ಮಂಜಣ್ಣನ ಹೊಂದಾಣಿಕೆ ಆಟಕ್ಕೆ ಮುರಿಯಿತು ಗೆಳೆತನ

|

Updated on: Nov 05, 2024 | 4:51 PM

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ಕೆಲವು ಗೆಳೆಯರಾಗಿದ್ದಾರೆ, ಕೆಲವು ಗುಂಪುಗಳಾಗಿವೆ. ಆದರೆ ಇದೀಗ ಟಾಸ್ಕ್​ನ ಕಾರಣಕ್ಕೆ ಕೆಲವು ಗೆಳೆತನಗಳು ಮುರಿದು ಬಿದ್ದಿವೆ.

ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಸ್ಪರ್ಧಿಗಳ ಸಂಖ್ಯೆ ದಿನೇ-ದಿನೇ ಕಡಿಮೆ ಆಗುತ್ತಿದೆ. ಸ್ಪರ್ಧಿಗಳ ನಡುವೆ ಗೆಲ್ಲಲು ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಏನಾದರೂ ಆಗಲಿ ಗೆದ್ದೇ ಗೆಲ್ಲಬೇಕು ಎಂಬ ಹಠ ಎಲ್ಲರಲ್ಲೂ ಮೂಡಿದೆ. ಕೆಲ ಸ್ಪರ್ಧಿಗಳು ಟಾಸ್ಕ್​ನ ಕಾರಣಕ್ಕೆ ಗೆಳೆಯರನ್ನು ಬಿಟ್ಟುಕೊಟ್ಟಿದ್ದಾರೆ, ಹೊಸ ಗೆಳೆತನಗಳನ್ನು ಪ್ರಾರಂಭ ಮಾಡಿದ್ದಾರೆ. ಚೆಂಡನ್ನು ಗೋಲ್​ಗೆ ತಳ್ಳುವ ಆಟದಲ್ಲಿ ಉಗ್ರಂ ಮಂಜು ಇನ್ನೊಂದು ತಂಡದ ಜೊತೆಗೆ ಕೈಜೋಡಿಸಿ ಗೆಳೆಯರಾದ ಗೌತಮಿಗೆ ಕೈಕೊಟ್ಟಿದ್ದಾರೆ. ಇದು ಗೌತಮಿಗೆ ತೀವ್ರ ಸಿಟ್ಟು ತರಿಸಿದೆ, ಮಂಜಣ್ಣನ ಗೆಳೆತನಕ್ಕೆ ಗೌತಮಿ ಎಳ್ಳು ನೀರು ಬಿಟ್ಟಂತೆ ತೋರುತ್ತಿದೆ. ಇಲ್ಲಿದೆ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ