ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಕಳೆದ ವಾರ ನಟಿ ಹಂಸಾ ಅವರು ‘ಬಿಗ್ ಬಾಸ್ ಕನ್ನಡ 11’ ಶೋನಿಂದ ಎಲಿಮಿನೇಟ್ ಆದರು. ಬಣ್ಣದ ಲೋಕದಲ್ಲಿ ಹಲವು ವರ್ಷಗಳಿಂದ ಅವರು ಸಕ್ರಿಯರಾಗಿದ್ದಾರೆ. ಈಗ ಬಿಗ್ ಬಾಸ್ ಮೂಲಕವೂ ಗುರುತಿಸಿಕೊಂಡಿದ್ದಾರೆ. ಅವರಿಗೆ ಸಿಕ್ಕಿರುವ ಪೇಮೆಂಟ್ ಎಷ್ಟು ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಆ ಬಗ್ಗೆ ಕೇಳಿದ ನೇರ ಪ್ರಶ್ನೆಗೆ ಹಂಸಾ ಅವರು ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ.
‘ಕೆಲವೊಮ್ಮೆ ಪೇಮೆಂಟ್ನಿಂತಲೂ ಹೆಚ್ಚಾಗಿ ಶೋ ಮುಖ್ಯ ಆಗುತ್ತದೆ. ಆ ಶೋನಲ್ಲಿ ನಾವು ಇರುವುದು ಮುಖ್ಯ ಆಗುತ್ತದೆ. ನಾವು ಬೇರೆ ಬೇರೆ ರೀತಿ ಯೋಚನೆ ಮಾಡಿರುತ್ತೇವೆ. ಒಂದು ಚಾನೆಲ್ ಜೊತೆ ಸಂಬಂಧ ಉಳಿಸಿಕೊಲ್ಳುವುದು ಮುಖ್ಯ ಆಗುತ್ತದೆ. ಬಿಗ್ ಬಾಸ್ ಒಂದು ಉತ್ತಮ ವೇದಿಕೆ. ನಮ್ಮನ್ನು ನಾವು ಜನರ ನಡುವೆ ಗುರುತಿಸಿಕೊಳ್ಳಲು ಈ ಶೋ ಅಗತ್ಯ. ಬಿಗ್ ಬಾಸ್ಗೆ ಬಂದ ಬಳಿಕ ಖ್ಯಾತಿ ಹೆಚ್ಚುತ್ತದೆ. ಆ ಶೋಗೆ ಇರುವ ಶಕ್ತಿ ಇದು. ಹಾಗಾಗಿ ನಮಗೆ ಪೇಮೆಂಟ್ ಮುಖ್ಯ ಆಗುವುದಿಲ್ಲ’ ಎಂದು ಹಂಸಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
