ತಡವಾಗುತ್ತಿದೆ ಮೋಕ್ಷಿತಾ ಮದುವೆ; ಕಣ್ಣೀರು ಹಾಕುತ್ತಾ ಕಾರಣ ತಿಳಿಸಿದ ಪಾರು

ನಟಿ ಮೋಕ್ಷಿತಾ ಅವರು ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದಲ್ಲಿ ಕೆಲವು ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರ ಮದುವೆ ತಡವಾಗುತ್ತಿದೆ. ಈ ವಿಷಯವನ್ನು ಹೇಳಿಕೊಂಡು ಮೋಕ್ಷಿತಾ ಕಣ್ಣೀರು ಹಾಕಿದ್ದಾರೆ. ತಮ್ಮ ಮನೆಯವರಿಗೆ ಅವರು ಕ್ಷಮೆ ಕೇಳಿದ್ದಾರೆ. ‘ಪಾರು’ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಅವರ ಮನಸ್ಸಿನ ಒಳಗೆ ಒಂದಷ್ಟು ನೋವುಗಳಿವೆ.

ತಡವಾಗುತ್ತಿದೆ ಮೋಕ್ಷಿತಾ ಮದುವೆ; ಕಣ್ಣೀರು ಹಾಕುತ್ತಾ ಕಾರಣ ತಿಳಿಸಿದ ಪಾರು
ಮೋಕ್ಷಿತಾ
Follow us
ಮದನ್​ ಕುಮಾರ್​
|

Updated on: Oct 29, 2024 | 10:24 PM

ಎಲ್ಲರ ಮನೆಯಲ್ಲಿ ಇರುವ ರೀತಿಯೇ ನಟಿ ಮೋಕ್ಷಿತಾ ಅವರ ಮನೆಯಲ್ಲಿ ಕೂಡ ಮದುವೆಗೆ ಒತ್ತಾಯ ಮಾಡಲಾಗುತ್ತಿದೆ. ಆದರೆ ಮೋಕ್ಷಿತಾ ಅವರು ಮದುವೆಯನ್ನು ಮುಂದೂಡುತ್ತಲೇ ಬಂದಿದ್ದಾರೆ. ಈ ವಿಚಾರವನ್ನು ಅವರು ಹೊರ ಜಗತ್ತಿನಲ್ಲಿ ಹೇಳಿಕೊಂಡಿರಲಿಲ್ಲ. ಆದರೆ ಈಗ ಬಿಗ್​ ಬಾಸ್ ಮನೆಯಲ್ಲಿ ಅವರು ಈ ವಿಷಯವನ್ನು ಹೇಳಿಕೊಂಡು ಅತ್ತಿದ್ದಾರೆ. ಕನ್ಫೆಷನ್​ ರೂಮ್​ನಲ್ಲಿ ಅವರು ಎಲ್ಲವನ್ನೂ ಹೇಳಿಕೊಂಡಿದ್ದಾರೆ. ತಮ್ಮ ಮದುವೆಯನ್ನು ಮುಂದೂಡುತ್ತಾ ಬಂದಿದ್ದಕ್ಕೆ ಕಾರಣ ಏನು ಎಂಬುದನ್ನು ವಿವರಿಸುವಾಗ ಮೋಕ್ಷಿತಾ ಎಮೋಷನಲ್ ಆಗಿದ್ದಾರೆ.

‘ನಾನು ಇಲ್ಲಿಗೆ ಬರಲು ಅಮ್ಮ ಕಾರಣ. ಒಂದು ವರ್ಷದಿಂದ ಮದುವೆಗೆ ಒತ್ತಾಯ ಮಾಡುತ್ತಿದ್ದಾರೆ. ನನ್ನ ತಮ್ಮ ಫಿಸಿಕಲಿ ಚಾಲೆಂಜಿಂಗ್ ಇರುವ ಹುಡುಗ. ಹಾಗಾಗಿ ನಾನೇ ಮನೆಗೆ ಮಗ ಮತ್ತು ಮಗಳು ಆಗಿದ್ದೇನೆ. ಒಂದು ವೇಳೆ ಮದುವೆ ಆದರೆ ಮನೆಯವರನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಚಿಂತೆ ನನಗೆ ಕಾಡಿದೆ. ಆದ್ದರಿಂದ ನನಗೆ ಮದುವೆ ಇಷ್ಟ ಇಲ್ಲ. ಆ ಬಗ್ಗೆ ಗೊಂದಲದಲ್ಲಿ ಇದ್ದೇನೆ’ ಎಂದು ಮೋಕ್ಷಿತಾ ಅವರು ಹೇಳಿದ್ದಾರೆ.

‘ಮದುವೆ ಆದರೆ ಎಲ್ಲಿ ನಿಮ್ಮಿಂದ ದೂರ ಆಗ್ತೀನೋ ಎನ್ನುವ ಭಯ ಇದೆ. ಇದರಿಂದ ಮದುವೆ ಮುಂದಕ್ಕೆ ಹಾಕಿ ನಿಮಗೆ ನೋವು ಕೊಟ್ಟಿದ್ದೇನೆ. ಮದುವೆ ಆಗುವ ಹುಡುಗ ನನ್ನನ್ನು ನಿಮ್ಮಿಂದ ದೂರ ಮಾಡುತ್ತಾನೇನೋ ಎಂಬ ಭಯ ನನ್ನೊಳಗೆ ಇದೆ. ಅಮ್ಮ ಮಿಸ್ ಯೂ ಅಂತ ನಾನು ನಿನಗೆ ಯಾವತ್ತೂ ಹೇಳಿಲ್ಲ. ಆದರೆ ಈಗ ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಬಿಗ್ ಬಾಸ್​ಗೆ ಬರಬೇಕು ಎಂಬುದು ನಿಮ್ಮ ಕನಸು. ಹಾಗಾಗಿ ನಿಮಗೆ ನಿರಾಸೆ ಮಾಡಲ್ಲ’ ಎಂದು ಮೋಕ್ಷಿತಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ತ್ರಿವಿಕ್ರಂ ನೀವು ಏನು ಅಲ್ಲ ಎಂದು ಸಿಡಿದೆದ್ದ ಮೋಕ್ಷಿತಾ; ಉಗ್ರ ಸ್ವರೂಪ ತೋರಿದ ‘ಪಾರು’

ಕಳೆದ ವಾರದ ಎಲಿಮಿನೇಷನ್​ನಿಂದ ಮೋಕ್ಷಿತಾ ಅವರು ಪಾರಾಗಿದ್ದಾರೆ. ಹಂಸಾ ಜೊತೆ ಅವರು ಕೊನೇ ಹಂತದಲ್ಲಿ ಡೋಂಜರ್​ ಝೋನ್ ತಲುಪಿದ್ದರು. ಅಂತಿಮವಾಗಿ ಹಂಸಾ ಎಲಿಮಿನೇಟ್ ಆದರು. ಸೇಫ್ ಆದ ಬಳಿಕ ಮೋಕ್ಷಿತಾ ಅವರ ಆಟದ ವರಸೆ ಬದಲಾಗಿದೆ. ಈಗ ಎಲ್ಲರಂತೆ ಅವರು ಕೂಡ ಜೋರಾಗಿ ಧ್ವನಿ ಎತ್ತಲು ಶುರು ಮಾಡಿದ್ದಾರೆ. ತ್ರಿವಿಕ್ರಮ್​ಗೆ ಅವರು ಓಪನ್ ಚಾಲೆಂಜ್ ಮಾಡಿದ್ದಾರೆ. ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್​ನಲ್ಲಿ ತ್ರಿವಿಕ್ರಮ್ ಇರಬಾರದು ಎಂದು ಮೋಕ್ಷಿತಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.