‘ನಮಗೆ ಬೇಕಾದ ರೀತಿಯಲ್ಲಿ ಇರೋಕೆ ಬಿಡಿ’; ಮನವಿ ಮಾಡಿಕೊಂಡ ನಮ್ರತಾ ಗೌಡ

Updated on: Feb 02, 2024 | 10:23 AM

ನಮ್ರತಾ ಗೌಡ ಸಿಕ್ಕಾಪಟ್ಟೆ ಜಗಳ ಆಡುತ್ತಾರೆ ಎನ್ನುವ ಆರೋಪ ಇದೆ. ಅವರು ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಕಿರುಚಾಡಿದ್ದು ಇದೆ. ಇದಕ್ಕೆ ನಮ್ರತಾ ಉತ್ತರ ನೀಡಿದ್ದಾರೆ. ‘ನಮಗೆ ಸಮಾನ ಹಕ್ಕು ಬೇಕು’ ಎಂದು ಅವರು ವಾದ ಮುಂದಿಟ್ಟಿದ್ದಾರೆ. ನಮ್ರತಾ ಅವರು ಫಿನಾಲೆ ವೀಕ್​ಗೂ ಹಿಂದಿನ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದರು. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಹಲವು ಶೋಗಳಲ್ಲಿ ಅವರು ಡ್ಯಾನ್ಸ್ ಮಾಡಿದ್ದಾರೆ.

ನಮ್ರತಾ ಗೌಡ (Namratha Gowda) ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಸಾಕಷ್ಟು ಚರ್ಚೆಯಲ್ಲಿ ಇದ್ದರು. ಅನೇಕರು ಅವರನ್ನು ಟ್ರೋಲ್ ಮಾಡಿದ್ದರು. ನಮ್ರತಾ ಸಿಕ್ಕಾಪಟ್ಟೆ ಜಗಳ ಆಡುತ್ತಾರೆ, ಅವರು ಸಿಕ್ಕಾಪಟ್ಟೆ ಕಿರುಚುತ್ತಾರೆ ಎನ್ನುವ ಆರೋಪವನ್ನು ಕೆಲವರು ಮಾಡಿದ್ದಿದೆ. ಇದಕ್ಕೆ ನಮ್ರತಾ ಉತ್ತರ ನೀಡಿದ್ದಾರೆ. ‘ನಾವು ಮಹಿಳೆಯರು. ನಮಗೂ ಭಾವನೆಗಳು ಇರುತ್ತವೆ. ಪುರುಷ ಸ್ಪರ್ಧಿಗೆ ಸರಿಯಾಗಿ ನಿಂತು ಫೈಟ್ ಮಾಡಿದ್ದೇವೆ. ಹೀಗಿರುವಾಗ ಮಹಿಳೆಯರು ಯಾವಾಗಲೂ ಸೈಲೆಂಟ್ ಆಗಿರಬೇಕು ಎಂದು ಏಕೆ ನಿರೀಕ್ಷಿಸುತ್ತೀರಾ? ನಾವು ಸಮಾನರು ಎಂದು ಸಾಬೀತುಪಡಿಸಿದ ಬಳಿಕ ನಮಗೆ ಬೇಕಾದ ರೀತಿಯಲ್ಲಿ ಇರೋಕೆ ಬಿಡಿ’ ಎಂದು ನಮ್ರತಾ ಗೌಡ ಕೇಳಿಕೊಂಡಿದ್ದಾರೆ. ನಮ್ರತಾ ಅವರು ಫಿನಾಲೆ ವೀಕ್​ಗೂ ಹಿಂದಿನ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದರು. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಹಲವು ಶೋಗಳಲ್ಲಿ ಅವರು ಡ್ಯಾನ್ಸ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Feb 02, 2024 08:16 AM
Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More