AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲ್ಯಾಣ ಕರ್ನಾಟಕದಲ್ಲಿ 2 ವರ್ಷದಲ್ಲಿ 289 ಗರ್ಭಿಣಿಯರು ಸಾವು‌‌: ಬೆಚ್ಚಿಬೀಳಿಸಿದ ವರದಿ

ಕಳೆದ ಎರಡು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ 289 ಗರ್ಭಿಣಿಯರು ಮೃತಪಟ್ಟಿದ್ದಾರೆ ಎಂಬ ಆಘಾತಕಾರಿ ಸುದ್ದಿ ಆರೋಗ್ಯ ಇಲಾಖೆಯಿಂದ ಬಹಿರಂಗಗೊಂಡಿದೆ. ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸಾವುಗಳು ದಾಖಲಾಗಿದ್ದು, ಇದು ಆತಂಕಕಾರಿ. ಗರ್ಭಿಣಿಯರ ಸಾವಿಗೆ ಕಾರಣಗಳನ್ನು ಪತ್ತೆಹಚ್ಚಲು ಆರೋಗ್ಯ ಇಲಾಖೆ ವಿಫಲವಾಗಿದೆ. ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಾಗಿದೆ. ಈ ಸಮಸ್ಯೆಯನ್ನು ತೀವ್ರವಾಗಿ ಪರಿಗಣಿಸಬೇಕಾಗಿದೆ.

ಕಲ್ಯಾಣ ಕರ್ನಾಟಕದಲ್ಲಿ 2 ವರ್ಷದಲ್ಲಿ 289 ಗರ್ಭಿಣಿಯರು ಸಾವು‌‌: ಬೆಚ್ಚಿಬೀಳಿಸಿದ ವರದಿ
ಸಾಂದರ್ಭಿಕ ಚಿತ್ರ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ವಿವೇಕ ಬಿರಾದಾರ

Updated on:Apr 22, 2025 | 3:58 PM

ಕಲಬುರಗಿ, ಏಪ್ರಿಲ್​ 22: ಕಳೆದ ಎರಡು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ (Kalyana Karnataka) 289 ಮಂದಿ ಗರ್ಭಿಣಿಯರ (Pregnant women) ಸಾವಾಗಿದೆ ಎಂಬ ಆಘಾತಕಾರಿ ವರದಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಹೀಗಾಗಿ ಕೇವಲ ಎರಡು ವರ್ಷದಲ್ಲಿ ನೂರಾರು ಗರ್ಭಿಣಿಯರು ಮೃತಪಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ. ಗರ್ಭಿಣಿಯರ ಸಾವಿಗೆ ಹಲವು ಕಾರಣಗಳನ್ನು ಆರೋಗ್ಯ ಇಲಾಖೆ ನೀಡಿದೆ. ಅದರೆ, ಹೆಲ್ತ್ ಹಬ್ ಅಂತ ಕರೆಯಿಸಿಕೊಳ್ಳುವ ಕಲಬುರಗಿ ಜಿಲ್ಲೆಯಲ್ಲೆ ಅತೀ ಹೆಚ್ಚು ಸಾವಾಗಿರುವುದು ದುರದೃಷ್ಟಕರ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಮೃತಪಟ್ಟ 289 ಮಂದಿ ಗರ್ಭಿಣಿಯರಲ್ಲಿ ಹೆಚ್ಚಿನವರು ಕಲಬುರಗಿ ಜಿಲ್ಲೆಯವರಾಗಿದ್ದಾರೆ. ಇನ್ನು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಕಲಬುರಗಿಯವರಾಗಿದ್ದು, ತಮ್ಮ ಜಿಲ್ಲೆಯನ್ನು ಹೆಲ್ತ್ ಹಬ್ ಮಾಡುತ್ತವೆ ಎನ್ನುತ್ತಿದ್ದಾರೆ. ಆದರೆ, ಅವರದ್ದೇ ಜಿಲ್ಲೆಯಲ್ಲಿ ಅತೀ ಹೆಚ್ಚು ಗರ್ಭಿಣಿಯರು ಸಾವಾಗಿರುವುದು ಆತಂಕ ಸೃಷ್ಟಿಸಿದೆ. ಪ್ರತಿ ವರ್ಷ ಇಷ್ಟೊಂದು ಗರ್ಭಿಣಿಯರು ತಾಯ್ತನದ ಖುಷಿ ಅನುಭವಿಸುವ ಮುನ್ನವೇ ಉಸಿರು ಚೆಲ್ಲುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಇಷ್ಟೊಂದು ಮಂದಿ ಗರ್ಭಿಣಿಯರು ಮೃತಪಟ್ಟಿದ್ದರೂ ಆರೋಗ್ಯ ಇಲಾಖೆ ಕಣ್ಮುಚ್ಚಿ ಕುಳಿತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು, ಗರ್ಭಿಣಿಯರ ಸಾವಿಗೆ ಕಾರಣವೇನು ಎಂಬುವುದನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ
Image
ಬಿಮ್ಸ್​ನಲ್ಲಿ ನಿಲ್ಲದ ಬಾಣಂತಿಯರ ಮರಣ: ಎರಡು ದಿನಗಳ ಅಂತರದಲ್ಲಿ 2ನೇ ಸಾವು
Image
5 ಬಾಣಂತಿಯರ ಸಾವು: ಬಿಮ್ಸ್​ ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ
Image
ಬಳ್ಳಾರಿ ಬಾಣಂತಿಯರ ಸಾವು: ಮುಲಾಜಿಲ್ಲದೆ ಕ್ರಮಕ್ಕೆ ಸಿಂ ಖಡಕ್ ಸೂಚನೆ
Image
ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಇಂದು ಮತ್ತೋರ್ವ ಬಾಣಂತಿ ಸಾವು

ಇದನ್ನೂ ಓದಿ: ಬಾಣಂತಿಯರ ಸರಣಿ ಸಾವಿಗೆ ಕಾರಣ ಬಹಿರಂಗ: ವರದಿಯಲ್ಲಿರುವ ಸ್ಫೋಟಕ ಅಂಶ ಇಲ್ಲಿದೆ

ಸದ್ಯ, ಕಲಬುರಗಿಯಲ್ಲಿ ಎರಡು ವರ್ಷ ಅಂತರದಲ್ಲಿ 66 ಮಂದಿ ಗರ್ಭಿಣಿಯರು ಮೃತಪಟ್ಟಿದ್ದು, ಇದರಲ್ಲಿ ಪ್ರಸವ ಪೂರ್ವ ಹಾಗೂ ಪ್ರಸವ ನಂತರ ಸಾವನ್ನಪ್ಪಿದವರೂ ಇದ್ದಾರೆ. ಗರ್ಭಿಣಿಯರ ಸಾವು ತಡೆಗಟ್ಟುವ ಬಗ್ಗೆ ಆರೋಗ್ಯ ಇಲಾಖೆ ಇಲ್ಲಿಯವರೆಗೆ ಚಿಂತನೆ ನಡಸದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Tue, 22 April 25