AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’

ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’

ಮಂಜುನಾಥ ಸಿ.
|

Updated on: Nov 28, 2024 | 3:39 PM

Share

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ಮಹಾಪ್ರಭು ಹಾಗೂ ಮಹಾರಾಣಿ ನಡುವೆ ಕಿತ್ತಾಟ ಶುರುವಾಗಿದೆ. ಇದನ್ನು ಕಂಡು ಮನೆಯ ಇತರೆ ಸದಸ್ಯರು ಹೈರಾಣಾಗಿದ್ದಾರೆ. ಕೆಲವರಿಗಂತೂ ಈ ಟಾಸ್ಕ್ ಮುಗಿದರೆ ಸಾಕು ಎನಿಸಿದೆ.

ಬಿಗ್​ಬಾಸ್ ಮನೆಯಲ್ಲಿ ಮಹಾರಾಜ-ಮಹಾರಾಣಿಯರ ನಡುವೆ ಜಗಳ ಜೋರಾಗಿದೆ. ಈ ಇಬ್ಬರ ಜಗಳದ ಮಧ್ಯೆ ಪ್ರಜೆಗಳು ಹೈರಾಣಾಗಿದ್ದಾರೆ. ಮೋಕ್ಷಿತಾ ಮಹಾರಾಣಿ ಆಗಿದ್ದಾರೆ. ಇದು ಮಹಾಪ್ರಭು ಉಗ್ರಂ ಮಂಜು ಬೇಸರಕ್ಕೆ ಕಾರಣವಾಗಿತ್ತು. ಈ ಬಗ್ಗೆ ಉರಿದು ಹೋಗಿದ್ದ ಉಗ್ರಂ ಮಂಜು, ಮೋಕ್ಷಿತಾ ಈ ಹಿಂದಿನ ಎಪಿಸೋಡ್​ನಲ್ಲಿ ಕಣ್ಣೀರು ಹಾಕಿದ್ದನ್ನು ವ್ಯಂಗ್ಯ ಮಾಡಿದ್ದಾರೆ. ಇದರಿಂದ ಕೋಪಕೊಂಡ ಮೋಕ್ಷಿತಾ, ಉಗ್ರಂ ಮಂಜು ಮಾತಿಗೆ ಥೂ ಎಂದು ಉಗಿದಿದ್ದಾರೆ. ಇದನ್ನೆಲ್ಲ ನೋಡುತ್ತಾ ಬೇಸತ್ತಿರುವ ಹನುಮ, ‘ಈ ಅಣ್ಣ-ತಂಗಿ ನಡುವೆ ಹೊಂದಾಣಿಕೆ ಇಲ್ಲ, ಇನ್ನು ಪ್ರಜೆಗಳು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಬಿಗ್​ಬಾಸ್​ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More