ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಸುರಿಮಳೆ; ಫ್ರಸ್ಟ್ರೇಟ್ ಆದ ಧನರಾಜ್

Updated on: Jan 03, 2025 | 8:25 AM

ಬಿಗ್ ಬಾಸ್​ನಲ್ಲಿ ಈ ವಾರ ಫನ್ ಜೋರಾಗಿಯೇ ಇತ್ತು. ಕುಟುಂಬದವರು ಬಂದ ಕಾರಣ ಎಲ್ಲರೂ ಫನ್ ಆಗಿ ವಾರ ಕಳೆದಿದ್ದಾರೆ. ಈಗ ಧನರಾಜ್ ಅವರು ದೊಡ್ಟ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಈ ಮಧ್ಯೆ ಕ್ಯಾಪ್ಟನ್ಸಿಗೆ ಫನ್ ಟಾಸ್ಕ್ ನೀಡಲಾಗಿತ್ತು. ಆ ಟಾಸ್ಕ್ ವೈರಲ್ ಆಗಿದೆ.

‘ಬಿಗ್ ಬಾಸ್​’ನಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆದಿದೆ. ಇದಕ್ಕೆ ಮುತ್ತಿನ ಟಾಸ್ಕ್​ ನೀಡಲಾಗಿತ್ತು. ಒಂದು ಕಡೆ ಲಿಪ್​ಸ್ಟಿಕ್ ಇಡಲಾಗುತ್ತದೆ. ಅದನ್ನು ತುಟಿಗೆ ಹಚ್ಚಿಕೊಂಡು ಖಾಲಿ ಹಾಳೆಯ ಮೇಲೆ ಬಂದು ತುಟಿ ಅಚ್ಚನ್ನು ಮಾಡಬೇಕು. ಈ ಟಾಸ್ಕ್ ಫನ್ ಆಗಿ ನಡೆದಿದೆ. ಎಲ್ಲಾ ಸ್ಪರ್ಧಿಗಳು ಇದನ್ನು ಎಂಜಾಯ್ ಮಾಡಿದ್ದಾರೆ. ಆ ಸಂದರ್ಭದ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More