‘ಯಾರ ಫ್ಯಾನ್ಬೇಸ್ ನೋಡಿಯೂ ಅಚ್ಚರಿ ಎನಿಸಲೇ ಇಲ್ಲ’; ತುಕಾಲಿ ಸಂತೋಷ್
Bigg Boss Kannada: ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ನಮ್ರತಾ, ಸ್ನೇಹಿತ್ ಮೊದಲಾದವರಿಗೆ ಪ್ರತಾಪ್ ಅಭಿಮಾನಿ ಬಳಗ ನೋಡಿ ಶಾಕಿಂಗ್ ಎನಿಸಿದೆ. ಆದರೆ, ತುಕಾಲಿ ಸಂತೋಷ್ಗೆ ಈ ವಿಚಾರ ಅಚ್ಚರಿ ತರಲಿಲ್ಲ.
ಡ್ರೋನ್ ಪ್ರತಾಪ್, ಸಂಗೀತಾ ಶೃಂಗೇರಿ (Sangeetha Sringeri) ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಒಳಗಿನಿಂದ ನೋಡಿದವರಿಗೆ ಅದು ತಿಳಿಯುತ್ತಿರಲಿಲ್ಲ. ಹೊರ ಬಂದ ಬಳಿಕ ಫ್ಯಾನ್ ಬೇಸ್ ನೋಡಿ ಅನೇಕರಿಗೆ ಶಾಕ್ ಆಗಿದೆ. ನಮ್ರತಾ, ಸ್ನೇಹಿತ್ ಮೊದಲಾದವರಿಗೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಶಾಕಿಂಗ್ ಎನಿಸಿದೆ. ಆದರೆ, ತುಕಾಲಿ ಸಂತೋಷ್ಗೆ ಈ ವಿಚಾರ ಅಚ್ಚರಿ ನೀಡಲಿಲ್ಲ. ಈ ಬಗ್ಗೆ ಅವರು ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ‘ನಾನು ಈಗಾಗಲೇ ಹಲವು ರಿಯಾಲಿಟಿ ಶೋಗಳನ್ನು ನೋಡಿದ್ದೇನೆ. ಎಲ್ಲದೂ ಅವರೇ ಸಂಪಾದಿಸಿದ ಅಭಿಮಾನಿ ವರ್ಗ. ಹೀಗಾಗಿ, ನನಗೆ ಯಾವುದೂ ಅಚ್ಚರಿ ಎನಿಸಲಿಲ್ಲ’ ಎಂದಿದ್ದಾರೆ ತುಕಾಲಿ ಸಂತೋಷ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 30, 2024 08:23 AM
Latest Videos