ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ, ಯಾರು ಏನು ಹೇಳಿದ್ರು ನೋಡಿ
ಮೊಟ್ಟೆಯಲ್ಲಿ AOZ (ನೈಟ್ರೋಫ್ಯುರಾನ್) ಎಂಬ ಕ್ಯಾನ್ಸರ್ ಕಾರಕ ಅಂಶ ಪತ್ತೆ ಎಂಬ ಸುದ್ದಿ ವೈರಲ್ ಆಗಿದೆ. ಡಿಎನ್ಎ ಡ್ಯಾಮೇಜ್ ಮಾಡಿ ಕ್ಯಾನ್ಸರ್ ಉಂಟುಮಾಡುವ ಸಾಧ್ಯತೆ ಎನ್ನಲಾಗುತ್ತಿದೆ. ಹೀಗಾಗಿ ಮೊಟ್ಟೆ ಸೇವಿಸುವವರಲ್ಲಿ ಆತಂಕ ಹೆಚ್ಚಾಗಿದೆ. ಮೊಟ್ಟೆಯ ಬಳಕೆ ಹಾಗೂ ಮೊಟ್ಟೆ ಅನುಕೂಲದ ಬಗ್ಗೆ ಜನ ಗಾಬರಿಗೆ ಒಳಗಾಗಿದ್ದಾರೆ. ಇದರ ಬೆನ್ನಲ್ಲೇ ಆಹಾರ ಸುರಕ್ಷತಾ ಇಲಾಖೆ (Food Safety Department) ಅಲರ್ಟ್ ಆಗಿದ್ದು, ಬೆಂಗಳೂರಿನಲ್ಲಿ (Bengaluru) 200ಕ್ಕೂ ಪ್ರದೇಶಗಳಿಂದ ಮೊಟ್ಟೆ ಸಂಗ್ರಹ ಮಾಡಿದೆ. ಇನ್ನೊಂದೆಡೆ ಈ ಬಗ್ಗೆ ಇಂದು (ಡಿಸೆಂಬರ್ 16) ವಿಧಾನಪರಿಷತ್ ಕಲಾಪದಲ್ಲೂ ಸಹ ಪ್ರಸ್ತಾಪವಾಗಿದೆ.
ಬೆಳಗಾವಿ, (ಡಿಸೆಂಬರ್ 16): ಮೊಟ್ಟೆಯಲ್ಲಿ AOZ (ನೈಟ್ರೋಫ್ಯುರಾನ್) ಎಂಬ ಕ್ಯಾನ್ಸರ್ ಕಾರಕ ಅಂಶ ಪತ್ತೆ ಎಂಬ ಸುದ್ದಿ ವೈರಲ್ ಆಗಿದೆ. ಡಿಎನ್ಎ ಡ್ಯಾಮೇಜ್ ಮಾಡಿ ಕ್ಯಾನ್ಸರ್ ಉಂಟುಮಾಡುವ ಸಾಧ್ಯತೆ ಎನ್ನಲಾಗುತ್ತಿದೆ. ಹೀಗಾಗಿ ಮೊಟ್ಟೆ ಸೇವಿಸುವವರಲ್ಲಿ ಆತಂಕ ಹೆಚ್ಚಾಗಿದೆ. ಮೊಟ್ಟೆಯ ಬಳಕೆ ಹಾಗೂ ಮೊಟ್ಟೆ ಅನುಕೂಲದ ಬಗ್ಗೆ ಜನ ಗಾಬರಿಗೆ ಒಳಗಾಗಿದ್ದಾರೆ. ಇದರ ಬೆನ್ನಲ್ಲೇ ಆಹಾರ ಸುರಕ್ಷತಾ ಇಲಾಖೆ (Food Safety Department) ಅಲರ್ಟ್ ಆಗಿದ್ದು, ಬೆಂಗಳೂರಿನಲ್ಲಿ (Bengaluru) 200ಕ್ಕೂ ಪ್ರದೇಶಗಳಿಂದ ಮೊಟ್ಟೆ ಸಂಗ್ರಹ ಮಾಡಿದೆ. ಇನ್ನೊಂದೆಡೆ ಈ ಬಗ್ಗೆ ಇಂದು (ಡಿಸೆಂಬರ್ 16) ವಿಧಾನಪರಿಷತ್ ಕಲಾಪದಲ್ಲೂ ಸಹ ಪ್ರಸ್ತಾಪವಾಗಿದೆ.
ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆ ವಿಚಾರದ ಬಗ್ಗೆ ಪರಿಷತ್ನಲ್ಲಿ ಶೂ ನ್ಯವೇಳೆಯಲ್ಲಿ ಕಾಂಗ್ರೆಸ್ ಎಂಎಲ್ಸಿ ರಮೇಶ್ ಬಾಬು ಪ್ರಸ್ತಾಪಿಸಿದ್ದು, ಮೊಟ್ಟೆ ಪೌಷ್ಟಿಕ ಆಹಾರವಾಗಿದ್ದು ಇಡೀ ದೇಶದಲ್ಲಿ ಬಳಸಲಾಗುತ್ತಿದೆ. ಆದರೆ ಖಾಸಗಿ ಸಂಸ್ಥೆಯೊಂದು ಆರೋಗ್ಯಕ್ಕೆ ಅಪಾಯಕಾರಿ ಎಂದಿದೆ. EGGOZ ಕಂಪನಿ ಅಪಪ್ರಚಾರ ಮಾಡುವ ಪ್ರಯತ್ನ ಮಾಡಿರುತ್ತದೆ. ಯೂಟ್ಯೂಬ್ನಲ್ಲಿ ಮೊಟ್ಟೆ ಬಗ್ಗೆ ಅಪಪ್ರಚಾರದಿಂದ ಜನರಲ್ಲಿ ಆತಂಕ ಉಂಟು ಮಾಡಿದೆ ಎಂದರು.
ಇದನ್ನೂ ನೋಡಿ; ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಸೋಶಿಯಲ್ ಮೀಡಿಯಾಗಳಲ್ಲೀಗ ಇದೇ ಚರ್ಚೆ!
2024-25ನೇ ಸಾಲಿನಲ್ಲಿ 150 ಬಿಲಿಯನ್ ಮೊಟ್ಟೆ ಉತ್ಪಾದಿಸಲಾಗಿದೆ. ಮೊಟ್ಟೆ ಉತ್ಪಾದನೆಯಲ್ಲಿ ವಿಶ್ವದಲ್ಲಿ ಭಾರತ 2ನೇ ಸ್ಥಾನದಲ್ಲಿದ್ದರೆ, ದೇಶದಲ್ಲಿ ಮೊಟ್ಟೆ ಉತ್ಪಾದನೆಯಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ಪೌಲ್ಟ್ರಿ ಮುಖಾಂತರ ಒಟ್ಟು ಉತ್ಪಾದನೆಯಲ್ಲಿ 84% ಮೊಟ್ಟೆ ಉತ್ಪಾದನೆ. ಉಳಿದ ಶೇಕಡಾ 16ರಷ್ಟು ಮೊಟ್ಟೆ ಸ್ಥಳೀಯವಾಗಿ ದೊರೆಯುತ್ತದೆ. ರಾಜ್ಯದಲ್ಲಿ ಶಾಲಾ ಮಕ್ಕಳಿಗೂ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಅಪಪ್ರಚಾರದ ವಿರುದ್ಧ ರಾಜ್ಯ ಆರೋಗ್ಯ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

