AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಗ್ರ್ಯಾಂಡ್ ಫಿನಾಲೆ; ಸುದೀಪ್ ಎದುರು ರಿವೀಲ್ ಆಗಲಿದೆ ಗುಟ್ಟು

‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಗ್ರ್ಯಾಂಡ್ ಫಿನಾಲೆ; ಸುದೀಪ್ ಎದುರು ರಿವೀಲ್ ಆಗಲಿದೆ ಗುಟ್ಟು

ರಾಜೇಶ್ ದುಗ್ಗುಮನೆ
|

Updated on: Sep 03, 2026 | 9:31 AM

Share

ಕಲರ್ಸ್ ಕನ್ನಡದ 'ಬಿಗ್ ಬಾಸ್ ಅಗ್ನಿಪರೀಕ್ಷೆ' ಶೋ ಅಂತಿಮ ಘಟ್ಟ ತಲುಪಿದ್ದು, ಈ ಶನಿವಾರ ಗ್ರಾಂಡ್ ಫಿನಾಲೆ ಮೂಡಿಬರಲಿದೆ. ಈ ಅಗ್ನಿಪರೀಕ್ಷೆಯಲ್ಲಿ ಗೆದ್ದು ಮುಖ್ಯ ಬಿಗ್ ಬಾಸ್ ಮನೆ ಪ್ರವೇಶಿಸುವ ಮೂವರು ಸ್ಪರ್ಧಿಗಳು ಯಾರು ಎಂಬ ಕುತೂಹಲಕ್ಕೆ ತೆರೆಬೀಳಲಿದ್ದು, ಭಾನುವಾರದಿಂದ ಬಿಗ್ ಬಾಸ್ ಸೀಸನ್ 13 ಅದ್ಧೂರಿಯಾಗಿ ಆರಂಭವಾಗಲಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಕಡೆಯಿಂದ ಸಿಹಿ ಸುದ್ದಿ ಸಿಕ್ಕಿದೆ.’ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮದ ಅಂತಿಮ ಹಂತ ತಲುಪಿದ್ದು, ಈ ಶನಿವಾರ ಗ್ರಾಂಡ್ ಫಿನಾಲೆ ಅದ್ಧೂರಿಯಾಗಿ ಮೂಡಿಬರಲಿದೆ. ಮರುದಿನ ಅಂದರೆ ಭಾನುವಾರ ಬಿಗ್ ಬಾಸ್ ಹೊಸ ಸೀಸನ್ ಆರಂಭ ಆಗಲಿದೆ.

ಸಾಮಾನ್ಯ ಸ್ಪರ್ಧಿಗಳ ನಡುವೆ ಕಠಿಣ ಸವಾಲುಗಳು ಮತ್ತು ಟಾಸ್ಕ್‌ಗಳ ಮೂಲಕ ನಡೆಯುತ್ತಿದ್ದ ಈ ಅಗ್ನಿಪರೀಕ್ಷೆಯಲ್ಲಿ ಅಂತಿಮವಾಗಿ ಯಾರು ಗೆದ್ದು ‘ಬಿಗ್ ಬಾಸ್’ ಮುಖ್ಯ ಮನೆ ಪ್ರವೇಶಿಸಲಿದ್ದಾರೆ ಎಂಬ ಕುತೂಹಲಕ್ಕೆ ಶೀಘ್ರದಲ್ಲೇ ತೆರೆಬೀಳಲಿದೆ. ಬಿಗ್ ಬಾಸ್ ರಿಯಾಲಿಟಿ ಶೋನ ದೊಡ್ಡ ವೇದಿಕೆಯಲ್ಲಿ ತಮ್ಮ ಪ್ರತಿಭೆ ಸಾಬೀತುಪಡಿಸಲು ಕಾಯುತ್ತಿರುವ ಸ್ಪರ್ಧಿಗಳಲ್ಲಿ ಮೂವರು ಪ್ರಮುಖ ಪ್ಯಾಸೆಂಜರ್‌ಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ.

ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿರುವ ಈ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಗ್ರ್ಯಾಂಡ್ ಫಿನಾಲೆ ಈ ಶನಿವಾರ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಭಾನುವಾರ ಸಂಜೆ 6 ಗಂಟೆಗೆ ಗ್ರ್ಯಾಂಡ್​ ಓಪನಿಂಗ್ ನಡೆಯಲಿದೆ. ಈ ವೇಳೆ ಟಾಪ್ 10 ಸ್ಪರ್ಧಿಗಳ ಪೈಕಿ ಆಯ್ಕೆ ಆದ ಮೂವರು ಯಾರು ಎಂಬುದು ರಿವೀಲ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us