ಹಂಸಾ ಎಲಿಮಿನೇಷನ್ಗೆ ಕಾರಣವಾಯ್ತು ಆ ಒಂದು ಘಟನೆ
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಹಂಸಾ ಅವರು ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾದರು. ಆದರೆ, ಕ್ಯಾಪ್ಟನ್ ಆಗಿ ಅವರ ಕಾರ್ಯಕ್ಷಮತೆ ಮತ್ತು ಜಗದೀಶ್ ಜೊತೆಗಿನ ಅವರ ಸಂಬಂಧ ಅವರ ಜನಪ್ರಿಯತೆಯ ಮೇಲೆ ಪರಿಣಾಮ ಬೀರಿತು. ಅಂತಿಮವಾಗಿ, ಅವರು ಕಡಿಮೆ ಮತಗಳನ್ನು ಪಡೆದು ಬಿಗ್ ಬಾಸ್ ಮನೆಯಿಂದ ನಿರ್ಗಮಿಸಿದರು.
‘ಹಂಸಾ ಅವರು ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಅವರಿಗೆ ಜನಪ್ರಿಯತೆ ಇದೆ. ಅವರು ಬಿಗ್ ಬಾಸ್ಗೆ ಬಂದು ಒಂದು ತಿಂಗಳ ಜರ್ನಿಯನ್ನು ಕೊನೆಗೊಳಿಸಿದ್ದಾರೆ. ಕಳೆದ ವಾರ ನಾಮಿನೇಟ್ ಆದವರ ಪೈಕಿ ಕಡಿಮೆ ಮತ ಪಡೆದು ಅವರು ಔಟ್ ಆಗಿದ್ದಾರೆ. ಬಿಗ್ ಬಾಸ್ ನಿರೂಪಣೆಯಲ್ಲಿ ಕಿಚ್ಚ ಸುದೀಪ್ ಇರಲಿಲ್ಲ. ಹೀಗಾಗಿ ಅವರ ಜೊತೆ ಮಾತನಾಡದೆ ಹಂಸಾ ಹೊರಕ್ಕೆ ಹೋಗಿದ್ದಾರೆ. ಈ ವಾರ ಅದಕ್ಕೆ ಅವಕಾಶ ಮಾಡಿಕೊಡಬಹುದು.
ಬಿಗ್ ಬಾಸ್ನಲ್ಲಿ ಮಹಿಳೆಯರು ಕ್ಯಾಪ್ಟನ್ ಆಗಲು ಒದ್ದಾಡಿದ್ದು ಇದೆ. ಕಳೆದ ಸೀಸನ್ನಲ್ಲಿ ಅದೇ ರೀತಿ ಆಗಿತ್ತು. ಆದರೆ, ಹಂಸಾ ಅವರು ವಿಶೇಷ ಸಾಧನೆ ಮಾಡಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೊದಲ ಕ್ಯಾಪ್ಟನ್ ಆದರು. ಇದು ಅವರಿಗೆ ಹೆಗ್ಗಳಿಕೆಯ ವಿಚಾರ. ಇದರ ಜೊತೆಗೆ ಅವರಿಗೆ ಇದು ಹಿನ್ನಡೆಯನ್ನೂ ತಂದಿತು ಎನ್ನಬಹುದು.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಅವರು ಮೊದಲ ಕ್ಯಾಪ್ಟನ್ ಏನೋ ಆದರು. ಆದರೆ, ಆ ಬಳಿಕ ಅವರು ಅನುಭವಿಸಿದ ಸಮಸ್ಯೆಗಳು ಒಂದೆರಡಲ್ಲ. ಕ್ಯಾಪ್ಟನ್ ಆಗುವಾಗ ನರಕವಾಸಿಗಳೆಲ್ಲರನ್ನೂ ಸ್ವರ್ಗಕ್ಕೆ ತರುತ್ತೇನೆ ಎನ್ನುವ ಭರವಸೆ ಕೊಟ್ಟಿದ್ದರು. ಆದರೆ, ಈ ಭರವಸೆ ಈಡೇರಲೇ ಇಲ್ಲ. ಇದರಿಂದ ಮನೆಯಲ್ಲಿ ಅವರ ವಿರುದ್ಧ ಅಸಮಾಧಾನ ಎದ್ದಿತ್ತು. ಕ್ಯಾಪ್ಟನ್ ಆಗಿ ಅವರು ಉಸ್ತುವಾರಿ ನಡೆಸಿಕೊಡುವಾಗ ಸಾಕಷ್ಟು ತಪ್ಪುಗಳು ನಡೆದವು. ಇದರಿಂದ ಇಡೀ ಮನೆ ಅವರ ವಿರುದ್ಧ ತಿರುಗಿ ಬಿತ್ತು. ಇವುಗಳಿಂದ ಅವರಿಗೆ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.
ಜಗದೀಶ್ ಹಾಗೂ ಹಂಸಾ ಕೆಮಿಸ್ಟ್ರಿ ಸಾಕಷ್ಟು ಗಮನ ಸೆಳೆಯಿತು. ಅವರು ಇದ್ದಷ್ಟು ದಿನ ಹಂಸಾ ಹೈಲೈಟ್ ಆದರು. ಆದರೆ, ಜಗದೀಶ್ ಹೊರ ಹೋಗುತ್ತಿದ್ದಂತೆ ಹಂಸಾ ಅವರು ಅಷ್ಟಾಗಿ ಹೈಲೈಟ್ ಆಗಲೇ ಇಲ್ಲ. ಇದು ಕೂಡ ಹಂಸಾಗೆ ಹಿನ್ನಡೆ ಉಂಟು ಮಾಡಿತು.
ಇದನ್ನೂ ಓದಿ: ಬಿಗ್ ಬಾಸ್ ಎಲಿಮಿನೇಷನ್: ದೊಡ್ಮನೆಯಲ್ಲಿ ಹಂಸಾ ಜರ್ನಿ ಇಲ್ಲಿಗೆ ಮುಕ್ತಾಯ
ಎಲಿಮಿನೇಷನ್ ಕೊನೆಯ ಹಂತದಲ್ಲಿ ಹಂಸಾ ಹಾಗೂ ಮೋಕ್ಷಿತಾ ಇದ್ದರು. ಈ ಪೈಕಿ ಮೋಕ್ಷಿತಾ ಅವರು ಉಳಿದುಕೊಂಡರೆ ಹಂಸಾ ಹೊರ ನಡೆದರು. ಅವರಿಗೆ ತಾವೇ ಹೊರ ಹೋಗುವುದು ಎನ್ನುವುದು ಮೊದಲೇ ಗೊತ್ತಿತ್ತು. ಹೀಗಾಗಿ, ನಾನೇ ಎಲಿಮಿನೇಷನ್ ಆಗುತ್ತೇನೆ ಎಂದು ಅವರು ಹೇಳುತ್ತಲೇ ಇದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.