ದೇವರಿಗೆ ಹಾಡು ಹಾಡಿ ಪ್ರಾರ್ಥಿಸಿದ ಕಿರಣ್ ಶಾಸ್ತ್ರಿ; ಏನೇ ಮಾಡಿದರೂ ಬೀಳಲಿಲ್ಲ ಹೂವು

Updated on: Sep 23, 2026 | 8:28 AM

ಬಿಗ್ ಬಾಸ್ ಮನೆಯಲ್ಲಿ ಕಿರಣ್ ಶಾಸ್ತ್ರಿ ದೇವರಿಗೆ ಪೂಜೆ ಮಾಡಿ ಹೂವು ಪ್ರಸಾದಕ್ಕಾಗಿ ಪ್ರಾರ್ಥಿಸಿದ್ದಾರೆ. ತಾವು ಚೆನ್ನಾಗಿ ಆಟವಾಡಿದ್ದರೆ ಒಂದು ಹೂವು ಕೆಳಗೆ ಬೀಳಿಸು ಎಂದು ಬೇಡಿಕೊಂಡರೂ ಹೂವು ಬೀಳಲಿಲ್ಲ. ಕೊನೆಗೆ ನೆಲದ ಮೇಲೆ ಮಲಗಿ ಪ್ರಾರ್ಥಿಸಿದ ಶಾಸ್ತ್ರಿಯವರ ಈ ನಡೆ ಮನೆಯವರಿಗೆ ನಗು ತರಿಸಿದೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ಬಿಗ್ ಬಾಸ್ ಕನ್ನಡ ಮನೆಯಲ್ಲಿ ನಿತ್ಯವೂ ವಿಭಿನ್ನ ಹಾಗೂ ಸ್ವಾರಸ್ಯಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಮನೆಯಲ್ಲಿರುವ ಕಿರಣ್ ಶಾಸ್ತ್ರಿ ಅವರು ದೇವರಿಗೆ ಪೂಜೆ ಸಲ್ಲಿಸಿ, ಹೂವು ಪ್ರಸಾದಕ್ಕಾಗಿ ಪ್ರಾರ್ಥಿಸುತ್ತಿರುವ ತಮಾಷೆಯ ಸನ್ನಿವೇಶವೊಂದು ಎದುರಾಗಿದೆ. ದೇವತೆಯ ವಿಗ್ರಹದ ಮುಂದೆ ನಿಂತು ಕಿರಣ್ ಶಾಸ್ತ್ರಿ ಅವರು, ‘ನಾನು ಆಡಿದ ಆಟ ಚೆನ್ನಾಗಿತ್ತು ಅನ್ನೋದಕ್ಕೂ ಒಂದು ಹೂವು ಕೊಡು. ಮುಂದೆ ನನ್ನ ರಕ್ಷಣೆ ಮಾಡ್ತೀಯಾ ಅನ್ನೋದಕ್ಕೂ ಒಂದು ಹೂವು ಕೊಡು’ ಎಂದು ಭಕ್ತಿಯಿಂದ ಕೇಳಿಕೊಂಡರು.

ಶಾಸ್ತ್ರಿಯವರು ಎಷ್ಟು ಹೊತ್ತು ಪ್ರಾರ್ಥಿಸಿದರೂ ವಿಗ್ರಹದಿಂದ ಹೂವು ಕೆಳಗೆ ಬೀಳಲೇ ಇಲ್ಲ. ಇದರಿಂದ ಕೊನೆಗೆ ನೆಲದ ಮೇಲೆ ಮಲಗಿದ ಕಿರಣ್ ಶಾಸ್ತ್ರಿ, ‘ಮಮ್ಮಿ ಗಿವ್ ಮಿ ಒನ್ ಫ್ಲವರ್ ಪ್ಲೀಸ್.. ಇಷ್ಟೆಲ್ಲಾ ಹಾಡು ಹಾಡಿದರೂ ಒಂದು ಹೂವು ಕೊಡೋಕೆ ಕಷ್ಟನಾ?’ ಎಂದು ದೇವರೆದುರು ಬೇಡಿಕೊಂಡಿದ್ದಾರೆ. ಇದನ್ನು ಕಂಡ ಇತರ ಸ್ಪರ್ಧಿಗಳು ತಮಾಷೆಯಾಗಿ ನಕ್ಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Sep 23, 2026 08:27 AM
Loading...
Unable to load recommendations.
Follow Us