ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ರೋಲರ್‌ ಹತ್ತಿಸಿ ನಾಶಪಡಿಸಿದ ಬೀದರ್ ಪೊಲೀಸರು

| Updated By: ಆಯೇಷಾ ಬಾನು

Updated on: Feb 05, 2024 | 12:56 PM

ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್​ಗಳನ್ನು ಬೈಕ್‌ಗೆ ಅಳವಡಿಸಿಕೊಂಡು ಸಂಚಾರ ಮಾಡುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಹೀಗಾಗಿ ಬೀದರ್ ಪೊಲೀಸರು 108 ಬೈಕ್​ಗಳ ಸುಮಾರು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಸೈಲೆನ್ಸರ್​ಗಳನ್ನು ವಶಕ್ಕೆ ಪಡೆದು ಇವುಗಳನ್ನು ರೋಲರ್ ಹರಿಸಿ ನಾಶಪಡಿಸಿದ್ದಾರೆ. ಎಸ್ಪಿ ಚೆನ್ನಬಸವಣ್ಣ ಎಸ್.ಎಲ್. ಅವರ ಸಮ್ಮುಖದಲ್ಲಿ ಪೊಲೀಸ್ ಚೌಕ್ ಬಳಿ ಬೈಕ್ ನ‌ ಸೈಲೆನ್ಸರ್​ಗಳನ್ನು ಜೋಡಿಸಿ ರೋಲರ್ ಹತ್ತಿಸಿ ನಾಶ ಮಾಡಲಾಗಿದೆ.

ಬೀದರ್, ಫೆ.05: ಕರ್ಕಶ ಶಬ್ದ ಮಾಡಿಕೊಂಡು ಬೈಕ್ ಚಾಲನೆ ಮಾಡುವ ಸವಾರರಿಗೆ ಬೀದರ್ ಪೊಲೀಸರು (Bidar Police) ಬುದ್ದಿ ಕಲಿಸಿದ್ದಾರೆ. 108 ಬೈಕ್​ಗಳ ಸೈಲೆನ್ಸರ್​ಗಳ (silencer) ಮೇಲೆ ರೋಲರ್ ಹತ್ತಿಸಿ ನಾಶಪಡಿಸಿದ್ದಾರೆ. ಸುಮಾರು ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ಸೈಲೆನ್ಸರ್ ನಾಶ ಪಡಿಸಲಾಗಿದೆ. ಸಾರ್ವಜನಿಕರ ಮುಂದೆಯೇ ರೋಲರ್ ಹತ್ತಿಸಿ ಸೈಲೆನ್ಸರ್ ಗಳ ನಾಶ ಮಾಡಲಾಗಿದೆ. ಎಸ್ಪಿ ಚೆನ್ನಬಸವಣ್ಣ ಎಸ್.ಎಲ್. ಅವರ ಸಮ್ಮುಖದಲ್ಲಿ ಪೊಲೀಸ್ ಚೌಕ್ ಬಳಿ ಬೈಕ್ ನ‌ ಸೈಲೆನ್ಸರ್​ಗಳನ್ನು ಜೋಡಿಸಿ ರೋಲರ್ ಹತ್ತಿಸಿ ನಾಶ ಮಾಡಲಾಗಿದೆ.

ಬೀದರ್ ಪೊಲೀಸರು ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್​ಗಳನ್ನು ನಾಶಪಡಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ನಗರದ ಪೊಲೀಸ್ ಚೌಕ್ ಬಳಿ ಸಾರ್ವಜನಿಕರ ಮುಂದಯೇ ಸೈಲೆನ್ಸರ್​ಗಳನ್ನು ರಾಶಿ ಹಾಕಿ ಅವುಗಳ ಮೇಲೆ ರೋಲರ್ ಹತ್ತಿಸಿ ನಾಶ ಮಾಡಲಾಗಿದೆ. ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್​ಗಳನ್ನು ಬೈಕ್‌ಗೆ ಅಳವಡಿಸಿಕೊಂಡು ಸಂಚಾರ ಮಾಡುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಬೀದರ್ ಪೊಲೀಸರು 108 ಬೈಕ್​ಗಳ ಸುಮಾರು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಸೈಲೆನ್ಸರ್​ಗಳನ್ನು ವಶಕ್ಕೆ ಪಡೆದು ಇವುಗಳನ್ನು ರೋಲರ್ ಹರಿಸಿ ನಾಶಪಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ