ಗಗನ್ vs ಯಶಸ್: ಪತ್ರ ಪಡೆಯಲು ಟಫ್ ಟಾಸ್ಕ್ ಕೊಟ್ಟ ಬಿಗ್ ಬಾಸ್
ಬಿಗ್ ಬಾಸ್ ಮನೆಯಲ್ಲಿ ಪ್ರೀತಿಪಾತ್ರರ ಸಂದೇಶ ಪಡೆಯಲು ಸ್ಪರ್ಧಿಗಳಿಗೆ ಹೊಸ ಹಾಗೂ ಕಠಿಣ ಸವಾಲು ಎದುರಾಗಿದೆ. ಕಂಬದ ಮೇಲೆ ನಿಂತು ನಡೆಸುವ ಈ ಕಠಿಣ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಪಡುತ್ತಿರುವ ಪಾಡು ಹಾಗೂ ಆಟದ ರೋಚಕ ಕ್ಷಣಗಳು ಪ್ರೇಕ್ಷಕರಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ.
ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟದ ರೋಚಕತೆ ಹೆಚ್ಚಾಗುತ್ತಿದೆ. ಈ ವಾರದಲ್ಲಿ ಮನೆಯ ಸದಸ್ಯರಿಗೆ ತಮ್ಮ ಮನೆಯವರ ಪತ್ರವನ್ನು ಪಡೆದುಕೊಳ್ಳಲು ಟಾಸ್ಕ್ ನೀಡಲಾಗುತ್ತಿದೆ. ಆದರೆ ಇದು ಸುಲಭವಾಗಿರಲಿಲ್ಲ. ಬಿಗ್ ಬಾಸ್ ನೀಡುವ ಕಠಿಣ ಸವಾಲುಗಳನ್ನು ಎದುರಿಸಿ ಗೆದ್ದರೆ ಮಾತ್ರ ಪತ್ರ ಪಡೆಯಲು ಸಾಧ್ಯ ಎಂಬ ನಿಯಮ ರೂಪಿಸಲಾಗಿದೆ.
ಮನೆಯಲ್ಲಿ ಈಗ ಗಗನ್ ಹಾಗೂ ಯಶಸ್ಗೆ ಪತ್ರ ಪಡೆಯಲು ಟಾಸ್ಕ್ ಒಂದನ್ನು ನೀಡಲಾಗಿದೆ. ಇವರ ಪರವಾಗಿ ತಾಂಡವ್ ಹಾಗೂ ಧನುಷ್ ಆಡಿದ್ದಾರೆ. ಇದು ಸವಾಲಿನ ಟಾಸ್ಕ್ ಆಗಿದೆ. ಎತ್ತರದ ಕಂಬಗಳ ಮೇಲೆ ನಿಂತು, ಬೆಳಗಿನವರೆಗೆ ಬ್ಯಾಲೆನ್ಸ್ ಮಾಡಬೇಕಾದ ಕಠಿಣ ಪರೀಕ್ಷೆ ಇದಾಗಿದೆ. ಈ ಕಠಿಣ ಆಟದಲ್ಲಿ ಸ್ಪರ್ಧಿಗಳು ತಾಳ್ಮೆ ಮತ್ತು ದೈಹಿಕ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ. ಈ ಟಾಸ್ಕ್ ಅಲ್ಲಿ ಪತ್ರ ಯಾರಿಗೆ ಸಿಗುತ್ತದೆ ಎನ್ನುವ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬೆಂಗಳೂರು: ಹೊಯ್ಸಳ ನಗರ ಪಬ್ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ
ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ
ಹಿರಿಯೂರು ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು

