‘ಬಿಗ್ ಬಾಸ್​ ಕನ್ನಡ ಸೀಸನ್ 11’ರಲ್ಲಿ ಕನ್ನಡದ ಖ್ಯಾತ ಕಾಮಿಡಿಯನ್?

‘ಬಿಗ್ ಬಾಸ್​ ಕನ್ನಡ ಸೀಸನ್ 11’ರಲ್ಲಿ ಕನ್ನಡದ ಖ್ಯಾತ ಕಾಮಿಡಿಯನ್?

ರಾಜೇಶ್ ದುಗ್ಗುಮನೆ
|

Updated on: Jul 17, 2024 | 8:30 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ ಸೆಪ್ಟೆಂಬರ್​​ನಲ್ಲಿ ಆರಂಭ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ವರ್ಷ ಬಿಗ್ ಬಾಸ್​ಗೆ ಯಾರೆಲ್ಲ ಬರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಕನ್ನಡದ ಖ್ಯಾತ ಕಾಮಿಡಿಯನ್ ಬಿಗ್ ಬಾಸ್​ಗೆ ಬರುತ್ತಾರೆ ಎಂದು ಹೇಳಲಾಗಿತ್ತು.

ಒಮ್ಮೆ ಸೋಶಿಯಲ್ ಮೀಡಿಯಾ, ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಖ್ಯಾತಿ ಸಿಕ್ಕರೆ ಬಿಗ್ ಬಾಸ್​ಗೆ ಅವಕಾಶ ಸಿಗುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಹೀಗಾಗಿ ಈ ವರ್ಷ ಸೀಸನ್ 11 ಆರಂಭ ಆಗುವ ಸಾಧ್ಯತೆ ಇದೆ. ಒಮ್ಮೆ ‘ಬಿಗ್ ಬಾಸ್’ ಆರಂಭ ಆದರೆ ಯಾರಿಗೆಲ್ಲ ಅವಕಾಶ ಸಿಗುತ್ತದೆ ಎನ್ನುವ ಪ್ರಶ್ನೆ ಮೂಡಿದೆ. ಮಹಿಳಾ ಪಾತ್ರಗಳ ಮೂಲಕ ಗಮನ ಸೆಳೆದಿರೋ ರಾಘು ಅವರು ಕೂಡ ಬಿಗ್ ಬಾಸ್​ಗೆ ಹೋಗುತ್ತಾರಾ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ಬಿಗ್ ಬಾಸ್ ಎಂದು ಬಂದರೆ ಅಲ್ಲಿ ಹೋಗಿ ಇರೋಕೆ ಆಗಲ್ಲ. ಬೇರೆ ಕಮಿಟ್​ಮೆಂಟ್ ಇದೆ. ಇನ್ನೂ ಸಣ್ಣ ವಯಸ್ಸು. ಸ್ವಲ್ಪ ವರ್ಷ ಬಿಟ್ಟು ಹೋಗೋಣ ಎಂದಿದ್ದೇನೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.