AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಒಪ್ಪಂದದ ಮೇಲೆ ಅನುಮಾನ; ಸ್ಪರ್ಧಿಗಳ ಹೆಸರು ಮೊದಲೇ ಗೊತ್ತಿತ್ತು ಎಂದ ತ್ರಿವಿಕ್ರಮ್

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಂದಷ್ಟು ನಿಯಮಗಳು ಇವೆ. ಹೊಸ ಸೀಸನ್​ ಆರಂಭ ಆಗುವುದಕ್ಕೂ ಮುನ್ನ ಸ್ಪರ್ಧಿಗಳಿಗೆ ಇನ್ನುಳಿದ ಸ್ಪರ್ಧಿಗಳ ಪೂರ್ತಿ ಲಿಸ್ಟ್ ತಿಳಿದಿರಲ್ಲ ಎಂಬುದು ಎಲ್ಲರಿಗೂ ಇರುವ ನಂಬಿಕೆ. ಆದರೆ ಈ ಬಾರಿ ಆ ನಂಬಿಕೆಗೆ ಪೆಟ್ಟು ಬಂದಂತಿದೆ. ತ್ರಿವಿಕ್ರಮ್ ಅವರು ತಮಗೆ ಸ್ಪರ್ಧಿಗಳ ಲಿಸ್ಟ್ ಮೊದಲೇ ಗೊತ್ತಿತ್ತು ಎನ್ನುವ ಮೂಲಕ ವಿವಾದ ಸೃಷ್ಟಿ ಮಾಡಿದ್ದಾರೆ.

ಬಿಗ್ ಬಾಸ್ ಒಪ್ಪಂದದ ಮೇಲೆ ಅನುಮಾನ; ಸ್ಪರ್ಧಿಗಳ ಹೆಸರು ಮೊದಲೇ ಗೊತ್ತಿತ್ತು ಎಂದ ತ್ರಿವಿಕ್ರಮ್
ತ್ರಿವಿಕ್ರಮ್
ಮದನ್​ ಕುಮಾರ್​
|

Updated on: Oct 28, 2024 | 10:25 PM

Share

ಕಿರುತೆರೆ ನಟಿ ಮೋಕ್ಷಿತಾ ಅವರು ಇಷ್ಟು ದಿನ ‘ಬಿಗ್ ಬಾಸ್​ ಕನ್ನಡ 11’ ಶೋನಲ್ಲಿ ಸೈಲೆಂಟ್ ಆಗಿದ್ದರು. ಈ ವಾರ ಅವರು ಎಲಿಮಿನೇಷನ್​ನಿಂದ ಜಸ್ಟ್​ ಪಾರಾಗಿದ್ದಾರೆ. ತಾವು ಸೇಫ್ ಆಗಿರುವುದು ತಿಳಿದ ಬಳಿಕ ಅವರ ಆಟದ ವರಸೆಯೇ ಬದಲಾಗಿದೆ. ಈವರೆಗೆ ತಮ್ಮ ಬಗ್ಗೆ ಕೆಲವರು ಆಡಿದ ಮಾತುಗಳನ್ನು ಅವರು ನಿರ್ಲಕ್ಷಿಸಿದ್ದರು. ಆದರೆ ಈಗ ಆ ಎಲ್ಲ ಮಾತುಗಳಿಗೆ ತಿರುಗೇಟು ನೀಡಲು ಶುರು ಮಾಡಿದ್ದಾರೆ. ‘ಇವರೆಲ್ಲ 10 ವಾರ ಮಾತ್ರ ಇರೋದು’ ಎಂದು ಹೇಳಿದ್ದ ತ್ರಿವಿಕ್ರಮ್​ಗೆ ಮೋಕ್ಷಿತಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಬೇರೆ ವಿಷಯಗಳು ಕೂಡ ಬಹಿರಂಗ ಆಗಿವೆ.

ಮೋಕ್ಷಿತಾ ಮುಂತಾದವರು ಕೇವಲ 10 ವಾರ ಇರುತ್ತಾರೆ ಎಂದು ತ್ರಿವಿಕ್ರಮ್ ಅವರು ಉಗ್ರಂ ಮಂಜು ಬಳಿ ಹೇಳಿದ್ದರು. ಆ ವಿಷಯ ಮೋಕ್ಷಿತಾ ಅವರ ಕಿವಿಗೆ ಬಿದ್ದಿತ್ತು. ಇಷ್ಟು ದಿನ ಸುಮ್ಮನಿದ್ದ ಅವರು ಈಗ ಎಲಿಮಿನೇಷನ್​ನಿಂದ ಪಾರಾದ ಬಳಿಕ ಅದೇ ವಿಷಯ ಇಟ್ಟುಕೊಂಡು ಜಗಳ ಆರಂಭಿಸಿದ್ದಾರೆ. ಆಗ ತ್ರಿವಿಕ್ರಮ್ ಅವರ ಇನ್ನೊಂದು ಹೇಳಿಕೆ ಕೂಡ ಹಲ್​ಚಲ್​ ಎಬ್ಬಿಸಿತು.

‘ಈ ಬಾರಿ ಯಾರೆಲ್ಲ ಬಿಗ್ ಬಾಸ್​ಗೆ ಬರುತ್ತಾರೆ ಎಂಬುದು ಗೊತ್ತಾಗ ನಂತರವೇ ನಾನು ಇಲ್ಲಿಗೆ ಬರಲು ಒಪ್ಪಿದ್ದು’ ಎಂಬರ್ಥದಲ್ಲಿ ತ್ರಿವಿಕ್ರಮ್ ಅವರು ಮಾತನಾಡಿದ್ದರು. ಆ ವಿಚಾರ ಅನೇಕರಿಗೆ ಬೇಸರ ಮೂಡಿಸಿದೆ. ‘ಲಿಸ್ಟ್ ನಿಮಗೆ ಮೊದಲೇ ಗೊತ್ತಿತ್ತಾ’ ಎಂದು ಮೋಕ್ಷಿತಾ ಹಾಗೂ ಗೌತಮಿ ಅವರು ಮರುಪ್ರಶ್ನೆ ಮಾಡಿದ್ದರು. ‘ನಾನು ತಿಳಿದುಕೊಂಡೇ ಬಂದಿದ್ದು’ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ‘ಹಾಗಾದ್ರೆ ಲಿಸ್ಟ್ ಮೊದಲೇ ಕೊಡ್ತೀರಾ ಬಿಗ್ ಬಾಸ್?’ ಎಂದು ಬಿಗ್ ಬಾಸ್​ಗೆ ಇನ್ನುಳಿದವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ

ತ್ರಿವಿಕ್ರಮ್ ಹೇಳಿದ ಈ ಮಾತುಗಳಿಂದಾಗಿ ಬಿಗ್ ಬಾಸ್​ ಮೇಲೆಯೇ ಅನುಮಾನ ಮೂಡುವಂತಾಗಿದೆ. ಹಾಗಾಗಿ ಈ ಮಾತನ್ನು ಬಿಗ್ ಬಾಸ್ ಇಷ್ಟಕ್ಕೇ ಬಿಡುವುದಿಲ್ಲ ಎನಿಸುತ್ತದೆ. ಒಂದು ವೇಳೆ ಈ ವಾರಾಂತ್ಯದ ಸಂಚಿಕೆ ನಡೆಸಿಕೊಡಲು ಸುದೀಪ್ ಬಂದರೆ ಅವರು ಕೂಡ ಈ ವಿಚಾರವನ್ನು ಚರ್ಚಿಸುವ ಸಾಧ್ಯತೆ ಇರುತ್ತದೆ. ತ್ರಿವಿಕ್ರಮ್ ಅವರ ನಡೆ-ನುಡಿ ಕೆಲವರಿಗೆ ಹಿಡಿಸುತ್ತಿಲ್ಲ. ಅತಿಯಾದ ಆತ್ಮಿವಿಶ್ವಾಸದಲ್ಲಿ ಅವರು ವರ್ತಿಸುತ್ತಿದ್ದಾರೆ. ಇದರಿಂದ ಬೇರೆ ಸ್ಪರ್ಧಿಗಳಿಗೆ ಕಿರಿಕಿರಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ