‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು ಹಾಕಿದ ಸ್ಪರ್ಧಿಗಳು

|

Updated on: Oct 18, 2024 | 8:06 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶಾಕಿಂಗ್ ಬೆಳವಣಿಗೆ ನಡೆದಿದೆ. ಸ್ಪರ್ಧಿಗಳೆಲ್ಲರೂ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದ ಜಗದೀಶ್ ಕೋಪಗೊಂಡಿದ್ದು ಮಹಿಳಾ ಸ್ಪರ್ಧಿಗಳ ವಿರುದ್ಧ ಅಶ್ಲೀಲ ಪದಗಳ ಬಳಕೆ ಮಾಡಿದ್ದಾರೆ. ಈ ಮಧ್ಯೆ ರಂಜಿತ್ ಅವರು ಜಗದೀಶ್ ಅವರನ್ನು ತಳ್ಳಿದ್ದಾರೆ. ಇದನ್ನು ಗಮನಿಸಿದ ಬಿಗ್ ಬಾಸ್ ಇಬ್ಬರನ್ನು ಹೊರಹಾಕಿದ್ದಾರೆ.

ಹೆಣ್ಣುಮಕ್ಕಳ ಬಗ್ಗೆ ಅವಾಚ್ಯ ಶಬ್ದ ಬಳಕೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಜಗದೀಶ್ ಅವರನ್ನು ಹಾಗೂ ಜಗದೀಶ್​ನ ತಳ್ಳಿದ ವಿಚಾರಕ್ಕೆ ಸಂಬಂಧಿಸಿ ರಂಜಿತ್​ನ ಬಿಗ್ ಬಾಸ್​ನಿಂದ ಹೊರಕ್ಕೆ ಕಳಿಸಲಾಗುತ್ತಿದೆ. ಈ ಎಲ್ಲಾ ವಿಚಾರವನ್ನು ಬಿಗ್ ಬಾಸ್ ಗಂಭೀರವಾಗಿ ಸ್ವೀಕರಿಸಿದ್ದಾರೆ. ಇವರನ್ನು ಹೊರಕ್ಕೆ ಕಳಿಸೋ ಆದೇಶವನ್ನು ಬಿಗ್ ಬಾಸ್ ನೀಡಿದ್ದಾರೆ. ‘ಇನ್ನೊಂದು ಅವಕಾಶ ಕೊಡಿ ಪ್ಲೀಸ್’ ಎಂದು ಬಿಗ್ ಬಾಸ್ ಬಳಿ ಸ್ಪರ್ಧಿಗಳು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.