ನನ್ನ ಗಂಡ ಗಂಡಸೇ ಅಲ್ಲ: ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು

Updated on: Dec 16, 2025 | 3:54 PM

ಹೆಚ್‌ಎಸ್ಆರ್ ಲೇಔಟ್ ಠಾಣೆಯ ಪೊಲೀಸಪ್ಪನ ಜೊತೆ ಪೇರಿಕಿತ್ತ ಪ್ರಕರಣದಿಂದ ರಾಜ್ಯದ ಗಮನ ಸೆಳೆದಿದ್ದ ರೀಲ್ಸ್​​​ ರಾಣಿ ಮೋನಿಕಾ ಕೇಸ್ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪತಿಯ ಮನೆ ಬಿಟ್ಟು ಹೋಗುವಾಗ ತಾನು ಯಾವುದೇ ಒಡವೆ ಅಥವಾ ಬಟ್ಟೆ ಮುಟ್ಟಿಲ್ಲ ಎಂದು ಹೇಳಿಕೆ ನೀಡಿದ್ದ 'ಮಾಯಾಂಗಿನಿ ಮೋನಿಕಾ'ಳ ಕಳ್ಳಾಟ ಇದೀಗ ಬಯಲಾಗಿದೆ.

ಬೆಂಗಳೂರು, (ಡಿಸೆಂಬರ್ 16): ಹೆಚ್‌ಎಸ್ಆರ್ ಲೇಔಟ್ ಠಾಣೆಯ ಪೊಲೀಸಪ್ಪನ ಜೊತೆ ಪೇರಿಕಿತ್ತ ಪ್ರಕರಣದಿಂದ ರಾಜ್ಯದ ಗಮನ ಸೆಳೆದಿದ್ದ ರೀಲ್ಸ್​​​ ರಾಣಿ ಮೋನಿಕಾ ಕೇಸ್ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪತಿಯ ಮನೆ ಬಿಟ್ಟು ಹೋಗುವಾಗ ತಾನು ಯಾವುದೇ ಒಡವೆ ಅಥವಾ ಬಟ್ಟೆ ಮುಟ್ಟಿಲ್ಲ ಎಂದು ಹೇಳಿಕೆ ನೀಡಿದ್ದ ‘ಮಾಯಾಂಗಿನಿ ಮೋನಿಕಾ’ಳ ಕಳ್ಳಾಟ ಇದೀಗ ಬಯಲಾಗಿದೆ.

ಮನೆ ಬಿಟ್ಟು ಎಸ್ಕೇಪ್ ಆಗುವಾಗ ನಾನೇನೂ ತಗೊಂಡು ಹೋಗಿಲ್ಲ ಎಂದು ಹೇಳಿಕೆ ನೀಡಿದ್ದ ಮೋನಿಕಾ, ವಾಸ್ತವವಾಗಿ ಮನೆಯಲ್ಲಿದ್ದ ಬಟ್ಟೆ ಮತ್ತು ಒಡವೆಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾಳೆ. ಸೆಪ್ಟೆಂಬರ್ 31, 2025 ರಂದು ಮಧ್ಯಾಹ್ನ ಮನೆಗೆ ಎಂಟ್ರಿ ಕೊಟ್ಟಿದ್ದ ಮೋನಿಕಾ, ಎರಡು ದೊಡ್ಡ ಬ್ಯಾಗ್‌ಗಳಲ್ಲಿ ತನ್ನ ವಸ್ತುಗಳನ್ನು, ಲಗೇಜ್ ಅನ್ನು ತುಂಬಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಮೋನಿಕಾಳ ವಿರುದ್ಧ ಪತಿ ಮಂಜುನಾಥ್​ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಇಬ್ಬರು ಗಂಡಂದಿರ ಮುದ್ದಿನ ಮಡದಿ ಪೊಲೀಸಪ್ಪನ ಜತೆ ಪರಾರಿ

Published on: Dec 16, 2025 03:53 PM