ಕುಮಾರಸ್ವಾಮಿ ಭೇಟಿಯಾಗಲು ವೆಸ್ಟೆಂಡ್ ಹೋಟೆಲ್ ಹೋಗಲು ಜೆಡಿಎಸ್ ಕಾರ್ಯಕರ್ತರಿಗೆ ಅವಕಾಶವಿರಲಿಲ್ಲವೇ? ಸುರೇಶ್
ದುಡ್ಡು ಕೊಟ್ಟು ಜನರಿಂದ ವೋಟು ಹಾಕಿಸಿಕೊಳ್ಳೋಣ, ಹಣ ಎಷ್ಟು ಬೇಕಾದರೂ ಖರ್ಚಾಗಲಿ ಎಂದು ಕುಮಾರಸ್ವಾಮಿ ಹೇಳಿದ್ದಾರಂತೆ, ಅವರಿಂದ ಹಣ ತೆಗೆದುಕೊಳ್ಳಿ ಬೇಡ ಅನ್ನಲ್ಲ, ಆದರೆ ವೋಟು ಮಾತ್ರ ಯೋಗೇಶ್ವರ್ಗೆ ಹಾಕಿ, ಕುಮಾರಣ್ಣನ ನೋಟು ಯೋಗೇಶ್ವರ್ಗೆ ವೋಟು ಅನ್ನೋದನ್ನು ನೆನಪಿಟ್ಟುಕೊಳ್ಳಿ ಎಂದು ಸುರೇಶ್ ಹೇಳಿದರು.
ರಾಮನಗರ: ಚನ್ನಪಟ್ಟಣ ಉಪ ಚುನಾವಣೆಗಾಗಿ ಇಂದು ಕ್ಷೇತ್ರದ ಮೆಣಸಿಗನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪರ ಪ್ರಚಾರ ಮಾಜಿ ಸಂಸದ ಡಿಕೆ ಸುರೇಶ್, ನೀವು ಎರಡು ಬಾರಿ ವಿಧಾನಸಭೆಗೆ ಆರಿಸಿ ಕಳಿಸಿದ ಹೆಚ್ ಡಿ ಕುಮಾರಸ್ವಾಮಿಯವರು ಒಮ್ಮೆ ಮುಖ್ಯಮಂತ್ರಿ ಕೂಡ ಅಗಿದ್ದರು, ಅದರೆ ಯಾಕೆ ಅವರು ಒಮ್ಮೆಯೂ ನಿಮ್ಮ ಕಷ್ಟಸುಖ ಕೇಳಲು ಬರಲಿಲ್ಲ? ನಿಮ್ಮ ಸಮಸ್ಯೆಗಳನ್ನು ಜೆಡಿಎಸ್ ಕಾರ್ಯಕರ್ತರು ಯಾಕೆ ಅವರಲ್ಲಿಗೆ ತೆಗೆದುಕೊಂಡು ಹೋಗಲಿಲ್ಲ? ವೆಸ್ಟ್ ಎಂಡ್ ಹೋಟೆಲ್ಗೆ ಹೋಗಿ ಕುಮಾರಸ್ವಾಮಿಯವರನ್ನು ಭೇಟಿಯಾಗುವ ಅನುಮತಿ ಜೆಡಿಎಸ್ ಕಾರ್ಯಕರ್ತರಿಗೆ ಇರಲಿಲ್ಲವೇ ಎಂದು ವ್ಯಂಗ್ಯವಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಆಂಬ್ಯುಲೆನ್ಸ್ನಲ್ಲಿ ಪ್ರಚಾರ: ದೇವೇಗೌಡ ಕುರಿತ ಡಿಕೆ ಸುರೇಶ್ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ಹೀಗಿತ್ತು ನೋಡಿ