ಕಲಬುರಗಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದ ಜಗದೀಶ್ ಶೆಟ್ಟರ್ ನಗುವಿನಲ್ಲಿ ಅವುಗಳನ್ನು ತೇಲಿಸಿದರು!

Updated on: Jun 12, 2025 | 8:01 PM

ತಮ್ಮ ಎನ್​ಡಿಎ ಸರ್ಕಾರ ಕಲ್ಯಾಣ ಕರ್ನಾಟಕವನ್ನು ಕಡೆಗಣಿಸಿಲ್ಲ, ಹಲವಾರು ಎಕ್ಸ್​ಪ್ರೆಸ್ ವೇಗಳು ಈ ಭಾಗದ ಮೂಲಕವೇ ಹಾದುಹೋಗುತ್ತವೆ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಏನು ಮಾಡಿದರೇನು ಬಂತು, ಕಲಬುರಗಿಗೆ ಮಂಜೂರಾಗಿದ್ದ ಸ್ಮಾರ್ಟ್​ ಸಿಟಿ ಯೋಜನೆಯನ್ನು ಧಾರವಾಡಕ್ಕಾಗಿ ಕಿತ್ತುಕೊಂಡಿರಿ ಅಂತ ಪತ್ರಕರ್ತರು ಹೇಳಿದಾಗ ಶೆಟ್ಟರ್ ಏನು ಉತ್ತರಿಸಬೇಕೆಂದು ಹೊಳೆಯದೆ ಮತ್ತೊಮ್ಮೆ ನಕ್ಕರು.

ಕಲಬುರಗಿ, ಜೂನ್ 12: ನಗರದಲ್ಲಿ ಪತ್ರಕರ್ತರ ಮುಂದೆ ಸಂಸದ ಜಗದೀಶ್ ಶೆಟ್ಟರ್ (Jagadish Shettar, MP) ಅವರಿಗೆ ಇರುಸು ಮುರಿಸಿನ ಪ್ರಸಂಗ ಎದುರಾಯಿತು. ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿಗೆ ನಿಮ್ನ ಕೊಡುಗೆ ಏನು ಅಂತ ನೇರವಾಗಿ ಕೇಳಿದಾಗ ತಬ್ಬಿಬ್ಬಾದ ಶೆಟ್ಟರ್ ಏನು ಉತ್ತರಿಸಬೇಕೆಂದು ಗೊತ್ತಾಗದೆ ಸುಮ್ಮನೆ ನಕ್ಕುಬಿಟ್ಟರು. ಕೊಂಚ ಸಾವರಿಸಿಕೊಂಡು ಅವರು ವಂದೇ ಭಾರತ್ ಟ್ರೈನು ಕಲಬುರಗಿ ಮೂಲಕವೇ ಹಾದುಹೋಗುತ್ತದೆ, ಇನ್ನೂ ಏನೆಲ್ಲ ಬೇಡಿಕೆಗಳಿವೆ ಅವೆಲ್ಲವನ್ನು ಮುಂಬರುವ ದಿನಗಳಲ್ಲಿ ಒಂದೊಂದಾಗಿ ಈಡೇರಿಸಲಾಗುವುದು ಎಂದು ಹೇಳಿದರು. ವಂದೇಭಾರತ್ ಟ್ರೈನಿಗೆ ನಿಮ್ಮ ಕೊಡುಗೆ ಏನೂ ಇಲ್ಲ, ಅದು ಉಮೇಶ್ ಜಾಧವ್ ಅವರ ಪ್ರಯತ್ನದಿಂದ ಆಗಿದ್ದು ಎಂದು ಪತ್ರಕರ್ತರು ಹೇಳಿದಾಗ ಸಂಸದ ಮತ್ತೊಮ್ಮೆ ಪ್ಯಾಲಿ ನಗೆ ಬೀರಿದರು.

ಇದನ್ನೂ ಓದಿ:  ಕಲ್ಯಾಣ ಕರ್ನಾಟಕದಲ್ಲಿ 2 ವರ್ಷದಲ್ಲಿ 289 ಗರ್ಭಿಣಿಯರು ಸಾವು‌‌: ಬೆಚ್ಚಿಬೀಳಿಸಿದ ವರದಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ