ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?

Updated on: Oct 17, 2024 | 6:28 PM

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗಿನಿಂದಲೂ ಬಿಗ್​ಬಾಸ್ ನಿಯಮಗಳನ್ನು ಗಾಳಿಗೆ ತೂರಿ ಇಷ್ಟಬಂದಂತೆ ಸ್ಪರ್ಧಿಗಳು ವರ್ತಿಸುತ್ತಿದ್ದಾರೆ. ಈಗ ಮತ್ತೊಮ್ಮೆ ಮನೆಯ ಸ್ಪರ್ಧಿಗಳು ನಾಮಿನೇಷನ್ ನಿಯಮ ಗಾಳಿಗೆ ತೂರಿದಂತೆ ಕಾಣುತ್ತಿದೆ.

ಬಿಗ್​ಬಾಸ್ ಪ್ರಾರಂಭವಾದಾಗಿನಿಂದಲೂ ಟಾಸ್ಕ್​ಗಳಿಗಿಂತಲೂ ಜಗಳ, ಗುದ್ದಾಟಗಳಿಂದಲೇ ಹೆಚ್ಚು ಸುದ್ದಿಯಾಗಿದೆ. ಲಾಯರ್ ಜಗದೀಶ್, ಮನೆಯೊಳಗೆ ಜಗಳ ಮಾಡಿಕೊಂಡು ಹೊರ ಬಂದಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇದರ ನಡುವೆ ಬಿಗ್​ಬಾಸ್ ಮನೆಯಲ್ಲಿ ಮತ್ತೆ ಟಾಸ್ಕ್, ಒಳರಾಜಕೀಯ ಪ್ರಾರಂಭವಾಗಿದೆ. ಬಿಗ್​ಬಾಸ್ ಹೊಸ ಪ್ರೋಮೋ ಬಿಡುಗಡೆ ಆಗಿದ್ದು, ಸ್ಪರ್ಧಿಗಳೆಲ್ಲ ಟಾಸ್ಕ್​ನಲ್ಲಿ ಭಾಗವಹಿಸಿದ್ದರೆ. ಜೊತೆಗೆ ನಾಮಿನೇಷನ್ ರಾಜಕೀಯ ಸಹ ಜೋರಾಗಿಯೇ ನಡೆಯುತ್ತಿದೆ. ಯಾರನ್ನು ನಾಮಿನೇಟ್ ಮಾಡಬೇಕು? ಯಾರನ್ನು ಮಾಡಬಾರದು ಎಂಬ ಬಗ್ಗೆ ಗುಂಪುಗಳಲ್ಲಿ ಚರ್ಚೆ ಆಗುತ್ತಿದೆ. ನಾಮಿನೇಷನ್ ಎಂಬುದು ವೈಯಕ್ತಿಕ ಆಯ್ಕೆ ಆಗಿರಬೇಕು ಎಂದು ಬಿಗ್​ಬಾಸ್ ತಿಳಿಸಿದ್ದರೂ ಸಹ ನಾಮಿನೇಟ್ ಮಾಡಲು ಚರ್ಚೆ ನಡೆಯುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More