ಈಗಲ್ಟನ್ ರೆಸಾರ್ಟ್ನಿಂದ ಬಿಗ್ಬಾಸ್ ಮನೆಗೆ ಬಂದ ಸ್ಪರ್ಧಿಗಳು: ವಿಡಿಯೋ
Bigg Boss Kannada season 12: ಬಿಗ್ಬಾಸ್ ಕನ್ನಡ ಸೀಸನ್ 12 ತಾತ್ಕಾಲಿಕ ಹಿನ್ನಡೆ ಬಳಿಕ ಇದೀಗ ಮತ್ತೆ ಪ್ರಾರಂಭವಾಗಿದೆ. ಇಂದು ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಸ್ಪರ್ಧಿಗಳನ್ನು ಈಗಲ್ಟನ್ ರೆಸಾರ್ಟ್ನಿಂದ ಬಿಗ್ಬಾಸ್ ಮನೆಗೆ ತಂದು ಬಿಡಲಾಗಿದೆ. ಸ್ಪರ್ಧಿಗಳು ಜಾಲಿವುಡ್ ಸ್ಟುಡಿಯೋಕ್ಕೆ ವಾಪಸ್ಸಾದ ವಿಡಿಯೋ ಇಲ್ಲಿದೆ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಸೆಟ್ ನಿರ್ಮಿಸಲಾಗಿದ್ದ ಜಾಲಿವುಡ್ ಸ್ಟುಡಿಯೋ ಮಾಲಿನ್ಯ ನಿಯಮಗಳನ್ನು ಉಲ್ಲಂಘಸಿದ್ದ ಕಾರಣಕ್ಕೆ ಸ್ಟುಡಿಯೋಗೆ ಬೀಗ ಹಾಕಲಾಗಿತ್ತು. ಇದರಿಂದಾಗಿ ಬಿಗ್ಬಾಸ್ ಶೋ ಬಂದ್ ಆಗಿತ್ತು, ಸ್ಪರ್ಧಿಗಳನ್ನು ಈಗಲ್ಟನ್ ರೆಸಾರ್ಟ್ಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಜಿಲ್ಲಾಧಿಕಾರಿಗಳು ಶೋ ಪ್ರಾರಂಭಿಸಲು ಅನುಮತಿ ನೀಡಿದ್ದು, ರಾತ್ರೋರಾತ್ರಿ ಸ್ಪರ್ಧಿಗಳನ್ನು ರೆಸಾರ್ಟ್ನಿಂದ ಮತ್ತೆ ಬಿಗ್ಬಾಸ್ ಮನೆಗೆ ಕರೆತರಲಾಗಿದೆ. ಸ್ಪರ್ಧಿಗಳು ರೆಸಾರ್ಟ್ನಿಂದ ಹೊರಟು, ಬಿಗ್ಬಾಸ್ ಮನೆ ಸೇರಿಕೊಂಡ ವಿಡಿಯೋ ಇಲ್ಲಿದೆ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

