ್ತಿಯ ದೇಹ ಎಸೆಯಲ್ಪಟ್ಟಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ವಿಡಿಯೋ ಇಲ್ಲಿದೆ.

ಬೀದರ್, ಅಕ್ಟೋಬರ್ 23: ಬೀದರ್​​​ನ ಕುಂಬಾರವಾಡ ಬಡಾವಣೆಯಲ್ಲಿ ವೇಗವಾಗಿ ಬಂದ ಕಾರೊಂದು ಗುದ್ದಿದ ಪರಿಣಾಮ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು 76 ವರ್ಷ ವಯಸ್ಸಿನ ಭೀಮಣ್ಣ ಎಂದು ಗುರುತಿಸಲಾಗಿದೆ. ಕಾರು ಗುದ್ದಿರುವ ರಭಸಕ್ಕೆ ಭೀಮಣ್ಣ ದೇಹ 50 ಅಡಿಯಷ್ಟು ದೂರಕ್ಕೆ ಎಸೆಯಲ್ಪಟ್ಟಿದೆ. ಕಾರು ಚಾಲಕ ಪರಾರಿಯಾಗಿದ್ದಾನೆ. ಬೆಳಗ್ಗೆ 5:30 ಸುಮಾರಿಗೆ ಸಂಭವಿಸಿದ ಘಟನೆಯ ಭಿಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.