ಕ್ಯಾಮೆರಾ ಇಟ್ಟುಕೊಂಡು ಪುನೀತ್​ಗೆ ಪ್ರ್ಯಾಂಕ್ ಮಾಡಿದ್ದ ಟಿವಿ9 ಕನ್ನಡ; ಇಲ್ಲಿದೆ ಫನ್ನಿ ವಿಡಿಯೋ

Puneeth Rajkumar Death Anniversary: ಪುನೀತ್ ರಾಜ್ ಕುಮಾರ್ ಅವರು ಇಲ್ಲದೆ ಮೂರು ವರ್ಷ ಆಗಿದೆ. ಈ ಮೊದಲು ಟಿವಿ9 ಕನ್ನಡದಿಂದ ಮಾಡಲಾದ ಒಂದು ಮೋಜಿನ ಪ್ರಾಂಕ್ ಅನ್ನು ಇಲ್ಲಿ ನೆನಪಿಸಿಕೊಳ್ಳೋಣ. ಅವರ ಗೆಳೆತನದ ಸ್ವಭಾವ ಮತ್ತು ನಗು ಎಲ್ಲರ ಮನಸ್ಸಿನಲ್ಲಿ ಉಳಿದಿದೆ. ಪುನೀತ್ ರಾಜ್ ಕುಮಾರ್ ಅವರ ನೆನಪು ಯಾವಾಗಲೂ ನಮ್ಮೊಂದಿಗೆ ಇರುತ್ತದೆ.

ಕ್ಯಾಮೆರಾ ಇಟ್ಟುಕೊಂಡು ಪುನೀತ್​ಗೆ ಪ್ರ್ಯಾಂಕ್ ಮಾಡಿದ್ದ ಟಿವಿ9 ಕನ್ನಡ; ಇಲ್ಲಿದೆ ಫನ್ನಿ ವಿಡಿಯೋ
ಪುನೀತ್
Follow us
| Updated By: ರಾಜೇಶ್ ದುಗ್ಗುಮನೆ

Updated on:Oct 29, 2024 | 9:21 AM

ಪುನೀತ್ ರಾಜ್​ಕುಮಾರ್ ಅವರು ನಿಧನ ಹೊಂದಿ ಇಂದಿಗೆ (ಅಕ್ಟೋಬರ್ 29) ಮೂರು ವರ್ಷಗಳು ತುಂಬಿವೆ. ಅವರು ಇಲ್ಲ ಎಂಬ ನೋವು ಎಲ್ಲರನ್ನೂ ಅತಿಯಾಗಿ ಕಾಡುತ್ತಿದೆ. ಅದು ಯಾವಾಗಲೂ ಮರೆ ಆಗುವಂತದ್ದು ಅಲ್ಲವೇ ಅಲ್ಲ. ಪುನೀತ್ ರಾಜ್​ಕುಮಾರ್ ಅವರಿಗೆ ಟಿವಿ9 ಕನ್ನಡದವರು ಒಮ್ಮೆ ಪ್ರ್ಯಾಂಕ್ ಮಾಡಿದ್ದರು. ಈ ವಿಡಿಯೋನ ಈಗ ನಿಮ್ಮ ಮುಂದೆ ಇಡಲಾಗುತ್ತಿದೆ ನೋಡಿ.

ಪುನೀತ್ ರಾಜ್​ಕುಮಾರ್ ಅವರು ಮಾಧ್ಯಮಗಳ ಜೊತೆ ತುಂಬಾನೇ ಫ್ರೆಂಡ್ಲಿ ಆಗಿ ಇರುತ್ತಿದ್ದರು. ಅವರು ಏನೇ ಇದ್ದರೂ ಫನ್ ಆಗಿ ತೆಗೆದುಕೊಳ್ಳುತ್ತಿದ್ದರು. ಪುನೀತ್ ಅವರ ಈ ಗೆಳೆತನದ ಸ್ವಭಾವ ಎಲ್ಲರಿಗೂ ಇಷ್ಟ ಆಗುತ್ತಿತ್ತು. ಪುನೀತ್ ಅವರನ್ನು ಒಮ್ಮೆ ಸಂದರ್ಶನ ಮಾಡಲಾಗುತ್ತಿತ್ತು. ಆಗ ಅವರನ್ನು ಬಕ್ರಾ ಮಾಡಲಾಗಿತ್ತು.

ಪುನೀತ್ ಅವರು ಟಿವಿ9 ಜೊತೆ ಮಾತನಾಡುತ್ತಿದ್ದರು. ಆಗ ಅಲ್ಲಿಗೆ ಒಬ್ಬರು ಬಂದರು. ‘ಗೋಡಾ (ಗನ್) ತಂದಿದೀನಿ ಭಾಯ್. ಈಗ ಫೋನ್ ಮಾಡಿದ್ರಲ್ಲ. ಮಾಲು ಬೇಕು ಅಂತ. ಮಾಲು ತೆಗೆದುಕೊಂಡು ಬಂದಿದ್ದೇನೆ’ ಎಂದರು ಆ ವ್ಯಕ್ತಿ. ‘ಯಾವ ಮಾಲು? ಸಂದರ್ಶನ ನಡೆಯುತ್ತಿದೆ’ ಎಂದು ಹೇಳುತ್ತಾ ತುಂಬಾನೇ ಶಾಕ್ ಆದರು ಪುನೀತ್. ‘ಇಲ್ಲಿಯೇ ಮಾತನಾಡುತ್ತೇನೆ’ ಎಂದು ಆ ವ್ಯಕ್ತಿ ಎಂದರು. ಆ ಬಳಿಕ ಅವರನ್ನು ಹೊರಕ್ಕೆ ಕರೆದುಕೊಂಡು ಹೋಗಲಾಯಿತು. ನಂತರ ಮೈಕ್​ ಹಿಡಿದ ಆ್ಯಂಕರ್ ‘ಏಪ್ರಿಲ್ ಫೂಲ್’ ಮಾಡಿದ್ದಾಗಿ ಹೇಳಿದರು. ಆ ಬಳಿಕ ಅವರನ್ನು ಕರೆತರಲಾಯಿತು. ‘ನೀವು ಕರಿದೇ ಇದ್ದರೆ ಹೊಡೆದು ಬಿಡ್ತಿದ್ದೆ’ ಎಂದರು ಪುನೀತ್ ಸಹಾಯಕ..

ಪುನೀತ್ ರಾಜ್​ಕುಮಾರ್ ಅವರು ಅಂದು ನಕ್ಕಿದ್ದರು. ಅವರ ನಗುವನ್ನು ಎಲ್ಲರೂ ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಅವರು ನಗು ಈಗಲೂ ಅನೇಕರಿಗೆ ಕಾಡುತ್ತದೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಹೆಸರಿನ ನಗು ಕಳೆದು ಮೂರು ವರ್ಷ; ಅಂದು ನಡೆದಿದ್ದೇನು?

ಅಕ್ಟೋಬರ್ 29ರಂದು ಪುನೀತ್ ನಿಧನ ಹೊಂದಿದರು. ಅವರಿಗೆ ಹೃದಯಾಘಾತ ಆಯಿತು. ಅವರು ಇಲ್ಲ ಎಂಬುದನ್ನು ಈಗಲೂ ಫ್ಯಾನ್ಸ್ ಬಳಿ ನಂಬೋಕೆ ಆಗುತ್ತಿಲ್ಲ. ಪುನೀತ್ ನಿಧನದ ನಂತರ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಈಗಲೂ ಫ್ಯಾನ್ಸ್ ಬೇಸರ ಹೊರಹಾಕುತ್ತಿದ್ದಾರೆ. ಅವರ ಹೆಸರಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತಿವೆ. ‘ಜೇಮ್ಸ್’ ಅವರು ಹೀರೋ ಆಗಿ ನಟನೆಯ ಕೊನೆಯ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:11 am, Tue, 29 October 24

Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಗುರುಪ್ರಸಾದ್ ಕಾಲ್ ರಿಸೀವ್ ಮಾಡದೇ ಇದ್ರೂ ಯಾರಿಗೂ ಅನುಮಾನ ಬಂದಿಲ್ಲವೇಕೆ?
ಗುರುಪ್ರಸಾದ್ ಕಾಲ್ ರಿಸೀವ್ ಮಾಡದೇ ಇದ್ರೂ ಯಾರಿಗೂ ಅನುಮಾನ ಬಂದಿಲ್ಲವೇಕೆ?
ಅಡುಗೆ ವಿಚಾರಕ್ಕೆ ಜಗಳ; ಜೊತೆಗಿದ್ದವನನ್ನು ರೂಂನಲ್ಲೇ ಹೊಡೆದು ಕೊಂದ ಯುವಕ
ಅಡುಗೆ ವಿಚಾರಕ್ಕೆ ಜಗಳ; ಜೊತೆಗಿದ್ದವನನ್ನು ರೂಂನಲ್ಲೇ ಹೊಡೆದು ಕೊಂದ ಯುವಕ
ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು
ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು
ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪಟಾಕಿ ಹೊಡೆಯುತ್ತಿದ್ದ ವ್ಯಕ್ತಿ ಸಾವು
ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪಟಾಕಿ ಹೊಡೆಯುತ್ತಿದ್ದ ವ್ಯಕ್ತಿ ಸಾವು
ಚುನಾವಣೆಗೆ ಸಜ್ಜಾದ ಜಾರ್ಖಂಡ್​ನಲ್ಲಿ ಪ್ರಧಾನಿ ಮೋದಿ ಮೊದಲ ರ್ಯಾಲಿ
ಚುನಾವಣೆಗೆ ಸಜ್ಜಾದ ಜಾರ್ಖಂಡ್​ನಲ್ಲಿ ಪ್ರಧಾನಿ ಮೋದಿ ಮೊದಲ ರ್ಯಾಲಿ
ಲೋಕಾಯುಕ್ತ ನೋಟೀಸ್​​ನಿಂದ ಸಿಎಂ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದೆ!
ಲೋಕಾಯುಕ್ತ ನೋಟೀಸ್​​ನಿಂದ ಸಿಎಂ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದೆ!
ಜನರ ಕಷ್ಟ ಗೊತ್ತಿರುವ ಯೋಗೇಶ್ವರ್ ಚನ್ನಪಟ್ಟಣಕ್ಕೆ ರೆಡಿಮೇಡ್ ಗಂಡು: ಡಿಕೆಶಿ
ಜನರ ಕಷ್ಟ ಗೊತ್ತಿರುವ ಯೋಗೇಶ್ವರ್ ಚನ್ನಪಟ್ಟಣಕ್ಕೆ ರೆಡಿಮೇಡ್ ಗಂಡು: ಡಿಕೆಶಿ
ಆಗ್ರಾ ಬಳಿ ಮಿಗ್-29 ಫೈಟರ್ ಜೆಟ್ ಪತನ; ಪೈಲಟ್‌ಗಳು ಪಾರು
ಆಗ್ರಾ ಬಳಿ ಮಿಗ್-29 ಫೈಟರ್ ಜೆಟ್ ಪತನ; ಪೈಲಟ್‌ಗಳು ಪಾರು