ಅಪ್ಪು ಸಮಾಧಿಗೆ ಆಮಂತ್ರಣ ಪತ್ರವಿಟ್ಟು ಕಾರ್ಯಕ್ರಮಕ್ಕೆ ಆಹ್ವಾನಿಸಿದ ‘ಬಿಗ್ ಬಾಸ್’ ಖ್ಯಾತಿಯ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ

| Updated By: ರಾಜೇಶ್ ದುಗ್ಗುಮನೆ

Updated on: Mar 08, 2022 | 6:50 PM

‘ಬಿಗ್ ಬಾಸ್’ ಖ್ಯಾತಿಯ ಅಕ್ಕಿಮಠದ ಗುರುಲಿಂಗ ಸ್ವಾಮಿಗಳು ಅಪ್ಪು ಸಮಾಧಿಗೆ ಬಂದು ಕಾರ್ಯಕ್ರಮವೊಂದಕ್ಕೆ ಆಹ್ವಾನ ನೀಡಿದ್ದಾರೆ.

ಪುನೀತ್ ರಾಜ್​ಕುಮಾರ್ (Puneeth Rajkumar) ಇಲ್ಲ ಎಂಬ ನೋವು ಇಂದು ನಾಳೆಗೆ ಮಾಸುವಂತಹದ್ದಲ್ಲ. ಆ ನೋವಿನ ಜತೆ ನಾವು ಸಾಗಬೇಕಾದ ಅನಿವಾರ್ಯತೆ ಇದೆ. ಈ ಮಧ್ಯೆ ಪುನೀತ್ ಮೇಲಿರುವ ಪ್ರೀತಿಯನ್ನು ನಾನಾ ರೀತಿಯಲ್ಲಿ ವ್ಯಕ್ತಪಡಿಸಲಾಗುತ್ತಿದೆ. ‘ಬಿಗ್ ಬಾಸ್’ ಖ್ಯಾತಿಯ (Bigg Boss Fame) ಅಕ್ಕಿಮಠದ ಗುರುಲಿಂಗ ಸ್ವಾಮಿಗಳು (Gurulinga Swamy) ಅಪ್ಪು ಸಮಾಧಿಗೆ ಬಂದು ಕಾರ್ಯಕ್ರಮವೊಂದಕ್ಕೆ ಆಹ್ವಾನ ನೀಡಿದ್ದಾರೆ. 51 ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದು ವಿಶ್ವದಾಖಲೆ ಪಟ್ಟಿಗೆ ಸೇರಲಿದೆ. ಈ ಮೊದಲು ಪುನೀತ್ ಅವರಿಗೆ ಈ ಬಗ್ಗೆ ಹೇಳಿದಾಗ, ‘ಎರಡು ತಿಂಗಳು ಮೊದಲೇ ನೀವು ನನಗೆ ಈ ಬಗ್ಗೆ ಹೇಳಬೇಕು’ ಎಂದಿದ್ದರು. ಅದೇ ರೀತಿಯಲ್ಲಿ ಎರಡು ತಿಂಗಳು ಮೊದಲೇ ಆಗಮಿಸಿರುವ ಅಕ್ಕಿಮಠದ ಗುರುಲಿಂಗ ಸ್ವಾಮಿಗಳು, ಅಪ್ಪು ಸಮಾಧಿ ಬಳಿ ಬಂದು ಆಮಂತ್ರಣವಿಟ್ಟು ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಆ ಬಳಿಕ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ: Puneeth Rajkumar: ‘ಪುನೀತ್​ ರಾಜ್​ಕುಮಾರ್ ರಸ್ತೆ’ ನಾಮಕರಣಕ್ಕೆ ಬಿಬಿಎಂಪಿ ಅಧಿಕೃತ ಅನುಮೋದನೆ

ಪಟಾಕಿ ಯಾರದ್ದೇ ಆಗಿರ್ಲಿ, ಹಚ್ಚೋದು ಮಾತ್ರ ಪುನೀತ್​ ರಾಜ್​ಕುಮಾರ್​: ವಂಶಿಕಾ ಸೂಪರ್​ ಮಾತು

Published on: Mar 08, 2022 06:49 PM