ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು

Updated on: Jan 02, 2025 | 4:10 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ನಲ್ಲಿ ಸ್ಪರ್ಧಿಗಳ ಮನೆ ಸದಸ್ಯರು ಬಿಗ್​ಬಾಸ್ ಮನೆಗೆ ಬರುತ್ತಿದ್ದಾರೆ. ಹಲವು ಸ್ಪರ್ಧಿಗಳ ಕುಟುಂಬದವರು ಈಗಾಗಲೇ ಮನೆಗೆ ಬಂದಿದ್ದಾರೆ. ಗುರುವಾರದ ಎಪಿಸೋಡ್​ನಲ್ಲಿ ಹನುಮಂತನ ಪೋಷಕರು ಮಗನ ನೋಡಲು ಬಿಗ್​ಬಾಸ್​ಗೆ ಬಂದಿದ್ದಾರೆ. ಮಗನಿಗಾಗಿ ಬುತ್ತಿ ಕೊಂಡು ತಂದಿದ್ದಾರೆ.

ಬಿಗ್​ಬಾಸ್ ಸೀಸನ್ 11 ಆರಂಭವಾದಾಗ ಪ್ರತಿದಿನ ಜಗಳಗಳೇ ತುಂಬಿರುತ್ತಿದ್ದವು. ಲಾಯರ್ ಜಗದೀಶ್ ಇನ್ನೂ ಕೆಲವರು ಇದ್ದಾಗಂತೂ ಬರೀ ಜಗಳವೇ ತುಂಬಿರುತ್ತಿತ್ತು. ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಹನುಮಂತ ಬಿಗ್​ಬಾಸ್ ಮನೆಯ ವಾತಾವರಣವನ್ನೇ ಬದಲಾಯಿಸಿಬಿಟ್ಟಿದ್ದ. ಹನುಮಂತ, ಮನೆಗೆ ಆರಂಭದಲ್ಲಿ ತನ್ನ ಅಮಾಯಕತೆ, ಪ್ರತಿಭೆಯಿಂದ ಪ್ರೇಕ್ಷಕರನ್ನು ಮತ್ತು ಮನೆ ಸದಸ್ಯರನ್ನು ಸೆಳೆದಿದ್ದ. ಆದರೆ ಆ ನಂತರ ಮನೆಯವರ ನೆನಪಾಗಿ ಮಂಕಾಗಿದ್ದ. ಇದೀಗ ಬಿಗ್​ಬಾಸ್ ಮನೆಗೆ ಹನುಮಂತನ ಮನೆಯವರು ಆಗಮಿಸಿದ್ದಾರೆ. ಹನುಮಂತನ ಪೋಷಕರು ಮಗನಿಗಾಗಿ ಬುತ್ತಿ ಕಟ್ಟಿಕೊಂಡು ಮನೆಗೆ ಬಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More