‘ನಮ್ಮಪ್ಪನಾಣೆ ನಿಮಗೆ ಪಾಠ ಕಲಿಸೋಕೆ ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ

Updated on: Oct 10, 2026 | 2:43 PM

ಬಿಗ್​​ಬಾಸ್​​ನ ಹೊಸ ಪ್ರೋಮೊ ರಿಲೀಸ್ ಆಗಿದ್ದು, ಸುದೀಪ್ ಅವರು ಶನಿವಾರದ ಎಪಿಸೋಡಿಗೆ ಸಂಪೂರ್ಣ ಸಜ್ಜಾಗಿ ಬಂದಿದ್ದಾರೆ. ದಾಖಲೆಗಳ ಸಮೇತ ಎಂಟ್ರಿ ಕೊಟ್ಟಿದ್ದಾರೆ. ಮಾತ್ರವಲ್ಲ ಸ್ಪರ್ಧಿಗಳನ್ನುದ್ದೇಶಿಸಿ, ‘ನಿಮಗೆ ಹೇಗೆ ಪಾಠ ಕಲಿಸಬೇಕು ಅಂತ ನಮ್ಮಪ್ಪನಾಣೆ ನನಗೆ ಗೊತ್ತಿದೆ’ ಎಂದು ಗರಂ ಆಗಿ ಹೇಳಿದ್ದಾರೆ. ಒಟ್ಟಾರೆ ಇಂದಿನ (ಶನಿವಾರ)ದ ಎಪಿಸೋಡ್​​ ಭರ್ಜರಿಯಾಗಿರಲಿದೆ ಎಂಬುದಂತೂ ಖಾತ್ರಿ. ಪ್ರೋಮೊ ಇಲ್ಲಿದೆ ನೋಡಿ....

ಸುದೀಪ್, ಬಿಗ್​​ಬಾಸ್ ವೇದಿಕೆ ಮೇಲೆ ಸಾಕಷ್ಟು ಬಾರಿ ಗರಂ ಆಗಿದ್ದಾರೆ, ಸ್ಪರ್ಧಿಗಳ ತಪ್ಪುಗಳನ್ನು ಕಠಿಣ ಪದಗಳನ್ನು ಬಳಸಿ ಟೀಕೆ, ವಿಮರ್ಶೆಗಳನ್ನು ಮಾಡಿದ್ದಾರೆ. ಆದರೆ ಅವರು ಸಂಪೂರ್ಣ ತಾಳ್ಮೆ ಕಳೆದುಕೊಂಡು ಮಾತನಾಡಿದ್ದು ಇಲ್ಲ. ಆದರೆ ಈ ಬಾರಿ ಅದರ ಮುನ್ಸೂಚನೆ ಸಿಗುತ್ತಿದೆ. ಬಿಗ್​​ಬಾಸ್​​ನ ಹೊಸ ಪ್ರೋಮೊ ರಿಲೀಸ್ ಆಗಿದ್ದು, ಸುದೀಪ್ ಅವರು ಶನಿವಾರದ ಎಪಿಸೋಡಿಗೆ ಸಂಪೂರ್ಣ ಸಜ್ಜಾಗಿ ಬಂದಿದ್ದಾರೆ. ದಾಖಲೆಗಳ ಸಮೇತ ಎಂಟ್ರಿ ಕೊಟ್ಟಿದ್ದಾರೆ. ಮಾತ್ರವಲ್ಲ ಸ್ಪರ್ಧಿಗಳನ್ನುದ್ದೇಶಿಸಿ, ‘ನಿಮಗೆ ಹೇಗೆ ಪಾಠ ಕಲಿಸಬೇಕು ಅಂತ ನಮ್ಮಪ್ಪನಾಣೆ ನನಗೆ ಗೊತ್ತಿದೆ’ ಎಂದು ಗರಂ ಆಗಿ ಹೇಳಿದ್ದಾರೆ. ಒಟ್ಟಾರೆ ಇಂದಿನ (ಶನಿವಾರ)ದ ಎಪಿಸೋಡ್​​ ಭರ್ಜರಿಯಾಗಿರಲಿದೆ ಎಂಬುದಂತೂ ಖಾತ್ರಿ. ಪ್ರೋಮೊ ಇಲ್ಲಿದೆ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More