ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ತುಂಬಾ ಅದ್ದೂರಿಯಾಗಿ ಹಂಪಿ ಉತ್ಸವ ನಡೆಯುತ್ತಿದೆ. ಇದರಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿಯಾಗುತ್ತಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದ ವಿಜೇತ ಹನುಮಂತ ಲಮಾಣಿ ಸಹ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ವೇದಿಕೆಯಲ್ಲಿ ಅವರು ಮಾತನಾಡಿದ್ದಾರೆ. ಉತ್ತರ ಕರ್ನಾಟಕದ ಹುಲಿಗೆ ಜೈ ಎಂದು ನಿರೂಪಕರು ಜೈಕಾರ ಹಾಕಿದರು. ಆ ವಿಡಿಯೋ ಇಲ್ಲಿದೆ..
ಹಂಪಿ ಉತ್ಸವ ಜೋರಾಗಿ ನಡೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಬಿಗ್ ಬಾಸ್ ವಿನ್ನರ್ ಹನುಮಂತ (Hanumantha Lamani) ಕೂಡ ಅತಿಥಿಯಾಗಿ ಬಂದಿದ್ದಾರೆ. ವೇದಿಕೆಯಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ ‘ಉತ್ತರ ಕರ್ನಾಟಕದ ಹುಲಿಗೆ ಜೈ’ ಎಂದು ಜೈಕಾರ ಹಾಕಲಾಗಿದೆ. ‘ಎಲ್ಲಿ ಹುಲಿ ಬಿಡೋ ಮಾರಾಯ. ನಿದ್ದಿ ಕೆಟ್ಟು ಇಲಿ ಆಗೇನಿ’ ಎಂದರು ಹನುಮಂತ. ವೋಟ್ ಮಾಡಿ ಬಿಗ್ ಬಾಸ್ ಶೋನಲ್ಲಿ ತಮ್ಮನ್ನು ಗೆಲ್ಲಿಸಿದ ಜನತೆಗೆ ಅವರು ಧನ್ಯವಾದ ತಿಳಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.