Noisy bike silencers: ಇದಪ್ಪಾ ಪೊಲೀಸ್ ವರಸೆ -ಹತ್ತಾರು ಬೈಕ್ ಸೈಲನ್ಸರ್ ಮೇಲೆ ಬೀದರ್ ಪೊಲೀಸರು ರೋಲರ್ ಹತ್ತಿಸಿಯೇ ಬಿಟ್ಟರು!
ಬೀದರ್ ಪೊಲೀಸರು ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ವೃತ್ತದ ಬಳಿ ಸಾರ್ವಜನಿಕರ ಸಮ್ಮುಖದಲ್ಲಿ ಸೈಲನ್ಸರ್ ಗಳ ಮೇಲೆ ರೋಲರ್ ಹತ್ತಿಸಿ ನಾಶ ಮಾಡಿದ್ದಾರೆ. ಅದರೊಂದಿಗೆ ಆ ಬೈಕ್ ಸವಾರರ ಅಹಂ ಅನ್ನೂ ನಾಶಪಡಿಸಿದ್ದಾರೆ.
ಬೀದರ್: ಒಂದಲ್ಲಾ ಒಂದು ಸಂದರ್ಭದಲ್ಲಿ ಯಾರೇ ಆಗಲಿ ಯಮದೂತರಂತೆ ಮೇಲೆರಗಿ ಬರುವ ದೈತ್ಯ ದ್ವಿಚಕ್ರ ವಾಹನಗಳು ಮತ್ತು ಅವು ಹೊರಸೂಸುವ ಭೀಕರ, ಕರ್ಕಶ ಶಬ್ದಕ್ಕೆ ಬೆಚ್ಚಿಬೀಳದವರು ಯಾರೂ ಇಲ್ಲ ಅನ್ನಬಹುದು. ಅಷ್ಟರಮಟ್ಟಿಗೆ ಕೆಲ ಪೀಡಾತ್ಮಕ ಬೈಕುಗಳು ಜನರನ್ನು ಹೈರಾಣಗೊಳಿಸಿರುತ್ತೆ. ಪೊಲೀಸರು ಅದರ ವಿರುದ್ಧ ಆಗಾಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿರುತ್ತಾರೆ. ಆದರೂ ಬೇಜವಾಬ್ದಾರಿ ಬೈಕ್ ಸವಾರರು ‘ಸಾಹಸ’ ಮಾಡುವುದುಂಟು (altered silencers). ಅಂತಹವರಿಗೆ ಬೀದರ್ ಪೊಲೀಸರು ಇಂದು ಬುಧಬವಾರ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಕರ್ಕಶ ಶಬ್ದ ಮಾಡಿಕೊಂಡು ಓಡಾಡುವ ಬೈಕ್ ಸವಾರರಿಗೆ (noisy bike silencers) ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲಿ ಬುದ್ದಿ ಕಲಿಸಲಾಗಿದೆ. ಬೀದರ್ ಪೊಲೀಸರು (Bidar Police) ಜಿಲ್ಲೆಯಲ್ಲಿ ಕರ್ಕಶ ಶಬ್ದ ಮಾಡಿಕೊಂಡು ಓಡಾಡುವ ಬೈಕ್ ಗಳ ವಿರುದ್ಧ ಕ್ರಮ ಜರುಗಿಸಿದ್ದಾರೆ.
ಬೀದರ್ ನ ಅಂಬೇಡ್ಕರ್ ವೃತ್ತದ ಬಳಿ ಬೈಕ್ ನ ಸೈಲನ್ಸರ್ ನಾಶ:
ಸುಮಾರು 40ಕ್ಕೂ ಹೆಚ್ಚು ಬೈಕ್ ಗಳ ಸೈಲನ್ಸರ್ ಗಳನ್ನು ಮೊದಲು ವಶಕ್ಕೆ ಪಡೆದಿದ್ದಾರೆ. ಬಳಿಕ ಆ ಬೈಕುಗಳಿಗೆ ಕಾನೂನುಬಾಹಿರವಾಗಿ ಅಳವಡಿಸಲಾಗಿದ್ದ ಸೈಲನ್ಸರ್ ಗಳನ್ನು ಕಿತ್ತು ಗುಡ್ಡೆ ಹಾಕಿದ್ದಾರೆ. ಅದಾದಮೇಲೆ ಜಿಲ್ಲಾ ಕೇಂದ್ರದಲ್ಲಿ ಅಂಬೇಡ್ಕರ್ ವೃತ್ತದ ಬಳಿ ಸಾರ್ವಜನಿಕರ ಸಮ್ಮುಖದಲ್ಲಿ ಸೈಲನ್ಸರ್ ಗಳ ಮೇಲೆ ರೋಲರ್ ಹತ್ತಿಸಿ ನಾಶ ಮಾಡಿದ್ದಾರೆ. ಅದರೊಂದಿಗೆ ಆ ಬೈಕ್ ಸವಾರರ ಅಹಂ ಅನ್ನೂ ನಾಶಪಡಿಸಿದ್ದಾರೆ. ಅವರ ಆಟಾಟೋಪವನ್ನು ಸೈಲೆಂಟ್ ಮೋಡ್ಗೆ ತಳ್ಳಿದ್ದಾರೆ. ಸಾರ್ವಜನಿಕರ ಮುಂದೆಯೇ ಬೃಹದಾಕಾರದ ರೋಲರ್ ಹತ್ತಿಸಿ ಸೈಲನ್ಸರ್ ನಾಶಗೊಳಿಸುವ ಮೂಲಕ ಪರೋಡಿ ಬೈಕ್ ಸವಾರರಿಗೆ ಖಡಕ್ ಸಂದೇಶ ರವಾನೆ ಮಾಡಿದ್ದಾರೆ (Drive against noisy bike silencers).
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ