AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೆಟರ್ ಪಡೆಯಲು ಜಗದೀಶ್​ಗೆ ಮತ್ತೊಂದು ಅವಕಾಶ: ಶುರುವಾಯ್ತು ರೋಚಕ ಸವಾಲು

ಲೆಟರ್ ಪಡೆಯಲು ಜಗದೀಶ್​ಗೆ ಮತ್ತೊಂದು ಅವಕಾಶ: ಶುರುವಾಯ್ತು ರೋಚಕ ಸವಾಲು

ರಾಜೇಶ್ ದುಗ್ಗುಮನೆ
|

Updated on:Nov 04, 2026 | 1:10 PM

Share

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಜಗದೀಶ್ ಹಾಗೂ ಸೋನಿಕಾಗೆ ಮನೆಯವರ ಪತ್ರ ಪಡೆಯಲು ಬಿಗ್ ಬಾಸ್ ಮತ್ತೊಂದು ಅವಕಾಶ ನೀಡಿದ್ದಾರೆ. ಕಣ್ಣಿಗೆ ಪಟ್ಟಿ ಧರಿಸಿ ಹಗ್ಗದ ಸಹಾಯದಿಂದ ಬಾಲ್ ನಿಯಂತ್ರಿಸುವ ಕಠಿಣ ಟಾಸ್ಕ್ ಆಡಲಾಗುತ್ತಿದ್ದು, ಈ ಭಾವನಾತ್ಮಕ ಸವಾಲು ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

‘ಬಿಗ್ ಬಾಸ್’ ಮನೆಯ ಪತ್ರ ಪಡೆಯುವ ರೇಸ್ ಮತ್ತಷ್ಟು ರೋಚಕ ಹಂತಕ್ಕೆ ತಲುಪಿದೆ. ಈ ಮೊದಲು ನಡೆದ ಟಾಸ್ಕ್‌ನಲ್ಲಿ ನಿರಾಸೆ ಅನುಭವಿಸಿದ್ದ ಕ್ಯಾಪ್ಟನ್ ಜಗದೀಶ್​​ಗೆ ಮನೆಯವರ ಸಂದೇಶವನ್ನು ಪಡೆದುಕೊಳ್ಳಲು ಬಿಗ್ ಬಾಸ್ ಮತ್ತೊಂದು ಸುವರ್ಣ ಅವಕಾಶವನ್ನು ನೀಡಿದ್ದಾರೆ. ಜಗದೀಶ್ ಮತ್ತು ಸೋನಿಕಾ ಅವರ ಲೆಟರ್ ಪಡೆಯಲು ಮನೆಯ ಇತರ ಸದಸ್ಯರು ಈ ಟಾಸ್ಕ್​ ಅಲ್ಲಿ ಭಾಗಿ ಭಾಗಿಯಾಗಿದ್ದಾರೆ. ಈ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಕಣ್ಣಿಗೆ ಪಟ್ಟಿ ಧರಿಸಿ, ಹಗ್ಗಗಳ ಸಹಾಯದಿಂದ ಬೋರ್ಡ್ ಮೇಲಿರುವ ಚೆಂಡನ್ನು ರಂಧ್ರಗಳಿಗೆ ಬೀಳದಂತೆ ಕಾಪಾಡುತ್ತಾ ಅಂತಿಮ ಸ್ಥಾನ ತಲುಪಿಸಬೇಕಿದೆ.

ಕಣ್ಣಿಗೆ ಪಟ್ಟಿ ಧರಿಸಿದ ಸ್ಪರ್ಧಿಗಳಿಗೆ ಉಳಿದ ಸದಸ್ಯರು ಮಾರ್ಗದರ್ಶನ ನೀಡುತ್ತಿದ್ದು, ಆಟ ಸಾಕಷ್ಟು ಕುತೂಹಲದಿಂದ ಕೂಡಿದೆ. ಸಣ್ಣ ತಪ್ಪಾದರೂ ಬಾಲ್ ಕೆಳಗೆ ಬೀಳುವ ಭೀತಿ ಇರುವುದರಿಂದ ಸ್ಪರ್ಧಿಗಳು ಪ್ರತಿಯೊಂದು ಹೆಜ್ಜೆಯನ್ನೂ ಅತ್ಯಂತ ಜಾಗರೂಕತೆಯಿಂದ ಇಡುತ್ತಿದ್ದಾರೆ. ಮನೆಯವರ ಪತ್ರವನ್ನು ಪಡೆಯಲು ಜಗದೀಶ್ ಮತ್ತು ಸೋನಿಕಾ ಕಾತರದಿಂದ ಕಾಯುತ್ತಿದ್ದು, ಅವರ ಬೆಂಬಲಕ್ಕೆ ನಿಂತಿರುವ ಸಹಸ್ಪರ್ಧಿಗಳು ಈ ಕಠಿಣ ಸವಾಲಿನಲ್ಲಿ ಯಶಸ್ವಿಯಾಗುತ್ತಾರಾ ಅಥವಾ ಮತ್ತೆ ಪತ್ರ ಕೈತಪ್ಪಲಿದೆಯಾ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Nov 04, 2026 01:09 PM

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More