ಸಂಡೂರು ಕ್ಷೇತ್ರದಿಂದ ಅನ್ನಪೂರ್ಣ ತುಕಾರಾಂ ಸ್ಪರ್ಧಿಸಬೇಕೆಂದು ಜನ ತೀರ್ಮಾನಿಸಿದ್ದಾರೆ: ಶಿವಕುಮಾರ್

ಮಾಜಿ ಸಚಿವ ಬಿ ನಾಗೇಂದ್ರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಶಿವಕುಮಾರ್, ಅವರಿಂದ ಯಾವುದೇ ತಪ್ಪಾಗಿಲ್ಲ, ಯಾವುದೇ ಸಂಸ್ಥೆಯ ಹಣವನ್ನು ಅವರು ದುರುಪಯೋಗ ಮಾಡಿಕೊಂಡಿಲ್ಲ, ಒಂದು ರಾಜಕೀಯ ಷಡ್ಯಂತ್ರಕ್ಕೆ ಅವರು ಬಲಿಯಾಗಿದ್ದಾರೆ ಎಂದು ಹೇಳಿದರು.

Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 05, 2024 | 6:01 PM

ಬಳ್ಳಾರಿ: ಸಂಡೂರು ಕ್ಷೇತ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಪರ ಇಂದು ಪ್ರಚಾರ ಮಾಡಿದ ಡಿಕೆ ಶಿವಕುಮಾರ್, ತುಕಾರಾಂ ಅವರು ಸಂಡೂರು ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದಾರೆ, ತಾನು ನಡೆಸಿದ ಸಮೀಕ್ಷೆಯಲ್ಲೂ ಅದು ಗೊತ್ತಾಗಿದೆ, ಈಗ ಅವರು ಸಂಸತ್ತಿಗೆ ಆಯ್ಕೆಯಾಗಿರುವುದರಿಂದ ಇಲ್ಲಿನ ವಿಧಾನಸಭಾ ಕ್ಷೇತ್ರವನ್ನು ಅವರ ಪತ್ನಿ ಅನ್ನಪೂರ್ಣ ಅವರೇ ಪ್ರತಿನಿಧಿಸಬೇಕೆಂದು ಜನರೇ ತೀರ್ಮಾನಿಸಿದ್ದಾರೆ, ಇಡೀ ಸರ್ಕಾರ ಅವರ ಬೆನ್ನಿಗಿದೆ, ಹಾಗಾಗಿ ಅವರನ್ನು ಆರಿಸಿ ವಿಧಾನಸೌಧಕ್ಕೆ ಕಳಿಸಿಕೊಡಿ ಎಂದು ಮನವಿ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಕಳೆದ 16 ತಿಂಗಳಲ್ಲಿ ರಾಮನಗರ ರಸ್ತೆಗಳಿಗೆ ಒಂದು ಹಿಡಿಮಣ್ಣು ಹಾಕೋದು ಶಿವಕುಮಾರ್​ಗೆ ಆಗಿಲ್ಲ: ಅಶೋಕ