ಬಿಗ್ ಬಾಸ್ ಎಲಿಮಿನೇಷನ್: ದೊಡ್ಮನೆಯಲ್ಲಿ ಹಂಸಾ ಜರ್ನಿ ಇಲ್ಲಿಗೆ ಮುಕ್ತಾಯ

ಬಿಗ್ ಬಾಸ್​ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದಾಗ ಹಂಸಾ ಅವರು ಸಾಕಷ್ಟು ಕಷ್ಟಪಟ್ಟಿದ್ದರು. ಸಾಧ್ಯವಾದಷ್ಟು ಗುರುತಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೂ ಕೂಡ ಅವರು ಎಲಿಮಿನೇಟ್​ ಆಗುವುದು ತಪ್ಪಲಿಲ್ಲ. ಸಾಮಾನ್ಯವಾಗಿ ಪ್ರತಿ ಭಾನುವಾರ ಎಲಿಮಿನೇಷನ್ ನಡೆಯುತ್ತದೆ. ಆದರೆ ಈ ಬಾರಿ ಸೋಮವಾರ ಎಲಿಮಿನೇಷನ್​ ಪ್ರತಿಕ್ರಿಯೆಯ ಪ್ರಸಾರ ಮಾಡಲಾಗಿದೆ.

ಬಿಗ್ ಬಾಸ್ ಎಲಿಮಿನೇಷನ್: ದೊಡ್ಮನೆಯಲ್ಲಿ ಹಂಸಾ ಜರ್ನಿ ಇಲ್ಲಿಗೆ ಮುಕ್ತಾಯ
ಹಂಸಾ
Follow us
|

Updated on: Oct 28, 2024 | 11:02 PM

ನಟಿ ಹಂಸಾ ಅವರು ಬಿಗ್ ಬಾಸ್​ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. 28ನೇ ದಿನಕ್ಕೆ ಅವರ ಜರ್ನಿ ಅಂತ್ಯವಾಗಿದೆ. ಕಳೆದ ವಾರ ಚೈತ್ರಾ ಕುಂದಾಪುರ, ಗೋಲ್ಡ್​ ಸುರೇಶ್, ಉಗ್ರಂ ಮಂಜು, ಭವ್ಯಾ, ಮೋಕ್ಷಿತಾ ಪೈ, ಹಂಸಾ, ಮಾನಸಾ ಮುಂತಾದವರು ನಾಮಿನೇಟ್ ಆಗಿದ್ದರು. ಆದರೆ ಅಂತಿಮವಾಗಿ ಹಂಸಾ ಅವರು ಎಲಿಮಿನೇಟ್​ ಆಗಬೇಕಾಯಿತು. ಡೇಂಜರ್​ ಝೋನ್​ನ ಅಂತಿಮ ಹಂತಕ್ಕೆ ಮೋಕ್ಷಿತಾ ಮತ್ತು ಹಂಸಾ ಬಂದಿದ್ದರು. ಇಬ್ಬರಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಭಾನುವಾರ (ಅ.27) ತೋರಿಸಿರಲಿಲ್ಲ. ಆದರೆ ಸೋಮವಾರದ (ಅ.28) ಸಂಚಿಕೆಯಲ್ಲಿ ಹಂಸಾ ಎಲಿಮಿನೇಟ್ ಆಗಿರುವುದು ಸ್ಪಷ್ಟವಾಗಿದೆ.

ಪ್ರತಿ ವಾರ ಎಲಿಮಿನೇಟ್ ಆದವರನ್ನು ಕಿಚ್ಚ ಸುದೀಪ್ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಆದರೆ ಇತ್ತೀಚೆಗೆ ಅವರ ತಾಯಿ ನಿಧನರಾದ್ದರಿಂದ ವೀಕೆಂಡ್ ಸಂಚಿಕೆ ನಡೆಸಿಕೊಡಲು ಸುದೀಪ್ ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಹಂಸಾ ಅವರು ವೇದಿಕೆಯಲ್ಲಿ ಸುದೀಪ್ ಜೊತೆ ಮಾತನಾಡದೇ ಬಿಗ್ ಬಾಸ್​ ಆಟವನ್ನು ಮುಗಿಸುವಂತಾಯಿತು. ಈ ಮೊದಲು ಎಲಿಮಿನೇಟ್ ಆದ ರಂಜಿತ್, ಜಗದೀಶ್ ಅವರಿಗೂ ವೇದಿಕೆಗೆ ಬರುವ ಅವಕಾಶ ಸಿಕ್ಕಿರಲಿಲ್ಲ.

ಎಲಿಮಿನೇಟ್ ಆಗುವುದಕ್ಕೂ ಮುನ್ನ ಹಂಸಾ ಅವರು ತಮ್ಮ ಇಷ್ಟು ದಿನಗಳ ಜರ್ನಿಯನ್ನು ಮೆಲುಕು ಹಾಕಿದರು. ‘ಇದು ಜೀವನಪೂರ್ತಿ ಇರುವಂತಹ ನೆನಪು. 17 ರೀತಿಯ ವ್ಯಕ್ತಿತ್ವ ಇರುವ ಜನರ ಮಧ್ಯೆ ನಾನು ಒಂದೇ ಮನೆಯಲ್ಲಿ ಇನ್ಮುಂದೆ ಎಂದಿಗೂ ಇರುವುದಿಲ್ಲ ಅನಿಸುತ್ತದೆ. ಹೊರಗಡೆಯಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡುವುದಕ್ಕೂ ಒಳಗಡೆಯಿಂದ ನೋಡೋದಕ್ಕೂ ವ್ಯತ್ಯಾಸ ಇದೆ. ಇಲ್ಲಿ ನಾವು ನಿರ್ಧಾರ ತೆಗೆದುಕೊಳ್ಳುವಾಗ ಫ್ರೆಂಡ್ಸ್​ ಹಾಗೂ ಫ್ಯಾಮಿಲಿಯ ಸಲಹೆ ಇರಲ್ಲ. ಹೊರಗೆ ಹೋದ ಬಳಿಕ ನಾನು ಮತ್ತಷ್ಟು ಸ್ಟ್ರಾಂಗ್ ಆಗುತ್ತೇನೆ. ನನಗೆ ತಾಳ್ಮೆ ಇದೆ ಎಂಬುದು ಇಲ್ಲಿಗೆ ಬಂದ ಬಳಿಕ ತಿಳಿಯಿತು’ ಎಂದಿದ್ದಾರೆ ಹಂಸಾ.

ಇದನ್ನೂ ಓದಿ: ಬಿಗ್ ಬಾಸ್ ಒಪ್ಪಂದದ ಮೇಲೆ ಅನುಮಾನ; ಸ್ಪರ್ಧಿಗಳ ಹೆಸರು ಮೊದಲೇ ಗೊತ್ತಿತ್ತು ಎಂದ ತ್ರಿವಿಕ್ರಮ್

ಹಂಸಾ ಅವರು ಎಲಿಮಿನೇಟ್ ಆಗುವಾಗ ಅವರಿಗೆ ಒಂದು ವಿಶೇಷ ಅಧಿಕಾರ ನೀಡಲಾಯಿತು. ಮುಂದಿನ ವಾರಕ್ಕೆ ಒಬ್ಬರನ್ನು ಅವರು ನೇರವಾಗಿ ನಾಮಿನೇಟ್ ಮಾಡಬಹುದು ಎಂದು ಬಿಗ್ ಬಾಸ್ ಹೇಳಿದಾಗ ಹಂಸಾ ಅವರು ಹನುಮಂತನನ್ನು ನಾಮಿನೇಟ್ ಮಾಡಿದರು. ಅದಕ್ಕೆ ಅವರು ಕಾರಣವನ್ನೂ ನೀಡಿದರು. ‘ಹನುಮಂತ ಅವರು ಈ ಮನೆಗೆ ಬಂದು 1 ವಾರ ಆಗಿದೆ. ಧನರಾಜ್ ಒಬ್ಬರನ್ನು ಬಿಟ್ಟು ಬೇರೆ ಯಾರ ಜತೆಗೂ ಹನುಮಂತ ಬೆರೆತಿಲ್ಲ. ಸಿಂಗಿಂಗ್ ಅವರ ಪ್ಲಸ್ ಪಾಯಿಂಟ್. ಆದ್ರೆ ನಾವು ಕೇಳಿದಾಗ ಮಾತ್ರ ಅವರು ಹಾಡುತ್ತಾರೆ. ಅವರಾಗಿಯೇ ಹಾಡಿನ ಮೂಲಕ ನಮಗೆ ಮನರಂಜನೆಯನ್ನು ನೀಡಿಲ್ಲ’ ಅಂತ ಹಂಸಾ ಹೇಳಿದರು. ಹಾಗಾಗಿ ಹನುಮಂತ ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪೆಟ್ರೋಲ್​ ಬಂಕ್​ನಲ್ಲಿ ಪ್ರೇಯಸಿಯನ್ನು ನೆಲಕ್ಕೆ ಕೆಡವಿ ಹೊಡೆದ ವ್ಯಕ್ತಿ
ಪೆಟ್ರೋಲ್​ ಬಂಕ್​ನಲ್ಲಿ ಪ್ರೇಯಸಿಯನ್ನು ನೆಲಕ್ಕೆ ಕೆಡವಿ ಹೊಡೆದ ವ್ಯಕ್ತಿ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ಧೈರ್ಯಂ ಸರ್ವತ್ರ ಸಾಧನಂ; ಎರಡು ಹುಲಿಗಳನ್ನು ಹೆದರಿಸಿ ಓಡಿಸಿದ ಕರಡಿ
ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
ವಾಚ್ ಕಳ್ಳತನ ಮಾಡಿದಳೆಂದು ವಿದ್ಯಾರ್ಥಿನಿ ಮೇಲೆ ವಾಲಿಬಾಲ್ ಕೋಚ್ ಹಲ್ಲೆ
ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
ಸಿಎಂ ಸ್ವಾಗತಕ್ಕೆ ಬಂದ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಿದರು
ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಗ್ಯಾರಂಟಿ ಯೋಜನೆ ಫಲಾನುಭವಿಗಳ ವಿವರ ಸ್ಟೋರ್ ಮಾಡಿಕೊಂಡಿರುವ ಈಶ್ವರ್
ಗ್ಯಾರಂಟಿ ಯೋಜನೆ ಫಲಾನುಭವಿಗಳ ವಿವರ ಸ್ಟೋರ್ ಮಾಡಿಕೊಂಡಿರುವ ಈಶ್ವರ್
ಯಡಿಯೂರಪ್ಪ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್​​ಗೆ ₹ 1000 ಕೋಟಿ: ಯತ್ನಾಳ್
ಯಡಿಯೂರಪ್ಪ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್​​ಗೆ ₹ 1000 ಕೋಟಿ: ಯತ್ನಾಳ್
ಕಾಂಗ್ರೆಸ್ ಕುತಂತ್ರದಿಂದ ನಿಖಿಲ್ ಎರಡು ಬಾರಿ ಸೋಲಬೇಕಾಯಿತು: ಕುಮಾರಸ್ವಾಮಿ
ಕಾಂಗ್ರೆಸ್ ಕುತಂತ್ರದಿಂದ ನಿಖಿಲ್ ಎರಡು ಬಾರಿ ಸೋಲಬೇಕಾಯಿತು: ಕುಮಾರಸ್ವಾಮಿ