ಪತ್ನಿ ಮಾನಸಾ ಬಗ್ಗೆ ನೆಗೆಟಿವ್ ಟ್ರೋಲ್; ನೇರವಾಗಿ ಪ್ರತಿಕ್ರಿಯೆ ನೀಡಿದ ತುಕಾಲಿ ಸಂತೋಷ್
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಿಂದ ಹೊರಬಂದಿರುವ ಮಾನಸಾ ಅವರು ಸಂದರ್ಶನ ನೀಡಿದ್ದಾರೆ. ಅವರ ಜೊತೆ ಪತಿ ತುಕಾಲಿ ಸಂತೋಷ್ ಕೂಡ ಭಾಗಿ ಆಗಿದ್ದಾರೆ. ದೊಡ್ಮನೆಯಲ್ಲಿ ಇದ್ದಾಗ ಮಾನಸಾ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಅಂತಹ ನೆಗೆಟಿವ್ ಟ್ರೋಲ್ಗಳ ಬಗ್ಗೆ ತುಕಾಲಿ ಸಂತೋಷ್ ಪ್ರತಿಕ್ರಿಯೆ ನೀಡಿದ್ದಾರೆ.
‘ಮಾನಸಾ ಬಗ್ಗೆ ಜನರು ಮಾಡಿದ ಟ್ರೋಲ್ಗಳನ್ನು ನಾನು ಎಂಜಾಯ್ ಮಾಡಿದ್ದೇನೆ. ನಮ್ಮ ಕಾಲು ಎಳೆದು ಇನ್ನೊಬ್ಬರು ಕಾಮಿಡಿ ಮಾಡುತ್ತಾರೆ ಎಂದಾಗ ಅದನ್ನು ಸ್ವೀಕರಿಸುವ ಮನೋಭಾವ ನಮ್ಮಲ್ಲಿ ಇರಬೇಕು. ನನ್ನ ಹೆಂಡತಿ ಹಂದಿ ಆದರೆ, ನಾನು ಅವಳಿಗೆ ಹೆಗ್ಗಣ. ಹಂದಿ ಮತ್ತು ಮಾನಸಾ ಫೋಟೋವನ್ನು ನಮ್ಮ ಮನೆಯಲ್ಲಿ ಫ್ರೇಮ್ ಹಾಕಿಸುತ್ತೇನೆ. ಹಂದಿ ಎಂದರೆ ವಿಷ್ಣು ಸ್ವರೂಪ’ ಎಂದು ತುಕಾಲಿ ಸಂತೋಷ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos